ಮಂಗಳವಾರ, 16–7–1968

7
ಮಂಗಳವಾರ

ಮಂಗಳವಾರ, 16–7–1968

Published:
Updated:

ಪಾಕಿಸ್ತಾನಕ್ಕೆ ರಷ್ಯಾ ಕ್ಷಿಪಣಿ ನೀಡದು

ನವದೆಹಲಿ, ಜು. 15– ಪಾಕಿಸ್ತಾನಕ್ಕೆ ಸೋವಿಯತ್‌ ರಷ್ಯಾ ಕ್ಷಿಪಣಿಗಳನ್ನು ಕೊಡುವುದಿಲ್ಲ. ಆದ್ದರಿಂದ ಭಾರತ ಕಳವಳಪಡಬೇಕಾದ್ದಿಲ್ಲವೆಂದು ರಷ್ಯಾದ ಉಪ ವಿದೇಶಾಂಗ ಸಚಿವ ಫಿರಾಬಿನ್ ಸ್ಪಷ್ಟಪಡಿಸಿದ್ದಾರೆ.

ಕಾಮರಾಜ್‌ಗೆ ಅರವತ್ತಾರು ವರ್ಷ

ಮದರಾಸು, ಜು. 15–  ಮಾಜಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜ್ ಅವರಿಗೆ ಇಂದಿಗೆ 65 ವರ್ಷ ತುಂಬಿತು. ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಟೆಲಿಫೋನ್ ಮೂಲಕ ಶ್ರೀ ಕಾಮರಾಜ್‌ ಅವರಿಗೆ 66ನೇ ಹುಟ್ಟು ಹಬ್ಬದ ಶುಭಾಶಯಗಳನ್ನರ್ಪಿಸಿದರು.

ಆಂಧ್ರದ ‘ಗಡಿದಾಹ’ದ ಬಗ್ಗೆ ಆಶ್ಚರ್ಯ

ಬೆಂಗಳೂರು, ಜು. 15– ಕೋಲಾರ ಜಿಲ್ಲೆ ಹಾಗೂ ರಾಜ್ಯದ ಇತರ ಐದು ಜಿಲ್ಲೆಗಳ ಅನೇಕ ಭಾಗ ಆಂಧ್ರಕ್ಕೆ ಸೇರಬೇಕೆಂದು ‘ಅಖಿಲ ಆಂಧ್ರಪ್ರದೇಶ ಗಡಿ ಸಮಿತಿ’ ಎಂಬ ಹೆಸರಿನಲ್ಲಿ ಬಂದಿರುವ ಬೇಡಿಕೆಯ ಬಗ್ಗೆ ಸರಕಾರಿ ವಲಯಗಳಲ್ಲಿ ಆಶ್ಚರ್ಯ ವ್ಯಕ್ತಪಡಿಸಲಾಗಿದೆ.

‘ಗಡಿದಾಹ’ ಎಂದು ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ವಕ್ತಾರರೊಬ್ಬರು ಎಂದೂ ಇಲ್ಲದ ಬೇಡಿಕೆ ಇದ್ದಕ್ಕಿದ್ದಂತೆ ಮುಂಬಂದಿರುವುದು ವಿಚಿತ್ರವಾಗಿದೆಯೆಂದು ‘ಪ್ರಜಾವಾಣಿ’ ಗೆ ತಿಳಿಸಿದರು.

ಹೇಮಾವತಿ ಅಣೆಯಿಂದ ತಮಿಳುನಾಡು ರೈತರಿಗೆ ಧಕ್ಕೆ ಎಂದು ಕರುಣಾನಿಧಿ

ಮದರಾಸು, ಜು. 15– ಮೈಸೂರು ಈಗ ನಿರ್ಮಾಣ ಆರಂಭಿಸಿರುವ ಹೇಮಾವತಿ ನೀರಾವರಿ ಯೋಜನೆಯಿಂದ ಮದರಾಸು ರಾಜ್ಯದ ರೈತರ ಹಿತಗಳಿಗೆ ಧಕ್ಕೆಯಾಗುವುದೆಂದು ಮದರಾಸಿನ ಕಾಮಗಾರಿ ಸಚಿವ ಎಂ. ಕರುಣಾನಿಧಿಯವರು ಇಲ್ಲಿ ಇಂದು ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !