‘ಪರಪ್ಪನ ಅರಮನೇಲಿ ಜೈಲು ಹಬ್ಬ ಅದಂತೆ! ನೋಡಿಕ್ಯಂದು ಬರನೆ ಬಾ’ ಅಂತಂದ ತುರೇಮಣೆ ಜೊತೆಗೆ ಹೊಂಟೆ. ಅಗ್ರಾರದೊಳಗೆ ಮುಕ್ಕಿರಿದಿದ್ದ ಜನ ಕಂಡುದ್ದೆಲ್ಲಾ ಕಂಡಾಬಟ್ಟೆ ಖರೀದಿ ಮಾಡ್ಕತಿದ್ರು.

‘ಬರ‍್ರಿ ಸಾ, ಜೈಲಲ್ಲಿ ಥ್ರೀ ಡೇಸ್, ಟೂ ನೈಟ್ ಪ್ಯಾಕೇಜ್ ತಗಳಿ. ಕಾಸು ಕೊಟ್ರೆ ಮೊಬೈಲು, ಬಿರಿಯಾನಿ, ಸಿಗರೇಟು, ಗಾಂಜಾ, ಡ್ರಿಂಕ್ಸು, ಕೇಳಿದ್ದೆಲ್ಲಾ ಸಿಕ್ತವೆ!’ ಜೈಲು ಬರ್ಡು ಕೂಗಿಕ್ಯತಿದ್ದ. ಮಗ್ಗುಲಗೇ ನಿಂತಿದ್ದ ಏಜೆಂಟು ‘ಬನ್ನಿ ಸಾ, ಡ್ಯಾಗರ ಪಂಚಮಿಗೆ ಲಾಂಗು ಗಿಫ್ಟು ಕೊಡಿ. ರಾಡು, ಚೈನು, ಲಾಠಿ, ಮೆಗ್ಗರ್ ಬೇಕಾ? ಯಾರದಾದ್ರೂ ಕೈ-ಕಾಲು ಮುರಿಬೇಕಾ, ಎತ್ತಬೇಕಾ? ಅಡ್ವಾನ್ಸ್ ಕೊಟ್ಟು ಸ್ಲಾಟ್ ಬುಕ್ ಮಾಡ್ಕಳಿ’ ಅಂತ ತಿವೀತಿದ್ದ.

‘ಬಿಟ್ಟಿ ಭಾಗ್ಯಕ್ಕೆ ಕಳ್ಳ ನಿರಾಧಾರ್, ಸುಳ್ಳು ಬಿಪಿಎಲ್ ಕಾರ್ಡ್ ತಗಳಿ. ಒಂದು ತಗಂಡ್ರೆ ಇನ್ನೊಂದು ಫ್ರೀ. ಒಬ್ಬ ಕೂಗಿ ಕರೀತಿದ್ದ. ‘ಕಾಸಿದ್ರೆ ನಮ್ಮಾಸ್ಪತ್ರಿಗೇ ಬರ‍್ರಿ ಸಾ. ಹಣ ನಮ್ಮದು, ಹೆಣ ನಿಮ್ಮದು’ ಆಸ್ಪತ್ರೆಯೋನು ಚುಚ್ಚುತಿದ್ದ.

‘ಜುಜುಬಿ ರೇಟಲ್ಲಿ ಎಕರೆಗಟ್ಲೆ ಜಾಗ ತಗಳಿ. ಸ್ಪಾಟ್ ಬುಕಿಂಗ್ ಮಾಡಿದ್ರೆ ಬಳ್ಳಾರಿಗೆ ಫ್ರೀ ಟ್ರಿಪ್. 50ಕ್ಕೆ 50 ಮೈಸೂರ್ ಸ್ಪೆಷಲ್ ಆಫರ್ ಬೇಕಾ? ಎ ಟು ಜಡ್ ಖಾತೆ ಸ್ಪಾಟಲ್ಲೇ ಸಿಕ್ತದೆ’ ಅನ್‍ರಿಯಲ್ ಎಸ್ಟೇಟಿನೋನು ಗಬರಾಡ್ತಿದ್ದ. ಕೊನೇ ಸ್ಟಾಲಲ್ಲಿ ಒಣಗೋಗಿದ್ದ ಸತ್ಯ, ನ್ಯಾಯ, ಧರ್ಮ ಮಡಿಕಂಡು ಸತ್ಯಪ್ಪ ನಿದ್ದೆ ಮಾಡ್ತಿದ್ದ. ಇಂಥವೇ ಸ್ಟಾಲು ಸುಮಾರು ಇದ್ದೋ.

‘ಮೆದುಳು ಬೇಕಾ ಸಾ. ಬೆಂಗಳೂರೋರಿಗೆ ಫಿಟ್ಟಿಂಗ್ ಚಾರ್ಜು ಫ್ರೀ’ ಅಂತಿದ್ದ ಕೊನೇ ಸ್ಟಾಲಲ್ಲಿದ್ದೋನು. ‘ಇದು ಕಯ್ಯಾ ಮಾತು ಅಂದ್ರೆ. ನಮಗೇನು ಬುಲ್ಡೇಲಿ ಮೆದುಳಿಲ್ಲ ಅಂದ್ಕಂದಿದ್ದೀಯ?’ ರೋಷದಲ್ಲಿ ಕೇಳಿದೆ. ‘ಬುದ್ದಿಲ್ಲದ ವೊತ್ಗೇ ಅಲ್ಲುವರಾ ಬದುಕೇ ದುಬಾರಿಯಾದ್ರೂ ನೀವೆಲ್ಲಾ ಗುಮ್ಮಗಿರದು’ ಅಂತ ಕ್ಯಾಕರಿಸಿ ಉಗಿದದ್ದು ಯಾರಿಗೂ ಕಾಣದಂಗೆ ಒರೆಸಿಕ್ಯಂದು ಆಚೆಗೆ ಕಡೆದೋ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.