ಆಫೀಸಿನ ಮುಂದಿದ್ದ ನಾಯಿಗಳ ದೊಡ್ಡ ಗುಂಪು ತೋರಿಸಿದ ಯಂಟಪ್ಪಣ್ಣ, ‘ಇವು ಹೋದ ಜಲ್ಮದೇಲಿ ನಮ್ಮ ಇಲಾಖೇಲೇ ಆಫೀಸರಾಗಿದ್ದವು ಕನೋ. ಅದಿಕ್ಕೆ ದಿನಾ ಆಫೀಸಿಗೆ ಬಂದು ಹೋತವೆ. ಮುಂದ್ಲ ಜಲ್ಮದೇಲಿ ನಾವೂ ಹಿಂಗೇ ಬಂದಿರತೀವೇನೊ’ ಅಂದ.

‘ನರಮನುಷನ ಜಲ್ಮಾದ ಮ್ಯಾಲೆ ನಾಯಿ ಜಲ್ಮವಂತೆ. ನಾಯಿಗಳಲ್ಲೂ ಈಗ ರಿಂಗ್ ರೋಡ್ ರ್ಯಾಕೆಟ್, ಬ್ರಿಡ್ಜ್ ಬಾಯ್ಸ್, ಮಾರ್ಕೆಟ್ ರೌಡೀಸ್, ಸೈಲೆಂಟ್ ಕಿಲ್ಲರ್ಸ್ ಅಂತ ಸುಮಾರು ಪಕ್ಷಗಳದಾವೆ. ಇವು ಆಗಾಗ ಉಪಹಾರ ಸಭೆ ಮಾಡಿಕ್ಯಂದು ತಿರುಗಾಡ್ತಿರತವೆ’ ಅಂದ್ರು ತುರೇಮಣೆ.

‘ಅವುಕ್ಕೇನ್ಲಾ ವತ್ತರೇಗೆ ಪಾರ್ಕಲ್ಲಿ ಮೀಟಿಂಗ್, ಮಧ್ಯಾಹ್ನಕ್ಕೆ ಹೋಟೆಲ್ ಹಿಂದ್ಗಡೆ ಬಫೆ ಊಟ, ರಾತ್ರಿ ಬೈಕ್ ಅಟ್ಟಿಸಿಕೊಂಡೋಗೊ ವ್ಯಾಯಾಮ ಮಾಡಿಕ್ಯಂದು ಸೂಪರಗದಾವೆ’ ತಿಪ್ಪಣ್ಣ ವಿವರಿಸಿದ.

‘ಕಚ್ಚೋ ನಾಯಿಗಳು ಒಳಗೂ ಅವೆ ಅಂತ ಮೊನ್ನೆ ರೇಣಕ್ಕ ಅಂದುತ್ತಲ್ಲ. ಈ ನಾಯಿಗಳೆಲ್ಲಾ ಮುಂದ್ಲ ಚುನಾವಣೆಗಳಲಿ ಸ್ಪರ್ಧೆ ಮಾಡಿ ಶುನಕ ಸರ್ಕಾರ ಬಂದ್ರೆ ಯಂಗಿದ್ದದು ಅಣ್ತಮ್ಮ?’ ಅಂತಂದೆ.

‘ಆಗ ಅವುಗಳ ತ್ಯಾಗ, ಕಾಸಿನ ಪವರ್, ಸೀನಿಯಾರಿಟಿ ಪ್ರಕಾರ ಮಂತ್ರಿ ಮಾಡಬಕು ಅಣ್ತಮ್ಮ. ಡಿಕಾವಾಗಿರೋದು ಸಿಎಂ ಆಯ್ತದೆ. ಟ್ರಾಫಿಕ್ಕಲ್ಲಿ ಯರ್ರಾಬಿರ್ರೀ ನುಗ್ಗೋ ನಾಯಿ ನಿಗ್ರಹಸಚಿವ, ಸ್ಕೂಲು ಮುಂದಿರೋವು ಶಿಕ್ಷಣ ಮಂತ್ರಿ, ಊಟ ಎಲ್ಲೆಲ್ಲಿ ಸಿಕ್ತದೆ ಅಂತ ತಿಳುಕಂದಿರೋದು ಆಹಾರ ಸಚಿವ. ಸಣ್ಣ–ಪುಟ್ಟ ಗಲ್ಲಿ ನಾಯಿಗಳು ನಿಗಮ–ಮಂಡಲಿ ಅಧ್ಯಕ್ಷರಾತವೆ. ಸುಮ್ಮನೆ ಬೊಗಳೋವು ವಿರೋಧಪಕ್ಷದವು’ ಅಂದ ತಿಪ್ಪಣ್ಣ.

‘ಸಮಾಜದಲ್ಲಿ ನಡೀತಿರೋ ಘಟನೆಗಳನ್ನು ನೋಡಿದ್ರೆ ಗೊತ್ತಾತದೆ. ನಮ್ಮ ಕತೆ ಯಂಗ್ಲಾ?’ ಅಂತಂದೆ.

‘ಸುಮ್ಮಗಿರೋದು ಪಾಟ ಮಾಡಿಕಂದಿರೋ ನಾವು ಸಾಕಿದ ನಾಯಿಗಳಿದ್ದಂಗೆ. ಗ್ಯಾರಂಟಿ ಬಿಸ್ಕತ್ತು ಇಸುಗಂದು ಅಮಿಕ್ಕಂದಿರಬಕು. ಸರ್ಕಾರಿ ನಾಯಿಗಳು ಕಂಡೇಟಿಗೆ ಕಾಲೂರಿ ನಡ ಬಗ್ಗಿಸಿ ಗೌರವ ಕೊಡಬಕು’ ತಿಪ್ಪಣ್ಣನ ಭವಿಷ್ಯ ಭೀಕರವಾಗಿತ್ತು.

ತಿಪ್ಪಣ್ಣನ ಮಾತನ್ನು ಪೆಟ್ಟು ತಿಂದ ನಾಯಿಗಳಂತೆ ಮೌನವಾಗಿ ಅನುಮೋದಿಸಿದೆವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.