ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊನ್ನೆ ಎಣಿಕೆ ಆಟ

Last Updated 3 ಏಪ್ರಿಲ್ 2019, 20:06 IST
ಅಕ್ಷರ ಗಾತ್ರ

‘ಏನ್ ಯಜಮಾನ, ಆರಾಮಾಗಿ ಕುತ್ಗಂಡೀಯಾ... ಭತ್ತದ ನಾಟಿ ಕೆಲ್ಸ ಎಲ್ಲ ಮುಗೀತಾ’ ಟಿ.ವಿ ನೋಡ್ತಾ ಕೂತಿದ್ದ ಮುದ್ದಣ್ಣನಿಗೆ ಕೇಳ್ದ ವಿಜಿ.

‘ಓ‌... ಬನ್ನಿ ಸಾರು, ಮೊನ್ನೆ ಇದ್ದಕ್ಕಿದ್ದಂತೆ ಯಾರೋ ‘ಹೈಬ್ರಿಡ್’ ಮಂದಿ ಬಂದು ನಾಟಿ ಮಾಡಿ ಹೋಗವ್ರೆ... ಅದ್ಕೆ ವಸಿ ಆರಾಮಾಗಿ ಕೂತಿವ್ನಿ. ಮೊದ್ಲು ನಾಟಿ ಮಾಡಾಕೆ ಆಳುಗೋಳ್ ಸಿಗ್ದೆ ಒದ್ದಾಡ್ತಿದ್ದೆ. ಕೂಲಿ ಜಾಸ್ತಿ ಕೇಳ್ತಿದ್ರು. ಅದೇನ್ ಅದೃಷ್ಟಾನೋ ನಂದು... ಇವ್ರು ನಾಟಿ ಮಾಡಿದ್ದಲ್ದೆ ನಿಮ್ಮ ಹೊಲಾನ ಶೂಟಿಂಗ್‌ಗೆ ಬಳಸಿಕೊಂಡಿದ್ದಕ್ಕೆ ಇದನ್ನ ಇಟ್ಕಳಿ ಅಂತ ದುಡ್ಡೂ ಕೊಟ್ಟು ಹೋದ್ರು’ ಚಾನೆಲ್ ಚೇಂಜ್ ಮಾಡ್ತಾ ಖುಷಿಯಿಂದ ಮಾತು ಮುಂದುವರಿಸಿದ ಮುದ್ದಣ್ಣ.

ಟಿ.ವಿಯಲ್ಲಿ ‘ನಮೋ’ ಚಾನೆಲ್ ಬರಲಾರಂಭಿಸಿತು. ‘ಮಿತ್ರೋ’ ಎನ್ನುವ ಭಾಷಣವೂ ಪ್ರಸಾರವಾಗತೊಡಗಿತು. ‘ಇದ್ಯಾವ ಚಾನೆಲ್ ಸಾಹೇಬ್ರೇ... ಹೊಸದಾ?’ ಕೇಳ್ದ ಮುದ್ದಣ್ಣ.

‘ಹೌದು ಎಲೆಕ್ಷನ್ ಸ್ಪೆಷಲ್’.

‘ಯಾವ್ಯಾವ ಕಾರ್ಯಕ್ರಮ ಬರ್ತಾವೆ?’.

‘ಬೆಳಿಗ್ಗೆ ಭಾಷಣ... ಮಧ್ಯಾಹ್ನ ಭಾಷಣ... ಸಂಜೆ ಭಾಷಣ...’ ಉತ್ತರಿಸಿದ ವಿಜಿ.

ಮತ್ತೆ ರಾತ್ರಿ?

‘ಭಾಷಣ...’ ತೆರೆದ ಬಾಯಿ ಮುಚ್ಚೋಕೆ ಅರ್ಧ ತಾಸು ತೆಗೆದುಕೊಂಡ ಮುದ್ದಣ್ಣ.

ಚಾನೆಲ್ ಚೇಂಜ್ ಆಯ್ತು. ‘ಇದ್ಯಾರ್ ಸಾರು... ಅಮೀರ್ ಖಾನ್ ಇದ್ದಂಗವ್ರೆ... ಒಳ್ಳೆ ತೇಜಸ್ಸು’.

‘ಅಯ್ಯೋ ಯಜಮಾನ... ಯಾರನ್ನ ಯಾರಿಗೆ ಹೋಲಿಕೆ ಮಾಡ್ತಿದೀಯಾ? ಮೊದ್ಲೇ ಆ ತೇಜಸ್ಸಿನ ವ್ಯಕ್ತಿ ಸೂರ್ಯ ಉರಿದಂಗೆ ಉರಿತಾವ್ನೆ. ನನ್ನ ವಿರುದ್ಧ ಯಾರೂ ಬರೀಬಾರದು ಅಂತಾ ಕೋರ್ಟ್‌ಗೆ ಹೋಗವ್ನೆ. ಅಮೀರ್ ಖಾನ್ ಅಂತೆಲ್ಲ ಅಂದ್ರೆ ನಿನ್ನ ವಿರುದ್ಧ ಮತಾಂತರದ ಕೇಸ್ ಹಾಕಿಬಿಡ್ತಾನಷ್ಟೇ!’

ಚಾನೆಲ್ ಚೇಂಜ್. ಬಡವರಿಗೆ ವರ್ಷಕ್ಕೆ ₹72 ಸಾವಿರ. ಬ್ರೇಕಿಂಗ್ ನ್ಯೂಸ್.

‘ಮುದ್ದಣ್ಣ, ನಿಂಗೆ 72 ಸಾವಿರಕ್ಕೆ ಎಷ್ಟ್ ಸೊನ್ನೆ ಇರುತ್ತೆ ಗೊತ್ತಾ?’.

‘ತಡೀರಿ ಸಾರು. ಸದ್ಯ 15 ಲಕ್ಷಕ್ಕೆ ಎಷ್ಟ್ ಸೊನ್ನೆ ಇರುತ್ತೆ ಅಂತಾ ಲೆಕ್ಕ ಹಾಕ್ತಾ ಇವ್ನಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT