ರಾಜ್ಯಸಭೆಗೆ ಡಾ.ಆಳ್ವಾ, ನಾಗರಾಜಮೂರ್ತಿ, ಮುಲ್ಕಾ, ಮಲ್ಲೇಗೌಡ
ಬೆಂಗಳೂರು ಮಾ.28– ಸಂಸ್ಥಾ ಕಾಂಗ್ರೆಸ್ಸಿನ ಡಾ. ಕೆ. ನಾಗಪ್ಪ ಆಳ್ವ ಮತ್ತು ಬಿ.ಸಿ. ನಾಗರಾಜಮೂರ್ತಿ, ಪಿಎಸ್.ಪಿ.ಯ ಶ್ರೀ ಮುಲ್ಕಾ ಗೋವಿಂದರೆಡ್ಡಿ ಮತ್ತು ಪಕ್ಷೇತರರಾದ ಶ್ರೀ ಕೆ.ಎಸ್. ಮಲ್ಲೇಗೌಡ ಅವರುಗಳು ಇಂದು ರಾಜ್ಯಸಭೆಗೆ ಚುನಾಯಿತರಾದರು.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಎಂಟು ಮಂದಿ ಸ್ಪರ್ಧಿಸಿದ್ದು ಸಂಸ್ಥಾ ಕಾಂಗ್ರೆಸ್ಸಿನ ಮೂರನೇ ಅಭ್ಯರ್ಥಿ ಎಂ.ಎಲ್. ನಂಜರಾಜೇ ಅರಸ್ ಹಾಗೂ ಆಡಳಿತ ಕಾಂಗ್ರೆಸ್ಸಿನ ಎ.ವಿ ಪಾಟೀಲ್ ಅವರುಗಳು ಸೂತು ಹೋದರು.

ವಿಧಾನಸಭೆಯ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯ ಸಂಖ್ಯೆಗಿಂತ ಏ.ವಿ. ಪಾಟೀಲ್ ಅವರು ಹೆಚ್ಚು ಮತಗಳನ್ನು ಗಳಿಸಿದರೂ, ಇನ್ನೂ ಮೂರು ವೋಟುಗಳನ್ನು ಗಳಿಸಿದ್ದರೆ, ಜಯಪಡೆಯುತ್ತಿದ್ದರು.

ಪಂಚಾಯಿತಿ ರಾಜ್ಯ ಹೊಸ ವಿಧೇಯಕ
ಬೆಂಗಳೂರು ಮಾ.28– ಬಹುಕಾಲದಿಂದ ನಿರೀಕ್ಷಿಸಲಾಗಿದ್ದ ಪಂಚಾಯಿತಿ ರಾಜ್ಯದ ಮೂರನೇ ಹಂತವಾದ ಜಿಲ್ಲಾ ಪರಿಷತ್ತಿನ ರಚನೆ ಹಾಗೂ ನ್ಯಾಯ ಪಂಚಾಯ್ತಿಗಳ ನೇಮಕಕ್ಕೆ ಅವಕಾಶ ನೀಡುವ ಮೈಸೂರು ಪಂಚಾಯಿತಿ ರಾಜ್ಯ ವಿಧೇಯಕವನ್ನು ಅಭಿವೃದ್ಧಿ ಸಚಿವ ಪಿ.ಎಂ. ನಾಡಗೌಡ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.