ಮಂಗಳವಾರ, 6–8–1968/ ಬ್ಯಾಂಕಿಂಗ್ ಮಸೂದೆಗೆ ಲೋಕಸಭೆಯ ಒಪ್ಪಿಗೆ

7
ವಾರ

ಮಂಗಳವಾರ, 6–8–1968/ ಬ್ಯಾಂಕಿಂಗ್ ಮಸೂದೆಗೆ ಲೋಕಸಭೆಯ ಒಪ್ಪಿಗೆ

Published:
Updated:

ಬ್ಯಾಂಕಿಂಗ್ ಮಸೂದೆಗೆ ಲೋಕಸಭೆಯ ಒಪ್ಪಿಗೆ

ನವದೆಹಲಿ, ಆ. 5– ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆಗೆ ಲೋಕಸಭೆ ಇಂದು ಸಾಮಾನ್ಯವಾಗಿ ಒಪ್ಪಿಗೆ ನೀಡಿತು.

ಬ್ಯಾಂಕಿನ ಆವರಣದೊಳಗೆ ಸಿಬ್ಬಂದಿಯವರು ಪ್ರದರ್ಶನ ನಡೆಸುವುದನ್ನು ನಿಷೇಧಿಸುವುದರ ಮೂಲಕ ಈ ಮಸೂದೆಯು ನೌಕರರ ಹಕ್ಕಿಗೆ ಚ್ಯುತಿ ತಂದಿದೆ ಎಂಬ ಟೀಕೆಗಳನ್ನು ಶ್ರೀ ದೇಸಾಯಿ ಅವರು ತಿರಸ್ಕರಿಸಿದರು.

***

ಪ್ರಾಣಿಗಳೊಳು ದಯೆ ಇಡಿ

ಬೆಂಗಳೂರು, ಆ. 5– ‘ಪ್ರಾಣಿಗಳನ್ನು ಪ್ರೀತಿಸಿ ಪ್ರೀತಿಯನ್ನು ಕೃತಿಗಿಳಿಸಿ ನೀವು ಕೊಟ್ಟ ಪ್ರೀತಿಯ ನೂರುಪಟ್ಟು ಪ್ರೇಮ, ವಿಶ್ವಾಸ ಅವುಗಳಿಂದ ನಿಮಗೆ ಮರಳಿ ಬರುತ್ತದೆ’ – ಅಖಿಲ ಭಾರತ ಪ್ರಾಣಿ ದಯಾಸಂಘದ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿದೇವಿ ಅರುಂಡೇಲ್ ಅವರು ಮಕ್ಕಳಲ್ಲಿ ಸುಪ್ತವಾಗಿರುವ ಪ್ರಾಣಿದಯಾ ಮೈತ್ರಿಯನ್ನು ಪ್ರೇರೇಪಿಸಿದರು.

***

ಲಂಡನಿನಲ್ಲಿ ರಾಜ್ಯದ ವಾಣಿಜ್ಯ ಪ್ರತಿನಿಧಿ ಹುದ್ದೆ: ಬೆಂಬಲಕ್ಕೆ ಕಾಂಗ್ರೆಸ್ ಎಂ.ಪಿ.ಗಳ ನಿರ್ಧಾರ

ನವದೆಹಲಿ, ಆ. 5– ಲಂಡನ್ನಿನಲ್ಲಿರುವ ಮೈಸೂರು ರಾಜ್ಯದ ವಾಣಿಜ್ಯ ಪ್ರತಿನಿಧಿ ಹುದ್ದೆಯನ್ನು ಉಳಿಸಿಕೊಳ್ಳುವುದಕ್ಕೆ ಬೆಂಬಲ ಕೊಡಬೇಕೆಂದು ಸಂಸತ್ತಿನಲ್ಲಿರುವ ರಾಜ್ಯದ ಕಾಂಗ್ರೆಸ್ ಸದಸ್ಯರು ಇಂದು ಒಮ್ಮತದ ನಿರ್ಧಾರ ಕೈಗೊಂಡರು.

ಹುದ್ದೆಯನ್ನು ತೆಗೆದು ಹಾಕಿದರೆ ರಾಜ್ಯವು ಶ್ರೀಗಂಧದ ಎಣ್ಣೆ ಮತ್ತು ರೇಷ್ಮೆಯ ರಫ್ತಿನಿಂದ ಗಳಿಸುತ್ತಿರುವ ವಿದೇಶಿ ವಿನಿಮಯದ ನಷ್ಟವನ್ನು ಕೇಂದ್ರವು ತುಂಬಿಕೊಡಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !