‘ಮನೆಯೊಡೆಯ ಗಂಡಸಾದರೂ ನಿಜವಾದ ಅರ್ಥದಲ್ಲಿ ಮನೆಯಾಕೆಯೇ ನಿಜವಾದ ಒಡತಿ ಅಲ್ವೇ?’ ಎಂದು ನಾನೂ ರಾಗ ಹಾಡಿ ಅವುಡುಗಚ್ಚಿದೆ.
‘ಕ್ರಿಕೆಟ್‌ನಲ್ಲೂ 19 ವರ್ಷದ ಒಳಗಿನವರ ಮಹಿಳಾ ಟೀಮ್ ಐತಿಹಾಸಿಕ ಜಯ ಸಾಧಿಸಿದೆ’ ಪುಟ್ಟಿ ಕುಣಿದಳು.
‘ಅಷ್ಟೆಲ್ಲ ಯಾಕೆ? ಸತತ ಐದನೇ ಬಾರಿ, ನಮ್ಮ ನಿರ್ಮಲಾ ಮೇಡಂರವರಿಂದ ಬಜೆಟ್ ಮಂಡನೆ ಅಂದರೆ ಸಾಮಾನ್ಯ ವಿಷಯವೇ? ಹೆಣ್ಮಕ್ಕಳೇ ಸ್ಟ್ರಾಂಗ್ ಅನ್ನೋದ್ರಲ್ಲಿ ಎರಡು ಮಾತಿಲ್ಲ’ ನನ್ನವಳು ಮುಕ್ತಾಯ ಹಾಡಿದಳು.