7

ಕಠಿಣ ಕಾನೂನು ಅಗತ್ಯ

Published:
Updated:

ಪಕ್ಷಾಂತರ ಮಾಡುವುದು ಈಗ ಸ್ವಲ್ಪ ಕಷ್ಟದ ಕೆಲಸವಾಗಿದೆ. ಅದಕ್ಕಾಗಿಯೇ ಕೆಲವು ಅಧಿಕಾರದಾಹಿ ಶಾಸಕರು ಇತ್ತೀಚಿನ ದಿನಗಳಲ್ಲಿ ‘ಪರೋಕ್ಷ ಪಕ್ಷಾಂತರ’ ಎಂಬ ವಾಮ ಮಾರ್ಗವನ್ನು ಹಿಡಿಯುತ್ತಿದ್ದಾರೆ.

ಜನರಿಂದ ಆಯ್ಕೆಯಾಗಿ, ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವ ಶಾಸಕರಿಗೆ ಮುಂದಿನ 5 ವರ್ಷಗಳ ಕಾಲ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಡಬಾರದು. ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ, ಆ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದಿದ್ದ ವ್ಯಕ್ತಿಯನ್ನು ಪ್ರತಿನಿಧಿ ಎಂದು ಘೋಷಿಸಬೇಕು

ತಮಗಿಷ್ಟ ಬಂದಾಗ ರಾಜೀನಾಮೆ ನೀಡಿ ಅದೇ ಕ್ಷೇತ್ರದಿಂದ ಬೇರೆ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದಾದರೆ ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಚುನಾವಣಾ ಆಯೋಗವು ಕಠಿಣ ಪಕ್ಷಾಂತರ ನಿಷೇಧ ಕಾನೂನುಗಳನ್ನು ರೂಪಿಸಿದರೆ ಅಧಿಕಾರದಾಹಿಗಳು ವಾಮ ಮಾರ್ಗ ಹಿಡಿಯುವುದನ್ನು ತಪ್ಪಿಸಬಹುದು.

–ಕೆ.ಎಸ್. ನಾಗರಾಜ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !