ಭಾನುವಾರ, ಸೆಪ್ಟೆಂಬರ್ 26, 2021
29 °C

ಚುರುಮುರಿ | ಹೀಗೊಂದು ಪರೀಕ್ಷೆ

ಆನಂದ Updated:

ಅಕ್ಷರ ಗಾತ್ರ : | |

ತೀರಾ ಇತ್ತೀಚಿನ ವಿದ್ಯಮಾನಗಳ ಬಗ್ಗೆ ನಿಮ್ಮ ಸಾಮಾನ್ಯ ಜ್ಞಾನ ಅಥವಾ ಜನರಲ್ ನಾಲೆಜ್ ಎಷ್ಟಿದೆ? ಬನ್ನಿ, ಪರೀಕ್ಷಿಸಿಕೊಳ್ಳಿ.

ಅ. ನೆಹರೂ ಏನು ಸೇದುತ್ತಿದ್ದರು ಎಂದು ಸಿ.ಟಿ.ರವಿ ಹೇಳಿದ್ದರು?

1. ಸಿಗರೇಟ್ 2. ಬೀಡಿ 3. ಹುಕ್ಕಾ

ಆ. ವಾಜಪೇಯಿ ಏನು ಕುಡಿಯುತ್ತಿದ್ದರು ಎಂದು ಪ್ರಿಯಾಂಕ್‌ ಖರ್ಗೆ ಹೇಳುತ್ತಾರೆ?

1. ರಂ 2. ಸ್ಕಾಚ್‌ 3. ವಿಸ್ಕಿ

ಇ. ಮೋದಿ ಹೆಸರು ಯಾವುದಕ್ಕೆ ಇಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಸೂಚಿಸಿದ್ದಾರೆ?

1. ಶೌಚಾಲಯ 2. ಸ್ನಾನಗೃಹ 3. ವಿಶ್ರಾಂತಿ ಭವನ

ಈ. ಜೊಲ್ಲೆ ಯಾವ ಹಗರಣದಲ್ಲಿ ಆರೋಪಿಯಾಗಿದ್ದಾರೆ?

1. ಕೋಳಿ 2. ಮೊಟ್ಟೆ 3. ಇವೆರಡೂ ಅಲ್ಲ

ಉ. ಸಿದ್ದರಾಮಯ್ಯನವರು ಯಾರ ಬಗ್ಗೆ ಅವಹೇಳನಕರವಾಗಿ ಮಾತನಾಡಿರುವ ಸಿ.ಡಿ ಬಿಡುಗಡೆ ಮಾಡಲು ರವಿ ತಯಾರಿದ್ದಾರೆ?

1. ಇಂದಿರಾ 2. ಪ್ರಿಯಾಂಕಾ 3. ಸೋನಿಯಾ

ಊ. ಬಿ.ಕೆ.ಹರಿಪ್ರಸಾದ್ ಅವರ ಪ್ರಕಾರ ‘ಹರಕುಬಾಯಿ ದಾಸ’ ಯಾರು?

1. ಈಶ್ವರಪ್ಪ 2. ರವಿ 3. ವಿಶ್ವನಾಥ್

ಎ. ನನ್ನ ತಂಟೆಗೆ ಬಂದರೆ ಯಾವ ಕಾಯಿಲೆ ಬರುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ?

1. ಬಿ.ಪಿ. 2. ಶುಗರ್ 3. ಎರಡೂ

ಏ. ಇವರಲ್ಲಿ ಯಾರ ಕಾಲ ದೂಳಿಗೂ ಬಿಜೆಪಿ ನಾಯಕರು ಸಮವಲ್ಲ ಎಂದು ಒಬ್ಬ ಕಾಂಗ್ರೆಸ್‌ ನಾಯಕರು ಹೇಳುತ್ತಾರೆ?

1. ರಾಹುಲ್ 2. ಸೋನಿಯಾ 3. ಇಂದಿರಾ

ಐ. ಬಡವರ ಹೊಟ್ಟೆ ತುಂಬಿಸುವಾಗ ಕಟೀಲರಿಗೆ ಯಾರು ಕಾಣುತ್ತಾರೆ?

1. ಅನ್ನಪೂರ್ಣೇಶ್ವರಿ 2. ಇಂದಿರಾ 3. ಪ್ರಿಯಾಂಕಾ

ಒ. ‘ಛೀ! ಥೂ!’ ಎಂದು ಏಕವಚನದಲ್ಲಿ ಬೈದಾಡಿಕೊಂಡ ಈ ಇಬ್ಬರು ಯಾರು?

1. ಶಾಸಕ– ಶಾಸಕ 2. ಶಾಸಕ– ಸಂಸದ 3. ಸಂಸದ– ಸಂಸದ

ಸರಿಯಾದ ಉತ್ತರಗಳನ್ನು ತಿಳಿದುಕೊಳ್ಳಲೇಬೇಕು ಎಂದಿದ್ದರೆ ದಿನಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೋಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.