ಹರಟೆಕಟ್ಟೇಲಿ ತೆಪರೇಸಿ ಸಪ್ಪಗೆ ಕೂತಿದ್ದ. ಅವನ ಮುಖ ನೋಡಿದ ಗುಡ್ಡೆ ‘ಯಾಕೋ ಸಪ್ಪಗಿದೀಯ? ನಿನ್ನೆ ಹುಡುಗಿ ನೋಡೋಕೆ ಹೋಗಿದ್ಯಲ್ಲ, ಏನಾತು?’ ಎಂದು ಮಾತಿಗೆಳೆದ. ‘ಹುಡುಗಿ ಒಪ್ಪಲಿಲ್ಲ ಅನ್ಸುತ್ತೆ, ಮುಖ ನೋಡಿದ್ರೆ ಗೊತ್ತಾಗಲ್ವ’ ದುಬ್ಬೀರ ನಕ್ಕ.

ತೆಪರೇಸಿಗೆ ಸಿಟ್ಟು ಬಂತು, ‘ಲೇಯ್, ಹುಡುಗಿ ಒಪ್ಪದೇ ಇರೋ ಅಂಥದ್ದು ನಂಗೇನಾಗೇತಲೆ, ಹುಡುಗಿ ಅಪ್ಪ ಒಪ್ಪಲಿಲ್ಲ ಅಷ್ಟೆ’ ಎಂದ.

‘ಏನು? ಹುಡುಗಿ ಅಪ್ಪ ಒಪ್ಪಲಿಲ್ವ? ಯಾಕಂತೆ?’ ಗುಡ್ಡೆಗೆ ಆಶ್ಚರ್ಯ.

‘ಹುಡುಗಿ ಅಪ್ಪ ನನ್ನ ಏನ್ ಕೆಲ್ಸ ಮಾಡ್ತೀಯ ಅಂತ ಕೇಳಿದ್ರು. ನಾನು ಟಿ.ವಿ. ರಿಪೋಟ್ರು ಅಂದೆ. ಅದಕ್ಕೆ, ಯಾವ ಪಕ್ಷ ಅಂತ ಕೇಳೋದಾ? ನಾನು ಯಾವ ಪಕ್ಷನೂ ಅಲ್ಲ, ನಾನು ಪತ್ರಕರ್ತ ಅಂದೆ’.

‘ಆಮೇಲೆ?’

‘ಸೆಂಟ್ರಲ್ ಬಜೆಟ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದ್ರು. ನಾನು ‘ಸರಿ ಇಲ್ಲ, ದೂರದೃಷ್ಟಿ ಇಲ್ಲ, ನಿರಾಶಾದಾಯಕ’ ಅಂದೆ. ಅದಕ್ಕವರು, ನೀವು ಯಾವ ಪಕ್ಷ ಅಂತ ಗೊತ್ತಾತು, ನಿಮಗೆ ನಮ್ ಹುಡುಗಿ ಕೊಡಲ್ಲ ಅನ್ನೋದಾ?’ ತೆಪರೇಸಿ ಬೇಸರ ವ್ಯಕ್ತಪಡಿಸಿದ.

‘ಅಲೆ ಇವ್ನ, ಎಲ್ಲ ರೇಟು ‘ಏರೋ’ ಇಂಡಿಯಾ ತರ ಏರ್ತಾ ಇದ್ರೂ ನಾವು ಸುಮ್ನಿರಬೇಕಂತಾ? ಪೆಟ್ರೋಲ್ ರೇಟು ನೂರು ರೂಪಾಯಿ ಆದ್ರೆ ಅವರ ಮಗಳ್ನ ಬೈಕ್‍ನಲ್ಲಿ ಸುತ್ತಾಡಿಸೋದು ಹೆಂಗೆ ಅಂತ ಕೇಳ್ಬೇಕಿತ್ತು ನೀನು...’ ಗುಡ್ಡೆಗೂ ಸಿಟ್ಟು ಬಂತು.

‘ಹೋಗ್ಲಿ ಬಿಡೋ ತೆಪರ, ಪೆಟ್ರೋಲ್ ರೇಟು ಕಮ್ಮಿ ಆದ ಮೇಲೇ ಹುಡುಗಿ ನೋಡಿದ್ರಾತು, ತೆಲಿ ಕೆಡಿಸ್ಕಾಬೇಡ’ ದುಬ್ಬೀರ ಸಮಾಧಾನ ಮಾಡಿದ.

ಅಲ್ಲೀವರೆಗೆ ಏನೋ ಯೋಚಿಸುತ್ತಿದ್ದ ಕೊಟ್ರೇಶಿ, ‘ನಮ್ ತೆಪರೇಸಿಗೆ ಶ್ರೀಲಂಕಾದಲ್ಲಿ ಹುಡುಗಿ ನೋಡಿದ್ರೆ ಹೆಂಗೆ? ಅಲ್ಲಿ ಪೆಟ್ರೋಲ್ ರೇಟು ಬರೀ ಐವತ್ತು ರೂಪಾಯಂತೆ’ ಎಂದ.

‘ಶ್ರೀಲಂಕಾ ಯಾಕೆ, ದುಬೈನಲ್ಲಿ ನೋಡೋಣ ಬಿಡು. ಅಲ್ಲಿ ಪೆಟ್ರೋಲ್ ರೇಟು ಲೀಟರ್‌ಗೆ ಬರೀ ಹತ್ತು ರೂಪಾಯಂತೆ, ಆದ್ರೆ...’

‘ಆದ್ರೆ ಏನು?’

‘ನೀರು ಲೀಟರ್‌ಗೆ ನೂರೈವತ್ತು ರೂಪಾಯಂತೆ!’ ದುಬ್ಬೀರನ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.