ಇಂದು ಭಾರತದಾದ್ಯಂತ ಎಲ್ಲ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ವ್ಯಕ್ತಿಕೇಂದ್ರಿತ ರಾಜಕಾರಣವನ್ನೇ ನೆಚ್ಚಿಕೊಂಡಿವೆ. ಮಾರ್ಕ್ಸ್ ಮತ್ತು ಅಂಬೇಡ್ಕರ್ ಸಿದ್ಧಾಂತಗಳ ಮೇಲೆ ಅಧಿಕಾರಕ್ಕೆ ಬಂದ ಕಮ್ಯುನಿಸ್ಟ್ ಮತ್ತು ಬಿಎಸ್ಪಿಯಂತಹ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಭ್ರಷ್ಟಾಚಾರವನ್ನು ಚುನಾವಣೆಯ ಅಸ್ತ್ರವನ್ನಾಗಿಸಿಕೊಂಡು ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ಕೂಡ ಈಗ ಕೇಜ್ರಿವಾಲ್ ಎಂಬ ವ್ಯಕ್ತಿಯ ಸುತ್ತಲೇ ಸುತ್ತುತ್ತಿದೆ

ಭಾರತ ಒಂದುಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಣ್ಣು ಬಿಡುವ ಸಮಯದಲ್ಲಿಸಂವಿಧಾನ ರಚನಾ ಸಮಿತಿಯ ಕೊನೆಯ ಸಭೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವವ್ಯವಸ್ಥೆ ಉಳಿಯಬೇಕಾದರೆ ವ್ಯಕ್ತಿ ಆರಾಧನೆ ಬೆಳೆಯಕೂಡದು’ ಎಂದು ಎಚ್ಚರಿಸಿದ್ದರು. ಆದರೆ, ಭಾರತದ ರಾಜಕಾರಣಿಗಳಲ್ಲಿ ಈ ಎಚ್ಚರ ಮೂಡಲೇ ಇಲ್ಲ. ಸ್ವಾತಂತ್ರ್ಯದ ಆರಂಭದ ದಿನಗಳಿಂದಲೇ ಭಾರತದ ರಾಜಕಾರಣವು ವ್ಯಕ್ತಿಕೇಂದ್ರಿತವಾಗಿಯೇ ಇತ್ತು ಮತ್ತು ಅದು ಇಂದಿನ ವರೆಗೂ ಹಾಗೆಯೇ ಮುಂದುವರಿದಿದೆ.

1915ರಿಂದ 1947ರವರೆಗೂ ಇಡೀ ಜಾಗತಿಕ ವ್ಯವಸ್ಥೆ ವ್ಯಕ್ತಿಕೇಂದ್ರಿತವಾಗಿತ್ತು. ಆ ಕಾಲಘಟ್ಟದಲ್ಲಿ ಜಗತ್ತಿನ ಹಲವಾರು ದೇಶಗಳು ವಸಾಹತುಶಾಹಿಯಿಂದ ಬಿಡುಗಡೆಗೊಂಡುವಿಭಜನೆಗೆ ಒಳಗಾಗಿದ್ದವು. ಈ ಸಂದರ್ಭದಲ್ಲಿ ಹೆಚ್ಚಾಗಿ ವ್ಯಕ್ತಿಕೇಂದ್ರಿತ ರಾಜಕಾರಣ ಮುನ್ನೆಲೆಗೆ ಬಂತು. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ವ್ಯಕ್ತಿಕೇಂದ್ರಿತ ರಾಜಕಾರಣ ವಿಶ್ವದ ತುಂಬಅಬ್ಬರಿಸುತ್ತಿದೆ.

ಇಂದು ಭಾರತದಾದ್ಯಂತ ಎಲ್ಲ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ವ್ಯಕ್ತಿಕೇಂದ್ರಿತ ರಾಜಕಾರಣವನ್ನೇ ನೆಚ್ಚಿಕೊಂಡಿವೆ. ಮಾರ್ಕ್ಸ್ ಮತ್ತು ಅಂಬೇಡ್ಕರ್ ಸಿದ್ಧಾಂತಗಳ ಮೇಲೆ ಅಧಿಕಾರಕ್ಕೆ ಬಂದ ಕಮ್ಯುನಿಸ್ಟ್ ಮತ್ತು ಬಿಎಸ್ಪಿಯಂತಹ ಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಭ್ರಷ್ಟಾಚಾರ ನಿರ್ಮೂಲನೆಯನ್ನು ಚುನಾವಣೆಯ ಅಸ್ತ್ರವನ್ನಾಗಿಸಿಕೊಂಡು ಅಧಿಕಾರಕ್ಕೆ ಬಂದ ಎಎಪಿ ಕೂಡ ಈಗ ಕೇಜ್ರಿವಾಲ್ ಎಂಬ ವ್ಯಕ್ತಿಯ ಸುತ್ತಲೇ ಸುತ್ತುತ್ತಿದೆ.

ಭಾರತದ ರಾಜಕಾರಣದಲ್ಲಿ ಯಾವ-ಯಾವ ಸಮುದಾಯಗಳ ನಾಯಕರು ರಾಜಕಾರಣದ ಮುನ್ನೆಲೆಯಲ್ಲಿದ್ದು ಅಧಿಕಾರದ ಗದ್ದುಗೆಯ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ ಎನ್ನುವುದನ್ನು ಮೇಲ್ನೋಟಕ್ಕೆ ಗಮನಿಸಿದರೆ ಸಾಕು. ಇಲ್ಲಿನ ಊಳಿಗಮಾನ್ಯ ವ್ಯವಸ್ಥೆ ತನ್ನ ಕಬಂಧ ಬಾಹುಗಳನ್ನು ಸಡಿಲಿಸಿಲ್ಲದಿರುವುದು ಗೊತ್ತಾಗುತ್ತದೆ. ಹಿಂದಿನಿಂದಲೂ ಹಳ್ಳಿಗಳಲ್ಲಿ ಪಟೇಲ, ಶ್ಯಾನುಭೋಗ, ಕರಣಿಕ ಮುಂತಾದವರ ಮೂಲಕಇದು ಚಲಾವಣೆಯಲ್ಲಿತ್ತು. ಅದು ಈಗ ರಾಜಕೀಯ ಪಕ್ಷಗಳಲ್ಲಿ ದೊಡ್ಡಮಟ್ಟದಲ್ಲಿ ಬಿಂಬಿತವಾಗುತ್ತಿದೆ.

ಈಗ ಅದು ಒಪ್ಪಿತವಾಗಿರುವುದರಿಂದ ಯಾರೂ ಅದನ್ನು ವಿರೋಧಿಸಲೊಲ್ಲರು. ಯಾರು ನಾಯಕರಾಗಿ ಬಿಂಬಿತವಾಗುತ್ತಾರೋ ಅವರ ಹಿಂಬಾಲಕರು ಜೋರಾಗಿರುತ್ತಾರೆ. ಈಜನಪ್ರತಿನಿಧಿಗಳು ಕೂಡ ತಮ್ಮನ್ನು ಬಲಪಡಿಸಿಕೊಳ್ಳಲು ಬೇಕಾಗಿರುವ ಅಧಿಕಾರ ಸೂತ್ರಗಳನ್ನು ರಾಜಕೀಯ ತಂತ್ರಗಳನ್ನು ಇನ್ನಿಲ್ಲದಂತೆ ಬಳಸುತ್ತಾರೆ. ಅದು ಕೆಲವು ಕಡೆ ಜಾತಿಯಿಂದ ಕೆಲವು ಕಡೆ ಹಣದಿಂದ ಮತ್ತೆ ಕೆಲವು ಕಡೆ ಪ್ರಚಾರದಿಂದ ಬರುತ್ತದೆ. ಆ ಕಾರಣದಿಂದಲೇ ಇಲ್ಲಿ ಜನನಾಯಕರೆನಿಸಿಕೊಂಡವರು ಬಹುಬೇಗನೆ ಆರಾಧನೆಗೆ ಒಳಗಾಗುತ್ತಾರೆ.

ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಇಲ್ಲಿಯವರೆಗೂ ಬಲಿಷ್ಠ ಜಾತಿಗಳೇ ಅಧಿಕಾರ ಹಿಡಿಯುವ ಕಸರತ್ತಿನಲ್ಲಿ ಮುನ್ನೆಲೆಯಲ್ಲಿರುವುದನ್ನು ತಳ್ಳಿ ಹಾಕಲಾಗದು. ಇಲ್ಲಿಯವರೆಗೂ ಆಳ್ವಿಕೆ ನಡೆಸಿದ ಮುಖ್ಯಮಂತ್ರಿಗಳನ್ನು, ಪ್ರಧಾನಿಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಈ ರೀತಿಯ ರಾಜಕಾರಣಿಗಳು ಎಂದೂ ಸಂವಿಧಾನದ ಮೌಲ್ಯಗಳನ್ನಾಗಲಿ, ಸೈದ್ಧಾಂತಿಕ ರಾಜಕಾರಣವನ್ನಾಗಲಿ ಎತ್ತಿಹಿಡಿಯಲಿಲ್ಲ. ಬದಲಾಗಿ ಜನರಲ್ಲಿ ಭ್ರಮೆಗಳನ್ನು ತುಂಬಿದರು ಮತ್ತು ತಮ್ಮ ಮತ ಬ್ಯಾಂಕ್ರಾಜಕಾರಣಕ್ಕೆ ಏನು ಬೇಕಾಗಿತ್ತೋ ಅವೆಲ್ಲವನ್ನೂ ಮಾಡಿದರು. ಇಂದು ಭಾರತವನ್ನೂ ಒಳಗೊಂಡಂತೆ ಜಾಗತಿಕ ಮಟ್ಟದಲ್ಲಿ ಮಾಧ್ಯಮಗಳು ಆಧುನಿಕ ರಾಜಕಾರಣಕ್ಕೆ ಬೇಕಾದ ನಾಯಕರನ್ನು ಸೃಷ್ಟಿ ಮಾಡುತ್ತವೆ. ಇದರ ಹಿಂದೆ ಊಳಿಗಮಾನ್ಯ ಮನಸ್ಥಿತಿ ಮತ್ತು ಬಂಡವಾಳಶಾಹಿಗಳು ವ್ಯವಸ್ಥಿತವಾಗಿ ತಂತ್ರ ರೂಪಿಸುತ್ತವೆ.

2014ರ ಲೋಕಸಭಾ ಚುನಾವಣೆಯ ವೇಳೆಗೆ ನರೇಂದ್ರ ಮೋದಿಯವರನ್ನು ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಲಾಯಿತು. ಗುಜರಾತ್ ಮಾದರಿ ಬಗ್ಗೆ ಎಲ್ಲೆಲ್ಲೂ ಪ್ರಚಾರ ಮಾಡಲಾಯಿತು. ಆದರೆ ಇಂದಿಗೂ ಗುಜರಾತ್ನ ಅಭಿವೃದ್ಧಿ ಮಾದರಿ ದೇಶದೆದುರು ಬಿಡಿಸಲಾಗದ ಕಗ್ಗಂಟಾಗಿಯೇ ಉಳಿಯಿತು. ಒಂದು ಪಕ್ಷ ಒಬ್ಬ ನಾಯಕನನ್ನು ರೂಪಿಸುವುದು ಎಂದರೆ ಆ ಪಕ್ಷದ ತಂತ್ರಗಾರಿಕೆಯ ಭಾಗವೂ ಆಗಿರುತ್ತದೆ. ಹೀಗೆ ವ್ಯಕ್ತಿಕೇಂದ್ರಿತ ನೆಲೆಯಲ್ಲಿ ರೂಪುಗೊಂಡ ನಾಯಕ ತನ್ನ ರಾಜಕೀಯ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತದಾರರನ್ನು ಹಾಗೂ ತನ್ನ ಸುತ್ತಲಿನವರನ್ನು ಮೆಚ್ಚಿಸಲು ಸದಾ ಹಂಬಲಿಸುತ್ತಿರುತ್ತಾನೆ. ಭಾರತದಲ್ಲಿ ಎಷ್ಟೇ ಸೈದ್ಧಾಂತಿಕ ರಾಜಕಾರಣವನ್ನು ಮಾತಾಡಿದರೂ ಅದರ ಮುನ್ನೆಲೆಯಲ್ಲಿರುವುದು ವ್ಯಕ್ತಿಕೇಂದ್ರಿತ ರಾಜಕಾರಣವೇ.

ಸ್ವತಂತ್ರ ಭಾರತದ ಆರಂಭಿಕ ನಾಯಕರಾದ ಜವಾಹರಲಾಲ್ ನೆಹರೂ, ಗಾಂಧಿವಾದದ ಆದರ್ಶಗಳನ್ನಿಟ್ಟುಕೊಂಡು ಅಧಿಕಾರ ನಡೆಸಿದರೂ ಇತರ ರಾಜಕಾರಣಿಗಳು ತಮ್ಮ ಸುತ್ತಲೇ ಗಿರಕಿ ಹೊಡೆಯುವಂತೆ ಮಾಡಿಕೊಂಡಿದ್ದರು. ನೆಹರೂ ನಂತರ ಇಂದಿರಾಗಾಂಧಿ ಕೂಡ ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ವ್ಯಕ್ತಿಕೇಂದ್ರಿತ ರಾಜಕಾರಣವನ್ನೇ ನಡೆಸಿದ್ದರು. ‘ಕಾಂಗ್ರೆಸ್ ಎಂದರೆ ಇಂದಿರಾ, ಇಂದಿರಾ ಎಂದರೆ ಕಾಂಗ್ರೆಸ್’ ಎನ್ನುವ ಮಟ್ಟಿಗೆ ಅವರ ರಾಜಕಾರಣ ಇತ್ತು. ಈ ಇಬ್ಬರೂ ಸಂವಿಧಾನ ಮತ್ತು ಜಾತ್ಯತೀತ ಮೌಲ್ಯಗಳನ್ನಿಟ್ಟುಕೊಂಡು ತಕ್ಕಮಟ್ಟಿನ ಜನಪರವಾದ ಆಡಳಿತ ನೀಡಲು ಯತ್ನಿಸಿದ್ದರು. ಒಂದು ಹಂತದಲ್ಲಿ ಇಂದಿರಾಗಾಂಧಿಯ ವ್ಯಕ್ತಿಕೇಂದ್ರಿತ ಆಡಳಿತ ಪರಾಕಾಷ್ಠೆಗೆ ತಲುಪಿ ತುರ್ತುಪರಿಸ್ಥಿತಿಯನ್ನು ಹೇರುವುದರ ಮೂಲಕ ಪ್ರಜಾಪ್ರಭುತ್ವಕ್ಕೆ ಮೊದಲ ಪೆಟ್ಟು ಕೊಟ್ಟರು.

ನಂತರ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ,ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಂತಹವರನ್ನು ದೆಹಲಿಗದ್ದುಗೆಯ ಮಟ್ಟದಲ್ಲಿ ಹೆಸರಿಸಿದರೆ ರಾಜ್ಯಗಳ ಮಟ್ಟದಲ್ಲಿದೇವೇಗೌಡ, ಸಿದ್ಧರಾಮಯ್ಯ, ಯಡಿಯೂರಪ್ಪ, ಜಯಲಲಿತಾ,ಕರುಣಾನಿಧಿ, ಶರದ್ ಪವಾರ್, ಮುಲಾಯಂ ಸಿಂಗ್ ಯಾದವ್,ಬಾಳಾಠಾಕ್ರೆ, ಮಾಯಾವತಿ, ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್ಇವರೆಲ್ಲರೂ ವ್ಯಕ್ತಿಕೇಂದ್ರಿತ ರಾಜಕಾರಣದಿಂದಲೇರೂಪುಗೊಂಡವರು. ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿರೂಪುಗೊಂಡ ನಾಯಕರನ್ನು ರಾಜಕಾರಣಿಗಳು ಮತ್ತುಮತದಾರರು ಒಪ್ಪಿಕೊಂಡಂತಿದೆ.

ಈ ವ್ಯಕ್ತಿಕೇಂದ್ರಿತ ರಾಜಕಾರಣದ ಮತ್ತೊಂದು ಅಪಾಯವೆಂದರೆ ಇದು ಕುಟುಂಬ ರಾಜಕಾರಣಕ್ಕೂ, ಸರ್ವಾಧಿಕಾರಕ್ಕೂ ಎಡೆಮಾಡಿಕೊಡುತ್ತದೆ. ಕರ್ನಾಟಕವನ್ನೇ ಉದಾಹರಿಸುವುದಾದರೆ ಬಂಗಾರಪ್ಪ, ದೇವೇಗೌಡ, ಯಡಿಯೂರಪ್ಪ, ಸಿದ್ಧರಾಮಯ್ಯ, ಜಾರಕಿಹೊಳಿ ಕುಟುಂಬ... ಎಲ್ಲರೂ ವ್ಯಕ್ತಿಕೇಂದ್ರಿತ ರಾಜಕಾರಣವನ್ನೇ ಮಾಡಿದ್ದಾರೆ. ಹೀಗೆ ಪಕ್ಷಭೇದವಿಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವ್ಯಕ್ತಿಕೇಂದ್ರಿತ ರಾಜಕಾರಣ ಪಸರಿಸಿದೆ. ಇವರ ಮಕ್ಕಳಿಗೆ ರಾಜಕೀಯ ಅಧಿಕಾರವೆಂಬುದು ಯಾವುದೇ ಪರಿಶ್ರಮವಿಲ್ಲದೆ, ಅನುಭವವಿಲ್ಲದಿದ್ದರೂ ದೊರೆಯುತ್ತದೆ. ಇಂಥವರಲ್ಲಿ ಅನೇಕರಿಗೆ ಯಾವುದೇ ಸಂಸದೀಯ ಅನುಭವವಿಲ್ಲದೆಯೂ ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆ ಎನ್ನಿಸುವ ಸಂಸತ್ತಿಗೆ ಹೋಗುತ್ತಾರೆ.

ಇಂದು ಬಿಜೆಪಿಯು ತನ್ನ ಸಿದ್ಧಾಂತವಾದ ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎನ್ನುವ ಪ್ರತಿಪಾದನೆಯೊಂದಿಗೆ ಒಬ್ಬನೇ ನಾಯಕನಿರಬೇಕು ಎನ್ನುವ ವಾದವನ್ನೂ ಚಾಲ್ತಿಗೆ ತಂದಿದೆ. ಇದರ ಫಲವೇ ನರೇಂದ್ರ ಮೋದಿಯನ್ನು ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದ್ದು. ದೇಶದ ಜ್ವಲಂತ ಸಮಸ್ಯೆಗಳಾದ, ನಿರುದ್ಯೋಗ, ಆರ್ಥಿಕ ಹಿಂಜರಿತಗಳನ್ನು ಮರೆಮಾಡಿ, ತಾವು ಆರಾಧಿಸುವ ವ್ಯಕ್ತಿ ಹೇಳುವ ಸುಳ್ಳುಗಳನ್ನೇ ನಂಬುವ ಸ್ಥಿತಿಗೆ ವ್ಯಕ್ತಿಕೇಂದ್ರಿತ ರಾಜಕಾರಣವು ಜನರನ್ನು ತಲುಪಿಸಿದೆ.

ಲೇಖಕ: ಪ್ರಾಧ್ಯಾಪಕ, ನ್ಯಾಷನಲ್ ಕಾಲೇಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.