ಗುರುವಾರ , ಏಪ್ರಿಲ್ 9, 2020
19 °C

50 ವರ್ಷಗಳ ಹಿಂದೆ | ಶುಕ್ರವಾರ, 13-3-1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ: ರಾಜ್ಯದ ಹಕ್ಕು ರಕ್ಷಿಸಲು ಪಂಚಾಯಿತಿಗೆ ಹೋಗಲು ಒತ್ತಾಯ
ಬೆಂಗಳೂರು, ಮಾರ್ಚ್‌ 12– ಕಾವೇರಿ ನೀರಿನಲ್ಲಿ ಮೈಸೂರು ರಾಜ್ಯದ ಹಕ್ಕನ್ನು ರಕ್ಷಿಸಲು ತತ್‌ಕ್ಷಣ ಪಂಚಾಯಿತಿಗೆ ಹೋಗಬೇಕೆಂದು ಇಂದು ವಿಧಾನಸಭೆಯಲ್ಲಿ ಸದಸ್ಯರು ಒತ್ತಾಯ ಸಲ್ಲಿಸಿದರು.

ಕೇಂದ್ರ ಮಂತ್ರಿ ಡಾ. ಕೆ.ಎಲ್‌.ರಾವ್‌ ಅವರು ಸಂಸತ್ತಿನಲ್ಲಿ ಮೈಸೂರು, ಹೇಮಾವತಿ ಮೊದಲಾದ ಯೋಜನೆಗಳನ್ನು ತತ್‌ಕ್ಷಣ ನಿಲ್ಲಿಸಬೇಕೆಂದು ಸಲಹೆ ಮಾಡಿದುದರ ಬಗ್ಗೆ ಎರಡೂವರೆ ಗಂಟೆಗಳ ವಿಶೇಷ ಸೂಚನೆಯನ್ನು ಹಲವು ಸದಸ್ಯರು ಮಂಡಿಸಿದರು. ಡಾ. ರಾವ್‌ ಮತ್ತು ಕೇಂದ್ರ ಸರ್ಕಾರದ ವರ್ತನೆಯನ್ನು ಕಟುವಾಗಿ ಟೀಕಿಸಿದರು.

‘ಭಾಷಾ ಆಧಾರದ ಮೇಲೆ ಗಡಿಗಳ ಪುನರ್‌ರಚನೆಯಿಂದ ಅನಾಹುತ’
ಬೆಂಗಳೂರು, ಮಾರ್ಚ್‌ 12– ರಾಜ್ಯಗಳ ಗಡಿಯನ್ನು ಭಾಷಾ ಆಧಾರದ ಮೇಲೆ ಪುನರ್‌ರಚಿಸುವುದು ತೀವ್ರ ಅನಾಹುತಕ್ಕೆ ಎಡೆಗೊಡುವುದೆಂದು ರಾಜ್ಯದ ನಾಲ್ಕು ಮಂದಿ ಹಿರಿಯರು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಮಾಜಿ ದಿವಾನರಾದ ಶ್ರೀ ಎನ್‌. ಮಾಧವರಾವ್‌, ಶ್ರೀ ಸಿ.ಎಸ್‌.ವೆಂಕಟಾಚಾರ್‌, ಡಾ. ಡಿ.ವಿ. ಗುಂಡಪ್ಪ ಮತ್ತು ಪಿ.ಕೋದಂಡರಾವ್‌ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)