‘ಪಾಪ! ವಿನೇಶ್‌ಗೆ ಕೊನೆಗೂ ಒಲಿಂಪಿಕ್ಸಲ್ಲಿ ಬೆಳ್ಳಿ ಪದಕವೂ ದಕ್ಕಲೇ ಇಲ್ಲ, ನೂರು ಗ್ರಾಂ ಹೆಚ್ಚು ತೂಕ ಅವರಿಗೆ ಮುಳುವಾಗೋಯ್ತು’ ಎಂದು ಲೊಚಗುಟ್ಟಿದ ಮಾಲಿಂಗ.

‘ವೂ ಕಣ್ಲಾ, ನೆನೆಸ್ಕಂಡ್ರೆ ಕಳ್ಳು ಹಿಂಡಿದಂಗಾಯ್ತದೆ. ನನ್ ಲೈಫ್ನಾಗೂ ಇಂಗೇ ಈ ನೂರು ಗ್ರಾಂ ಶಾನೆ ಆಟ ಆಡೈತೆ’ ಎಂದು ಫ್ಲ್ಯಾಶ್‌ಬ್ಯಾಕ್ ಬಿಚ್ಚಿದ ಗುದ್ಲಿಂಗ.

‘ಕಾಲೇಜಲ್ಲಿದ್ದಾಗ ಶಾಮ್ಲಿನ ಲವ್ ಮಾಡಿದ್ನಾ? ಅವಳಿಗೊಂದು ಗಿಫ್ಟ್ ಪಾರ್ಸಲ್ ಮಾಡಿದ್ದೆ. ಅದು 100 ಗ್ರಾಂ ಜಾಸ್ತಿ ಇತ್ತು ಅಂತ ಡ್ಯೂ ಆಯ್ತು. ನೆಟ್ಟಗೆ ಸ್ಟಾಂಪ್ ಅಂಟ್ಸಕ್ಕೆ ಬರಲ್ಲ, ಇನ್ನೇನು ಇವ್ನು ಪ್ರೀತಿ ಮುದ್ರೆ ಒತ್ತಾನು ಅಂತ ಅವಳು ಗಿಫ್ಟ್ ರಿಜೆಕ್ಟ್ ಮಾಡಿ ನನ್ ಬಿಟ್ಟಾಕೇ ಬಿಟ್ಳು’.

‘ಅಯ್ಯೋ ಸಿವನೇ! ಇದೆಲ್ಲ ನಮ್ಗೆ ಗೊತ್ತಿರ್‍ಲೇ ಇಲ್ಲ ನೋಡು’.

‘ಮದ್ವೆ ಆದ್‌ಮ್ಯಾಕೆ ಮನೆಯಾಗೆ ‘ತುತ್ತಾ ಮುತ್ತಾ’ ನಾಟಕ ಶುರುವಾಯ್ತು. ಎರಡು ಚಿನ್ನದ ಸರ ಮಾಡುಸ್ದೆ. ಅಮ್ಮಂಗೊಂದು, ಹೆಂಡ್ರಿಗೊಂದು. ಆ ಒಡವೆ ಅಂಗಡಿಯೋನು ಅಮ್ಮ ಅಂದ್ರೆ ಬೆಲೆ ಜಾಸ್ತಿ ಅಂತ ಅಮ್ಮನ್ ಚೈನ್ಗೆ ನೂರು ಮಿಲಿ ಗ್ರಾಂ ಜಾಸ್ತಿ ಚಿನ್ನ ಹಾಕ್ಬುಟ್ಟಿದ್ದ. ಅದು ಹೆಂಡ್ತಿಗೆ ಗೊತ್ತಾಗಿ ಭಾರಿ ರಾದ್ಧಾಂತ ಆಗೋಯ್ತು. ಎಂಡ್ರು ಮನೆ ಬಿಟ್ ಒಂಟೋದ್ಲು... ಅಮ್ಮನೂ ನನ್ ತಂಗಿ ಮನೆಗೆ ಹೋದ್ಲು’.

‘ಆಮೇಲೆ...’

‘ಆಮೇಲ್ ಎಂಡ್ರು ಇಲ್ವಲ್ಲ ಅಂತ ಇಂಗೇ ಎಣ್ಣೆ ಆಕ್ತಿದ್ವಿ. 100 ಗ್ರಾಂ ಖಾರ ಮಿಕ್ಕಿತ್ತು ಅಂತ ಇನ್ನೊಂದು ಬಾಟಲ್ ಓಪನ್ ಮಾಡುದ್ವಿ. ಅದೆಲ್ಲಿದ್ಲೋ ನನ್ ಎಂಡ್ರು ಸೊಯ್ ಟಪಕ್ ಅಂತ ಪ್ರತ್ಯಕ್ಷ ಆಗ್ಬುಟ್ಳು. ಬಕೆಟ್‌ಗಟ್ಲೆ ನೀರು ಹುಯ್ದು ಮುಖಕ್ಕೆ ಮಂಗಳಾರತಿ ಮಾಡುದ್ಲು’.

‘ಅಯ್ಯೋ, ಛೇ! ಹೀಗಾಗ್ಬಾರ‍್ದಿತ್ತು ಕಣೋ’.

‘ಮುಂದಕ್ ಕೇಳು. ಮಾರನೇ ದಿನ ಕಬಡ್ಡಿ ಸೆಲೆಕ್ಷನ್ ಇತ್ತಾ? ಒಳಗೆ ಎಣ್ಣೆ, ಮೇಲೆ ಹೆಂಡ್ರು ನೀರು ಸುರ‍್ದಿದ್ದು, ಎಲ್ಡೂ ಸೇರಿ ಬಾಡಿ ನೆಂದು ಶೀತ ಆಗಿ, ಸರಿಯಾಗಿ ಆಡಕ್ಕಾಗ್ದೆ ಡಿಸ್‌ಕ್ವಾಲಿಫೈ ಆಗೋದೆ’.

‘ಆಮೇಲ್ ಏನ್ ಮಾಡ್ದೆ?’

‘ಇನ್ನೇನ್ ಮಾಡೋದು? ದುಃಖ ಮರೆಯೋಕೆ ನಿಮ್ ಜೊತೆ ಸೇರ‍್ಕಂಡ್ ಕುಡ್ದೆ. ಈಗ ಲಿವರ್ ಊದ್ಕಂಡು ನೂರು ಗ್ರಾಂ ಹೆಚ್ಚಾಗದೆ’ ಎಂದು ತಲೆ ಚಚ್ಚಿಕೊಂಡ ಗುದ್ಲಿಂಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.