ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಮಂಗಳದಲ್ಲಿ ಗಣಿಗಾರಿಕೆ

Last Updated 13 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಕ್ಕಣ್ಣ ಬಿಟ್ಟೂ ಬಿಡದೆ ಯುಟ್ಯೂಬಿನಲ್ಲಿ ನಾಸಾದ ಚಾನೆಲ್ ನೋಡುತ್ತಿತ್ತು. ಆಮೇಲೆ ಅದೇನೋ ಕೋಡ್ ಭಾಷೆಯಲ್ಲಿ ಉಲಿಯುತ್ತ, ತಲೆತಗ್ಗಿಸಿ ಕೂತು ಬರೆಯುತ್ತಿತ್ತು.

‘ಮಂಗಳ ಗ್ರಹದಾಗೂ ಜೀವ ಇತ್ತು ಅಂತ ನಾಸಾದ ರೋವರ್ ಹೇಳೈತೆ. ಅಂದ್ರ ಅಲ್ಲೂ ಬೆಕ್ಕುಗಳಿದ್ದವು ಹೌದಿಲ್ಲೋ. ಈಗೂ ಅಲ್ಲಿ ಯಾವುದಾದರೂ ಜಾಗದಾಗೆ ಇರಬೌದು. ನಾಸಾದವ್ರಿಗೆ ಹೇಳಿ, ಮಂಗಳ ಮಾರ್ಜಾಲಗಳಿಗೆ ಈ ಕೋಡ್ ಭಾಷೆ ಕಳಿಸತೀನಿ. ಮಾರ್ಜಾಲಗಳಷ್ಟೇ ಇದನ್ನ ಡಿಕೋಡ್ ಮಾಡಾಕೆ ಆಗ್ತದ’ ಎಂದು ಘನಗಂಭೀರವಾಗಿ ಹೇಳಿತು.

‘ಎಷ್ಟರ ಶಾಣೇ ಆಗೀಯ...!’ ನಾ ಮೂಗಿನ ಮೇಲೆ ಬೆರಳಿಟ್ಟೆ. ‘ಮುಂದಿನ ಸಲ ಮಂಗಳನ ಮ್ಯಾಗೆ ನಮ್ಮ ದೇಶದ ನೌಕೆ ಇಳಿಸೋರು ಯಾರು ಗೊತ್ತದೇನು...’ ಎಂದು ಕೇಳಿತು. ನಾನು ಗೊತ್ತಿಲ್ಲೆಂದು ಕತ್ತು ಅಡ್ಡಡ್ಡ ಅಲ್ಲಾಡಿಸಿದೆ.

‘ನಮ್ಮ ಗಣಿಮಾವಂದಿರು!’

‘ಆಂ... ಇಸ್ರೊದವರು ಅಲ್ಲೇನು...’ ನಾನು ಕಕ್ಕಾಬಿಕ್ಕಿಯಾಗಿ ಕೇಳಿದೆ. ಹ್ಹೆಹ್ಹೆ ಎಂದು ನಕ್ಕ ಬೆಕ್ಕಣ್ಣ ಹತ್ತಿರ ಬಂದು ಪಿಸುಗುಟ್ಟಿತು.

‘ಅಲ್ಲಿಯ ಮಾರ್ಜಾಲಗಳಿಗೆ ಕ್ವಿಜ್ ಥರಾ ಪ್ರಶ್ನೆ ಕೇಳೀನಿ... ಕಬ್ಬಿಣದಿಂದ ಹಿಡಿದು ಚಿನ್ನ, ಪ್ಲಾಟಿನಂವರೆಗೆ ಏನೇ ಖನಿಜಗಳಿದ್ರೂ ನನಗ ಮಾಹಿತಿ ಗೊತ್ತಾಗತದ. ಅದನ್ನ ನಮ್ಮ ಬಳ್ಳಾರಿ ಗಣಿಮಾವಂದಿರಿಗೆ ಹೇಳತೀನಿ. ಅವ್ರು ಅಫ್ಗಾನಿಸ್ತಾನದಾಗ ಟ್ರಿಲಿಯನ್ ಡಾಲರ್ ಮೌಲ್ಯದ ಅದಿರು ಐತಿ ಅಂತ ಚೀನಾದವರ ಜೊತಿಗೆ ಸೇರಿಕ್ಯಂಡು ಅಲ್ಲಿಗೆ ಹೋಗೂ ಯೋಚನಿ ಮಾಡತಿದ್ರು. ನಾ ಹೇಳಿದೆ... ಅಲ್ಲಿ ಅದಿರಿನ ಗಣಿ ಮ್ಯಾಗೆ ತಾಲಿಬಾನೀಯರು ಬಂದೂಕು ಟ್ರಿಗರ್ ವತ್ತಿ ಕೂತಿರ್ತಾರ. ನಮ್ಮ ದೇಶದಾಗೆ ರಾಜಾರೋಷವಾಗಿ ಗಣಿ ಅಗೆದಂಗೆ ಅಲ್ಲಿ ಮಾಡಾಕೆ ಆಗಂಗಿಲ್ಲ. ಚೀನಾದವ್ರೂ ನಮಗ ಟೋಪಿ ಹಾಕಬೌದು. ಅದ್ರ ಬದಲಿಗೆ ಮಂಗಳ ಗ್ರಹದಾಗೆ ಗಣಿಗಾರಿಕೆ ಮಾಡಾಕೆ ಸ್ಕೆಚ್ ಹಾಕೂಣಂತ. ಗಣಿಮಾಮಾರೂ ಹ್ಞೂಂ ಅಂದಾರ. ನನಗೂ ಕಮಿಶನ್ ಸಿಗತೈತಿ...’

ಬೆಕ್ಕಣ್ಣ ಪಿಸಪಿಸನೆ ವಿವರಿಸುತ್ತಿದ್ದರೆ, ಸಂಡೂರಿನ ಗಣಿಪ್ರದೇಶದಂತಾದ ಮಂಗಳನ ಮೇಲ್ಮೈ ಕಲ್ಪಿಸಿಕೊಳ್ಳುತ್ತ ನನಗೆ ತಲೆತಿರುಗಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT