ಮಂಗಳವಾರ, ನವೆಂಬರ್ 19, 2019
22 °C
ಶುಕ್ರವಾರ

ಕಾಂಗ್ರೆಸ್ಸಿಗೆ ಕಮ್ಯುನಿಸ್ಟರ ಪ್ರವೇಶ ನಿಗ್ರಹಕ್ಕೆ ನಿಜಲಿಂಗಪ್ಪ ಆಲೋಚನೆ

Published:
Updated:

ಕಾಂಗ್ರೆಸ್ಸಿಗೆ ಕಮ್ಯುನಿಸ್ಟರ ಪ್ರವೇಶ ನಿಗ್ರಹಕ್ಕೆ ನಿಜಲಿಂಗಪ್ಪ ಆಲೋಚನೆ

ಬೆಂಗಳೂರು, ಸೆ. 4– ಪಕ್ಷದೊಳಗೆ ಕಮ್ಯುನಿಸ್ಟರ ಪ್ರವೇಶವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತಾವು ಆಲೋಚಿಸುತ್ತಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ತಿಳಿಸಿದರು.

ಪಕ್ಷದೊಳಗೆ ಕಮ್ಯುನಿಸ್ಟರ ಪ್ರವೇಶ ಗಣನೀಯವಾಗಿ ಆಗಿಲ್ಲವಾದರೂ, ಎಲ್ಲ ಹಂತಗಳಲ್ಲೂ ಅವರ ಪ್ರವೇಶವಾಗಿದೆ. ಅವರು ಸಂಸ್ಥೆಯಲ್ಲಿ ಪ್ರಮುಖ ಸ್ಥಾನಗಳನ್ನು ಆಕ್ರಮಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಅಧ್ಯಕ್ಷ ಹೋ ಚಿ ಮಿನ್ ನಿಧನ

ಹಾಂಕಾಂಗ್, ಸೆ. 4– ಉತ್ತರ ವಿಯಟ್ನಾಂ ಅಧ್ಯಕ್ಷ ಹೋ ಚಿ ಮಿನ್‌ ಅವರು ಬುಧವಾರ ಬೆಳಿಗ್ಗೆ ಹಾನಾಯ್‌ನಲ್ಲಿ ನಿಧನರಾದರು.

79 ವರ್ಷ ವಯಸ್ಸಿನ ಹೋ ಚಿ ಮಿನ್ ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಮರಣ ಹೊಂದಿದರೆಂದು ಹಾನಾಯ್ ರೇಡಿಯೋ ಪ್ರಕಟಿಸಿತು.

ಪ್ರತಿಕ್ರಿಯಿಸಿ (+)