ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆಯ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವುದು ನ್ಯಾಯ
ದಾನ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಪಾಲನೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿದೆ. ಈ ಇಬ್ಬರು ಐದು ವರ್ಷಗಳಿಂದ ಸೆರೆಮನೆಯಲ್ಲಿ ಇದ್ದಾರೆ. ಇವರ ಜೊತೆಗೆ ಬಂಧಿಸಲಾಗಿದ್ದ ಇತರ ಐವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ. ದೇಶದಲ್ಲಿ ಜಾರಿಯಲ್ಲಿರುವ ಅತ್ಯಂತ ಕ್ರೂರ ಕಾಯ್ದೆ ಇದು. ಪ್ರಜಾಪ್ರಭುತ್ವದ ಸ್ಫೂರ್ತಿ ಮತ್ತು ಅತ್ಯುತ್ತಮ ರೂಢಿಗಳನ್ನು ಇದು ಉಲ್ಲಂಘಿಸುತ್ತದೆ. ಸಲ್ಲಿಕೆಯಾಗಿರುವ ದಾಖಲೆಗಳನ್ನು ಗಮನಿಸಿದರೆ ಪ್ರಾಸಿಕ್ಯೂಷನ್ ವಾದದಲ್ಲಿ ಹುರುಳಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ; ಹಾಗಾಗಿ, ಜಾಮೀನು ನೀಡಿಕೆಗೆ ಕಾಯ್ದೆಯಲ್ಲಿ ಇರುವ ನಿರ್ಬಂಧವನ್ನು ಪಾಲಿಸಬೇಕಾಗುತ್ತದೆ ಎಂದು ಯುಎಪಿಎಯ ಸೆಕ್ಷನ್ 43(5)ಡಿಯನ್ನು ಉಲ್ಲೇಖಿಸಿ ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಈ ಅಭಿಪ್ರಾಯವು ನಿರಾಶಾದಾಯಕ; ಏಕೆಂದರೆ, ಸರ್ಕಾರವೊಂದರ ಪೂರ್ವಗ್ರಹ ಮತ್ತು ಸೇಡಿನ ಕ್ರಮಕ್ಕೆ ಒಳಗಾದ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಇಲ್ಲಿಯವರೆಗೂ ಸದಾ ರಕ್ಷಣೆ ನೀಡಿದೆ ಹಾಗೂ ಸಂವಿಧಾನವು ನೀಡಿದ ಮೂಲಭೂತ ಸ್ವಾತಂತ್ರ್ಯವನ್ನು ಸಂರಕ್ಷಿಸಿದೆ.
.ಸಂಪಾದಕೀಯ Podcast: ಬುಧವಾರ, 07 ಜನವರಿ 2026.
ಇದೇ ನ್ಯಾಯಾಲಯವು ಈ ಹಿಂದೆ ಹಾಕಿಕೊಟ್ಟು ಪಾಲಿಸಿದ ತತ್ತ್ವಗಳು ಮತ್ತು ಇತರ ನ್ಯಾಯಾಲಯಗಳಿಗಾಗಿ ರೂಪಿಸಿದ ಹಲವು ಮಾರ್ಗಸೂಚಿಗಳನ್ನು ಈಗಿನ ತೀರ್ಪುನಿರ್ಲಕ್ಷಿಸಿದೆ. ಕಾನೂನಿನಲ್ಲಿರುವ ಅವಕಾಶಗಳ ನೇರವಲ್ಲದ ವ್ಯಾಖ್ಯಾನದ ಮೂಲಕ ಅಪಾಯಕಾರಿ ಪೂರ್ವ ನಿದರ್ಶನವನ್ನು ಇದು ಸೃಷ್ಟಿಸಿದೆ; ನಿರಂಕುಶ ಕ್ರಮವನ್ನು ಕಾನೂನುಬದ್ಧಗೊಳಿಸುವ ಮೂಲಕ ಪ್ರತಿಭಟನಕಾರ, ಭಿನ್ನಮತೀಯ ಅಥವಾ ಹೋರಾಟಗಾರನೊಬ್ಬನನ್ನು ಸರ್ಕಾರವು ಬಂಧಿಸಿಟ್ಟಿರುವ ಕ್ರಮವನ್ನು ಸಹಜಗೊಳಿಸಿದೆ. ಯುಎಪಿಎ ಅಡಿಯಲ್ಲಿ ಬಂಧಿತರಾದವರು ಜಾಮೀನು ಪಡೆಯುವುದು ಬಹಳ ಕಷ್ಟಕರ. ಈಗಿನ ತೀರ್ಪು ಅದನ್ನು ಇನ್ನಷ್ಟು ಕ್ಲಿಷ್ಟಗೊಳಿಸಿದೆ. ಐವರಿಗೆ ಜಾಮೀನು ನೀಡಿದ ನ್ಯಾಯಾಲಯವು ಇತರ ಇಬ್ಬರಿಗೆ ಜಾಮೀನು ನಿರಾಕರಿಸುವುದಕ್ಕಾಗಿ ‘ಪಾಲ್ಗೊಳ್ಳುವಿಕೆಯ ಪ್ರಮಾಣ’ದಲ್ಲಿ ವ್ಯತ್ಯಾಸವಿದೆ ಎಂದು ಹೇಳಿದೆ. ಈ ವ್ಯತ್ಯಾಸದ ಉಲ್ಲೇಖವು ಪ್ರಶ್ನಾರ್ಹ ಮತ್ತು ಮುಂದಿನ ದಿನಗಳಲ್ಲಿ ಜಾಮೀನು ನಿರಾಕರಣೆಗೆ ಕಾರಣವೂ ಆಗಬಹುದು. ವಿಚಾರಣೆಯು ಬೇಗನೆ ಮುಗಿಯುವ ಸಾಧ್ಯತೆ ಇಲ್ಲ ಎಂದಾದರೆ, ಭಯೋತ್ಪಾದನೆ ಪ್ರಕರಣಗಳಲ್ಲಿಯೂ ಆರೋಪಿಗೆ ಜಾಮೀನು ಪಡೆದುಕೊಳ್ಳುವ ಹಕ್ಕು ಇದೆ ಎಂದು ನ್ಯಾಯಾಲಯ ಈ ಹಿಂದೆ ಹೇಳಿದ್ದಿದೆ. ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ವಿರುದ್ಧ ಇನ್ನೂ ಆರೋಪ ನಿಗದಿ ಮಾಡಿಲ್ಲ, ಪ್ರಕರಣದಲ್ಲಿ 700 ಸಾಕ್ಷಿಗಳಿದ್ದಾರೆ. ಹೀಗಾಗಿ ವಿಚಾರಣೆ ಸುದೀರ್ಘವಾಗಿ ನಡೆಯಲಿದೆ. ಈಇಬ್ಬರ ವಿಚಾರಣಾಪೂರ್ವ ಸೆರೆವಾಸವು‘ಸಾಂವಿಧಾನಿಕವಾಗಿ ಅನುಮತಿಸಬಾರದ ಹಂತ’ಕ್ಕೆ ಇನ್ನೂ ತಲಪಿಲ್ಲ ಎಂದು ನ್ಯಾಯಾಲಯ ಹೇಳಿದೆ. ‘ಈ ತೀರ್ಪು ಬಂದ ದಿನಾಂಕದಿಂದ ಒಂದು ವರ್ಷ ಕಳೆದು ಜಾಮೀನಿಗೆ ಅರ್ಜಿ ಹಾಕಬಹುದು’ ಎಂದು ಹೇಳಲಾಗಿದೆ. ಇದೊಂದು ಕ್ರೂರ ಔದಾರ್ಯ; ಆದರೆ ಒಂದು ವರ್ಷದ ಗಡುವು ಏಕೆ? ಒಂದು ವರ್ಷದ ಗಡುವಿಗೆ ಇರುವ ಕಾನೂನು ಅಥವಾ ಸಾಂವಿಧಾನಿಕ ನೆಲಗಟ್ಟು ಏನು? ವಿಚಾರಣೆಯ ವಿಳಂಬವು ಆರೋಪಿ ಜಾಮೀನು ಪಡೆಯಲು ‘ಮುಖ್ಯ ಕಾರಣ’ ಆಗಲಾರದು ಎಂಬ ನಿಲುವು ಕೂಡ ಸರ್ಕಾರಕ್ಕೇ ನೆರವಾಗುತ್ತದೆ. ಸರ್ಕಾರವು ವಿಚಾರಣೆಯನ್ನು ವಿಳಂಬಗೊಳಿಸಿದಾಗ ಕಾನೂನಿನಲ್ಲಿ ಇರುವ ಪ್ರಯೋಜನವನ್ನು ಆರೋಪಿಗೆ ನಿರಾಕರಿಸಿದಂತಾಗಿದೆ.

ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರು ‘ಮುಖ್ಯ ಪಾತ್ರ’ ವಹಿಸಿದ್ದರೆಇತರರು ‘ಸಂಚಿನಲ್ಲಿ ಭಾಗಿ ಮಾತ್ರ ಆಗಿದ್ದರು’ ಎಂಬ ಪ್ರಾಸಿಕ್ಯೂಷನ್ನ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ಸಾಕ್ಷ್ಯಗಳ ಪರಿಶೀಲನೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿಲ್ಲ; ಬದಲಿಗೆ ಪ್ರಾಸಿಕ್ಯೂಷನ್ನ ವಾದದ ಆಧಾರದಲ್ಲಿ ಈ ನಿಲುವು ತೆಗೆದುಕೊಳ್ಳಲಾಗಿದೆ. ಇಂತಹ ಸಾಕ್ಷ್ಯಗಳು ದುರ್ಬಲ ಮತ್ತು ನ್ಯಾಯಾಂಗದ ತೀರ್ಮಾನಗಳಿಗೆ ಆಧಾರ ಆಗಬಾರದು. ಜಾಮೀನು ಅರ್ಜಿಯು ಕಿರು ವಿಚಾರಣೆಗೆ ವೇದಿಕೆ ಆಗಬಾರದು ಎಂದು ನ್ಯಾಯಾಲಯವು ಹೇಳಿದ್ದರೂ ಅದನ್ನೇ ಮಾಡಿದಂತೆ ಕಾಣಿಸುತ್ತಿದೆ.

ಭಯೋತ್ಪಾದನೆಯ ವ್ಯಾಖ್ಯೆಯ ವಿಸ್ತರಣೆಯು ತೀರ್ಪಿನ ಅತ್ಯಂತ ಕಳವಳಕಾರಿ ಅಂಶ. ಕಾಯ್ದೆಯ ಸೆಕ್ಷನ್ 15 ಅನ್ನು ‘ಹಿಂಸಾತ್ಮಕ ಕೃತ್ಯಗಳಿಗೆ ಮಾತ್ರ ಅನ್ವಯ ಎಂದು ಸಂಕುಚಿತ’ವಾಗಿ ವ್ಯಾಖ್ಯಾನಿಸಬಾರದು. ‘ಸೇವೆಗಳಿಗೆ ಅಡ್ಡಿ ಮತ್ತು ಆರ್ಥಿಕತೆಗೆ ಬೆದರಿಕೆ’ ಎಂಬುದನ್ನೂ ಈ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು. ಭಯೋತ್ಪಾದಕ ಕೃತ್ಯ ಎಂಬುದು ಬಾಂಬ್ ಸ್ಫೋಟ, ಗುಂಡು ಹಾರಾಟ ಅಥವಾ ಇತರ ಹಿಂಸಾತ್ಮಕ ಚಟುವಟಿಕೆಗಳಷ್ಟೇ ಅಲ್ಲ ಎಂದು ಕೋರ್ಟ್ ಹೇಳಿದೆ. ಇದೊಂದು ಅಪಾಯಕಾರಿ ವ್ಯಾಖ್ಯಾನ. ಇದು ಕಾಯ್ದೆಯ ಪಠ್ಯ ಮತ್ತು ಅದರ ಸಹಜ ಓದಿನ ವ್ಯಾಪ್ತಿ ಮೀರಿ ಸಾಗುತ್ತದೆ. ಯಾವುದೇ ಚಳವಳಿ ಅಥವಾ ಯಾವುದೇ ವ್ಯಕ್ತಿಯ ವಿರುದ್ಧ ಈ ಕಾಯ್ದೆಯನ್ನು ಅನ್ವಯಿಸುವುದಕ್ಕೂ ಸರ್ಕಾರಕ್ಕೆ ಈ ವ್ಯಾಖ್ಯೆ ನೆರವಾಗಬಹುದು. ಸೆಕ್ಷನ್ 15ರಲ್ಲಿ ವ್ಯಾಖ್ಯಾನಿಸಿದಂತೆ, ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರು ತಮ್ಮ ಭಾಷಣಗಳು, ಧರಣಿಗಳು ಇತ್ಯಾದಿ ಮೂಲಕ ಭಯೋತ್ಪಾದಕ ಕೃತ್ಯದ ಜೊತೆಗೆ ನೇರ ಸಂಬಂಧ ಹೊಂದಿದ್ದಾರೆ ಎಂದು ನಂಬಲು ಬೇಕಾದಷ್ಟು ಕಾರಣಗಳು ಇವೆ ಎಂದು ಕೋರ್ಟ್ ಹೇಳಿದೆ. ಪುರಾವೆ ಸಲ್ಲಿಸುವ ಹೊರೆಯನ್ನು ಆರೋಪಿಯ ಮೇಲೆಯೇ ಹೊರಿಸುವ ಕಾಯ್ದೆಗಳ ಬಗ್ಗೆ ನ್ಯಾಯಾಲಯಗಳು ಸಾಮಾನ್ಯವಾಗಿ ತೃಪ್ತಿ ಹೊಂದಿರುವುದಿಲ್ಲ. ಸಾಮಾನ್ಯ ಪ್ರಜಾಸತ್ತಾತ್ಮಕ ಚಟುವಟಿಕೆಗಳನ್ನು ಕೂಡ ಭಯೋತ್ಪಾದನೆ ತಡೆ ಕಾಯ್ದೆಯ ಅಡಿಯಲ್ಲಿ ಸೇರಿಸಿ ನಿರಪರಾಧಿತ್ವವನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಆರೋಪಿಯೇ ಒದಗಿಸುವಂತಹ ಸ್ಥಿತಿಯನ್ನು ಈ ತೀರ್ಪು ನಿರ್ಮಿಸುತ್ತದೆ. ದೇಶದಲ್ಲಿ ಅತಿ ಹೆಚ್ಚು ದುರ್ಬಳಕೆಯಾದ ಕಾಯ್ದೆ ಇದು ಎಂಬುದನ್ನು ಗಮನದಲ್ಲಿ ಇರಿಸಿಕೊಂಡರೆ ಯುಎಪಿಎಯ ಇಂತಹ ವ್ಯಾಖ್ಯೆಯ ಅಪಾಯದ ಅರಿವಾಗುತ್ತದೆ.

ಪೌರರ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಪೌರರ ಪರ ನಿಲ್ಲಬೇಕೇ ವಿನಾ ಸರ್ಕಾರದ ಪರ ಅಲ್ಲ. ಪೌರರ ವಿರುದ್ಧ ಅತಿರೇಕ ಎಸಗಿದ ಪ್ರಕರಣಗಳಲ್ಲಿ ನ್ಯಾಯಾಲಯಗಳೂ ಸರ್ಕಾರವನ್ನು ಬೆಂಬಲಿಸಿದರೆ, ಹಕ್ಕುಗಳ ದಮನದ ವಿಚಾರದಲ್ಲಿ ಇನ್ನಷ್ಟು ಅವಕಾಶಗಳನ್ನು ಕೊಟ್ಟಂತಾಗುತ್ತದೆ. ವೈಯಕ್ತಿಕ ಸ್ವಾತಂತ್ರ್ಯವು ಅತ್ಯಂತ ಮಹತ್ವಪೂರ್ಣವಾದುದು ಮತ್ತು ಸುದೀರ್ಘವಾದ ಜೈಲುವಾಸವು ಬಹಳ ಕಳವಳಕಾರಿ ಎಂದು ಕೋರ್ಟ್ ಹೇಳಿದೆ. ಆದರೆ, ತೀರ್ಪಿನ ಅನುಷ್ಠಾನ ಭಾಗದಲ್ಲಿ ಈ ಕಳವಳವು ವ್ಯಕ್ತವಾಗಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪುಗಳು ಕಾನೂನು ಆಗುತ್ತವೆ. ಈಗಿನ ತೀರ್ಪು ಕ್ರೂರ ಕಾನೂನನ್ನು ಇನ್ನಷ್ಟು ಕ್ರೂರವಾಗಿಸಿದೆ. ಹಾಗೆಯೇ ನ್ಯಾಯಶಾಸ್ತ್ರದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಹಿಂದಕ್ಕೆ ಒಯ್ದಿದೆ. ಇದು ಮರುಪರಿಶೀಲನೆಗೆ ಒಳಪಡಲಿ ಎಂಬ ಭರವಸೆಯನ್ನು ಇರಿಸಿಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.