ಶುಕ್ರವಾರ, 12–7–1968

7
ವರ್ಷ

ಶುಕ್ರವಾರ, 12–7–1968

Published:
Updated:

ರಾಜ್ಯದ ಹಲವೆಡೆ ಮಳೆಯೇ ಬೀಳದೆ ರೈತರಲ್ಲಿ ಕಳವಳ
ಬೆಂಗಳೂರು, ಜು. 11– ‘ಧಾನ್ಯವಿದ್ದರೂ ಕೊಳ್ಳಲು ಕಾಸಿಲ್ಲ. ಶಕ್ತಿ ಇದ್ದರೂ ದುಡಿಯಲು ಬದುಕಿಲ್ಲ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದ ಅನೇಕ ಗ್ರಾಮಗಳ ಭೂರಹಿತ ಕೂಲಿಕಾರರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ವರದಿ ಬಂದಿದೆ. ತುಮಕೂರು ಜಿಲ್ಲೆಯಲ್ಲಿ ಒಣಗಿದ ಕೆರೆ ಅಂಗಳದಲ್ಲಿ ಗೆಡ್ಡೆ ಹುಡುಕಿ ತಿನ್ನುವ ಪರಿಸ್ಥಿತಿ ಇದೆಯೆಂದು ಹಲವರು ವಿವರಿಸಿದ್ದಾರೆ.

ಪ್ರಜಾವಾಣಿ ಮತ್ತಿತರ ಪತ್ರಿಕೆಗಳ ಬಗ್ಗೆ ಆಂಧ್ರ ವಿಧಾನಸಭೆ ಚರ್ಚೆ ಸೋಮವಾರ
ಹೈದರಾಬಾದ್, ಜು. 11–
ಬೆಂಗಳೂರಿನ ಪ್ರಮುಖ ದಿನಪತ್ರಿಕೆಯಾದ ‘ಪ್ರಜಾವಾಣಿ’ಯೂ ಸೇರಿ 19 ಪತ್ರಿಕೆಗಳನ್ನು ‘ಕೋಮುವಾದಿ’ ಎಂದು ಹೆಸರಿಸಿ ಆಂಧ್ರಪ್ರದೇಶ ಸರಕಾರ ಹೊರಡಿಸಿರುವ ಆಜ್ಞೆ ವಿಷಯ ಕುರಿತು ಆಂಧ್ರಪ್ರದೇಶ ವಿಧಾನಸಭೆಯು ಸೋಮವಾರ ಚರ್ಚೆ ನಡೆಸುವುದು.

ಆಂಧ್ರ ವಿಧಾನಸಭೆಯ ಎಲ್ಲ ಗುಂಪುಗಳಿಗೆ ಸೇರಿದ ಸುಮಾರು 20 ಮಂದಿ ವಿರೋಧ ಪಕ್ಷದ ಸದಸ್ಯರು ಈ ವಿಷಯದ ಬಗ್ಗೆ ಚರ್ಚಿಸಲು ನಿಲುವಳಿ ಸೂಚನೆಯ ನೋಟೀಸ್ ಕೊಟ್ಟಿದ್ದರು.

ಡಿ ಗಾಲ್‌ರ ಉತ್ತರಾಧಿಕಾರಿ ಪಾಂಪಿಡೊ?
ಪ್ಯಾರಿಸ್, ಜು. 11–
ಮುಂದೆ ಯಾವುದಾದರೊಂದು ದಿನ ತಮ್ಮ ಉತ್ತರಾಧಿಕಾರಿಯಾಗುವುದಕ್ಕೆ ಜಾರ್ಜ್ ಪಾಂಪಿಡೊ ಅವರಿಗೆ ಅಧ್ಯಕ್ಷ ಡಿಗಾಲ್ ಅವರು ಅವಕಾಶ ಮಾಡಿಕೊಟ್ಟಿರುವಂತೆ ಕಂಡುಬಂದಿದೆ.

ಅಟಾರ್ನಿ ಜನರಲ್ ಹುದ್ದೆ: ಶ್ರೀ ಪಾಲ್ಖಿವಾಲಾ ನಿರಾಕರಣೆ
ಮುಂಬೈ, ಜು. 11–
ಭಾರತದ ಅಟಾರ್ನಿ ಜನರಲ್ ಹುದ್ದೆ ನೀಡಿದ್ದುದನ್ನು ಮುಂಬೈನ ಪ್ರಮುಖ ವಕೀಲರಾದ ಶ್ರೀ ಎನ್.ಎ. ವಾಲ್ಖಿವಾಲಾ ಅವರು ನಿರಾಕರಿಸಿದ್ದಾರೆಂದು ಇಂದು ಇಲ್ಲಿ ಅಧಿಕೃತವಾಗಿ ತಿಳಿದು ಬಂದಿದೆ.

ಆಂಧ್ರ ವಿಧಾನಸಭೆಯಲ್ಲಿ ಆರೋಪ ‘ರೆವೆನ್ಯು ಅಧಿಕಾರಿಗಳನ್ನು ಒದೆಯಲು ರೈತರಿಗೆ ತಿಮ್ಮಾರೆಡ್ಡಿ ಪ್ರಚೋದನೆ’ (ಪ್ರಜಾವಾಣಿ ಪ್ರತಿನಿಧಿಯಿಂದ)
ಹೈದರಾಬಾದ್, ಜು. 11–
‘ಆಂಧ್ರದ ಕೃಷಿ ಸಚಿವ ತಿಮ್ಮಾರೆಡ್ಡಿ ಅವರು ಅನಂತಪುರದ ಸಭೆಯೊಂದರಲ್ಲಿ ಮಾತನಾಡುತ್ತಾ ಹೆಚ್ಚು ಭೂ ಕಂದಾಯವನ್ನು ವಸೂಲಿ ಮಾಡಲು ರೆವೆನ್ಯೂ ಅಧಿಕಾರಿಗಳು ಯತ್ನಿಸಿದರೆ ಅವರನ್ನು ಒದೆಯಬೇಕೆಂದು ರೈತರಿಗೆ ತಿಳಿಸಿದರು’ ಎಂದು ಆಂಧ್ರ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಬಿ. ರತ್ನ ಸಭಾಪತಿ ಅವರು ನಿನ್ನೆ ಆಶ್ಚರ್ಯವನ್ನುಂಟು ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !