ರಾಜ್ಯ ಸರ್ಕಾರವು ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲೆ ನಿಷೇಧ ಹೇರಿದೆ. ಆದರೆ ಸರ್ಕಾರದ ಈ ಕ್ರಮವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾನೂನಿನ ಮಿತಿಗಳು ಮತ್ತು ಈ ಟ್ಯಾಕ್ಸಿ ಸೇವೆಗಳನ್ನು ಪಡೆಯುವವರ ಸುರಕ್ಷತೆಯನ್ನು ಸರ್ಕಾರವು ಕಾರಣವಾಗಿ ನೀಡಿದೆ. ಆದರೆ, ಬೆಂಗಳೂರಿನಂತಹ ಸಂಚಾರ ದಟ್ಟಣೆಯ ನಗರಗಳಲ್ಲಿ ಹೊಸ ಬಗೆಯ ಸಂಚಾರ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಸರ್ಕಾರಕ್ಕೆ ಮನಸ್ಸು ಇಲ್ಲದಿರುವುದು ಈ ನಿಷೇಧದ ಹಿಂದಿನ ಕಾರಣ ಎಂಬಂತೆ ಕಾಣುತ್ತಿದೆ.

ಬೈಕ್ ಟ್ಯಾಕ್ಸಿ ಸೇವೆ ಒದಗಿಸಲು ಅನುವಾಗುವಂತೆ, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳು ಎಂದು ನೋಂದಾಯಿಸಲು ಅವಕಾಶ ನೀಡಬೇಕು ಎಂಬ ಸೂಚನೆ ನೀಡುವಂತೆ ಕೋರಿ ಉಬರ್, ಓಲಾ, ರ್ಯಾಪಿಡೋದಂತಹ ಕಂಪನಿಗಳು 2022ರಲ್ಲಿ ಹೈಕೋರ್ಟ್ ಮೊರೆ ಹೋದವು. ಆದರೆ ಸಾರಿಗೆ ಇಲಾಖೆಯು ಈ ಬಗೆಯ ಸೇವೆಗಳನ್ನು ಕಾನೂನುಬಾಹಿರ ಎಂದು ಹೇಳಿತ್ತು. ವೈಯಕ್ತಿಕ ಬಳಕೆಯ ಉದ್ದೇಶಕ್ಕೆ ನೋಂದಣಿ ಆಗಿರುವ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ಇಲ್ಲ ಎಂಬ ಕಾರಣವನ್ನು ಇಲಾಖೆ ನೀಡಿತ್ತು. ಅರ್ಜಿಗಳನ್ನು ಹೈಕೋರ್ಟ್ನ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠವು ವಜಾಗೊಳಿಸಿದ್ದವು.

ಬೈಕ್ ಟ್ಯಾಕ್ಸಿ ಸೇವೆಗಳ ಬಗ್ಗೆ ನೀತಿ ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಲು ಪೀಠಗಳು ನಿರಾಕರಿಸಿ ದ್ದವು. ಅಗತ್ಯ ಮಾರ್ಗಸೂಚಿ ರೂಪಿಸಲು ಸರ್ಕಾರವು ಒಲವು ತೋರಿದ್ದರೆ ಬೈಕ್ ಟ್ಯಾಕ್ಸಿ ಸೇವೆ ಒದಗಿಸಲು ಅನುವು ಮಾಡಿಕೊಡುವ ಬಗ್ಗೆ ಪರಿಗಣಿಸಬಹುದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ನೇತೃತ್ವದ ಪೀಠವು ಹೇಳಿತ್ತು. ಆದರೆ ರಾಜ್ಯ ಸರ್ಕಾರವು ತನ್ನ ನಿಲುವನ್ನು
ಸ್ಪಷ್ಟಪಡಿಸಿತ್ತು. ನೀತಿ ರೂಪಿಸಲು ಅದಕ್ಕೆ ಮನಸ್ಸಿಲ್ಲ.

ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ನಿಷೇಧವು ಈಗ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿದೆ. ಇದರಿಂದಾಗಿ ಅಂದಾಜು ಒಂದು ಲಕ್ಷ ಬೈಕ್ ಟ್ಯಾಕ್ಸಿ ‘ಕ್ಯಾಪ್ಟನ್’ಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಈ ಸೇವೆಗಳನ್ನು ಒದಗಿಸುತ್ತಿದ್ದವರು ಪ್ರತಿವರ್ಷ ಎಂಟು ಕೋಟಿ ಟ್ರಿಪ್ಗಳನ್ನು ನಿರ್ವಹಿಸುತ್ತಿದ್ದರು ಎಂದು ವರದಿಗಳು ಹೇಳುತ್ತವೆ. ಆಟೊರಿಕ್ಷಾ ಚಾಲಕರು ಗ್ರಾಹಕರಿಗೆ ಹಲವು ಸಂದರ್ಭಗಳಲ್ಲಿ ಸೇವೆ ಒದಗಿಸಲು ನಿರಾಕರಿಸು ತ್ತಿರುವ ಈ ಹೊತ್ತಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ನಗರ ಸಾರಿಗೆಯ ಭವಿಷ್ಯ ಎಂಬಂತೆ ಕಾಣುತ್ತಿದ್ದವು. ಅವು ಕಡಿಮೆ ವೆಚ್ಚದಲ್ಲಿ, ಕಡಿಮೆ ಸಮಯದಲ್ಲಿ ಸೇವೆ ಒದಗಿ ಸುತ್ತಿದ್ದವು. ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡುವುದಕ್ಕೆ ನಿಯಮಗಳ ಚೌಕಟ್ಟು ಸರಿಯಾಗಿ ಇಲ್ಲ, ವಿಶೇಷವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆ, ವಿಮಾ ಸೌಲಭ್ಯದ ವಿಚಾರದಲ್ಲಿ ಸಮಸ್ಯೆಗಳು ಇವೆ ಎಂದು ಸರ್ಕಾರ ಹೇಳಿರುವುದರಲ್ಲಿ ಹುರುಳಿದೆ.

ಹೀಗಿದ್ದರೂ ಕಾನೂನು ರೂಪಿಸುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ನಿಷೇಧ ವಿಧಿಸುವುದು ಸರಿಯಾದ ಕ್ರಮ ಆಗುವುದಿಲ್ಲ. ಪರವಾನಗಿ ನೀಡುವುದಕ್ಕೆ ನಿಯಮಗಳನ್ನು ರೂಪಿಸುವುದು, ಸೇವೆಗಳನ್ನು ಒದಗಿಸುವವರಿಗೆ ಕಡ್ಡಾಯವಾಗಿ ತರಬೇತಿ ನೀಡುವುದು, ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಾಗ ವಿಮಾ ಸೌಲಭ್ಯ ಲಭ್ಯವಾಗುವಂತೆ ಮಾಡುವುದು ಹಾಗೂ ಸುರಕ್ಷತೆಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವುದರಿಂದ ಸರ್ಕಾರ ವ್ಯಕ್ತಪಡಿಸಿರುವ ಕಳವಳಗಳು ನಿವಾರಣೆ ಆಗಬಹುದು. ದ್ವಿಚಕ್ರ ವಾಹನಗಳು ‘ಬಾಡಿಗೆ ವಾಹನ’ ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ, ಆ ಮೂಲಕ ಅದು ಅಗತ್ಯ ನಿಯಮಗಳನ್ನು ರೂಪಿಸುವುದಕ್ಕೆ ರಾಜ್ಯಗಳಿಗೆ ಅನುವು ಮಾಡಿಕೊಟ್ಟಿದೆ. ಹೀಗಿದ್ದರೂ ಇದು ‘ಪಾಲಿಸಲೇಬೇಕಾದ’ ಮಾರ್ಗಸೂಚಿ ಅಲ್ಲ ಎಂಬ ನಿಲುವನ್ನು ರಾಜ್ಯ ಸರ್ಕಾರ ತಾಳಿದೆ.

ರಾಜ್ಯ ಸರ್ಕಾರವು ಪ್ರತಿಗಾಮಿ ನಡೆಯನ್ನು ಇರಿಸಿದೆ. ಸಾರಿಗೆ ಸೌಲಭ್ಯಗಳ ವಿಚಾರದಲ್ಲಿ ಹೆಚ್ಚುತ್ತಿರುವ ಅಗತ್ಯಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿರುವುದಷ್ಟೇ ಅಲ್ಲದೆ, ಈ ಸೇವೆಗಳನ್ನು ನೆಚ್ಚಿಕೊಂಡಿದ್ದ ಸಹಸ್ರಾರು ಮಂದಿಗೆ ಜೀವನೋಪಾಯವನ್ನು ಸರ್ಕಾರ ನಿರಾಕರಿಸಿದೆ. ಬೈಕ್ ಟ್ಯಾಕ್ಸಿಗಳಿಗೆ ಕಡಿಮೆ ಸ್ಥಳಾವಕಾಶ ಇದ್ದರೆ ಸಾಕು, ಅವು ಸೋಲುತ್ತಿರುವ ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಒದಗಿಸದೇ ಇರುವ ಸೇವೆಗಳನ್ನು ಒದಗಿಸುತ್ತವೆ. ಸರ್ಕಾರದ ದೂರದೃಷ್ಟಿ ಇಲ್ಲದ ನಡೆಯು ಹೊಸತನಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಈಗ ಬೈಕ್ ಟ್ಯಾಕ್ಸಿ ಸೇವೆಗಳ ಮೇಲೆ ಹೇರಿರುವ ನಿಷೇಧವು ಕಾನೂನಿನ ಪ್ರಕಾರ ಸರಿಯಾಗಿಯೇ ಇರಬಹುದು. ಆದರೆ ಅದು ನ್ಯಾಯಸಮ್ಮತವೇ? ಅದಕ್ಕಿಂತ ಹೆಚ್ಚಾಗಿ, ಈ ಕ್ರಮವು ವಿವೇಕಯುತವಾದುದೇ? ರಾಜ್ಯ ಸರ್ಕಾರವು ಸಂಕುಚಿತ ಮನಃಸ್ಥಿತಿಯಿಂದ ಆಲೋಚನೆ ಮಾಡುವುದನ್ನು ಬಿಡಬೇಕು. ಆಧುನಿಕ, ಒಳಗೊಳ್ಳುವ ಮತ್ತು ವಾಸ್ತವವಾದಿ ಧೋರಣೆ ಹೊಂದಿರುವ ಕಾನೂನಿನ ಚೌಕಟ್ಟನ್ನು ರೂಪಿಸಬೇಕು. ಹಿಂದಿನ ಕಾಲದ ನೀತಿಗಳನ್ನು ಇಟ್ಟುಕೊಂಡು ಭವಿಷ್ಯದ ನಗರವನ್ನು ಕಟ್ಟಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.