ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಶೀತ, ಗೋತಾ!

Last Updated 29 ಡಿಸೆಂಬರ್ 2022, 22:45 IST
ಅಕ್ಷರ ಗಾತ್ರ

‘ಗುರು, ಈ ಕೊರೊನಾ ಮೂಗಿನ್ಯಾಗಿರ್ತತಾ?’ ಗುಡ್ಡೆ ತೆಪರೇಸಿಯನ್ನ ಕೇಳಿದ.

‘ನಂಗೊತ್ತಿಲ್ಲಪ್ಪ, ಯಾಕೆ?’

‘ಅಲ್ಲಲೆ, ಈಗ ಕೊರೊನಾಕ್ಕೆ ಮೂಗಿನಾಗೆ ಹಾಕೋ ಲಸಿಕಿ ಕಂಡುಹಿಡಿದಾರಂತಲ್ಲ, ಅದ್ಕೆ ಕೇಳಿದೆ’.

‘ಕೊರೊನಾ ನಮ್ ಮೈಯಾಗೆ ಹೊಕ್ಕೊಳ್ಳೋದು ಮೂಗು ಬಾಯಿ ಮೂಲಕನೇ. ಅದ್ಕೇ ಮೂಗಿನಾಗೆ ಹಾಕ್ತಾರೆ ಅನ್ಸುತ್ತೆ. ವೈರಸ್ಸು ಬಾಗಿಲ್ಯಾಗೇ ಸಾಯ್ಲಿ, ಒಳಾಕೆ ಹೋಗಾದು ಬ್ಯಾಡ ಅಂತ’ ತೆಪರೇಸಿ ವಿವರಿಸಿದ.

‘ಕರೆಕ್ಟ್, ಮೂಗು ಬಾಯಿ ಶುದ್ಧ ಇದ್ರೆ ಲೋಕಾನೇ ಗೆಲ್ಲಬಹುದು ಅಂತ ನಮ್ ಹಿರೇರು ಇದ್ಕೇ ಹೇಳಿರೋದು’ ದುಬ್ಬೀರ ನಕ್ಕ.

‘ಅಂದ್ರೇ?’

‘ಅಂದ್ರೇ ಎಲ್ಲಿ ಬೇಕಲ್ಲಿ ಮೂಗು ತೂರಿಸೋದು, ಬಾಯಿಗೆ ಬಂದಂಗೆ ಮಾತಾಡೋದು ಮಾಡಿದ್ರೆ ಹಿಂಗೆ ಬರಬಾರ್ದ ರೋಗ ಬರ್ತಾವೆ ಅಂತ’.

‘ನೀ ಯಾರಿಗೆ ಹೇಳ್ತಿದಿ ಇದನ್ನೆಲ್ಲ?’ ಗುಡ್ಡೆಗೆ ಸಿಟ್ಟು ಬಂತು.

‘ನಿಂಗಲ್ಲಲೆ, ಲೋಕಾರೂಢಿ ಮಾತೇಳಿದೆ. ಮನುಷ್ಯ ದೇಹದಾಗಿನ ಅತೀ ವೀಕ್ ಪಾರ್ಟ್‌ಗಳು ಯಾವು ಗೊತ್ತಾ? ಕಣ್ಣು, ಕಿವಿ, ಮೂಗು, ಬಾಯಿ. ಇದು ವೈರಸ್‌ಗಳಿಗೂ ಗೊತ್ತಾಗೇತಿ. ಅದ್ಕೇ ಅಲ್ಲಿಂದಾನೇ ಅವು ಒಳಕ್ಕೆ ಬರ್ತಾವು’.

‘ಅಲ್ಲ, ನೀನು ರೋಗದ ಬಗ್ಗೆ ಮಾತಾಡ್ತಿದೀಯೋ, ಬೇರೇನರೆ ಹೇಳ್ತಿದೀಯೋ ತಿಳೀವಲ್ದಪ್ಪ...’ ಕೊಟ್ರೇಶಿ ತಲೆ ಕೆರೆದುಕೊಂಡ.

‘ನೋಡಲೆ, ಮಾತು, ನೋಟ ಸರಿ ಇದ್ರೆ ಎಲ್ರು ಗೌರವ ಕೊಡ್ತಾರೆ. ಅದು ಬಿಟ್ಟು ಯಾವುದೋ ವಾಸನಿ ಹಿಡ್ಕಂಡು ಎಲ್ಲಿಗೋ ಹೋಗೋದು, ಯಾರದೋ ಮಾತು ಕೇಳ್ಕಂಡು ಏನರೆ ಮಾಡೋದು ಮಾಡಿದ್ರೆ ಜನ ನುಗ್ಗರಿಯಂಗೆ ಹೊಡೀತಾರೆ, ಆಮೇಲೆ ಮೂಗಿನಾಗೆ ಹತ್ತಿ ಇಡಿಸ್ಕಾಬೇಕಾಕ್ಕತಿ...’

‘ಹೌದಲ್ಲಲೆ, ಕಿವ್ಯಾಗೆ ಹತ್ತಿ ಇಟ್ರೆ ಶೀತ, ಮೂಗಿನ್ಯಾಗೆ ಇಟ್ರೆ ಗೋತಾ... ಅಲ್ವಾ?’ ಕೊಟ್ರೇಶಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT