ಬುಧವಾರ, 21–8–1968

7

ಬುಧವಾರ, 21–8–1968

Published:
Updated:

ಸಹಕಾರಕ್ಕಾಗಿ ಸಂಧಾನ ಬೇಗ ಮುಗಿಯಲಿ: ಜತ್ತಿ

ಬೆಂಗಳೂರು, ಆ. 20– ತಮ್ಮ ಗುಂಪಿನ ಸಹಕಾರ ಪಡೆಯಲು ಆರಂಭಿಸಿದ ಮಾತುಕತೆಗಳನ್ನು ಸೆಪ್ಟೆಂಬರ್‌ 2ರಂದು ವಿಧಾನಮಂಡಲ ಅಧಿವೇಶನ ಆರಂಭವಾಗುವ ಮುನ್ನ ಮುಗಿಸಬೇಕೆಂದು ಸಲಹೆ ಮಾಡಿ ಮಾಜಿ ಸಚಿವ ಶ್ರಿ ಬಿ.ಡಿ. ಜತ್ತಿ ಅವರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ.

ಪಂಜಾಬಿನಲ್ಲಿ ಹೊಸ ಚುನಾವಣೆಗೆ ಕಾಂಗ್ರೆಸ್‌ ನಿರ್ಧಾರ

ನವದೆಹಲಿ, ಆ. 20– ಗಿಲ್‌ ಸಂಪುಟಕ್ಕೆ ಕಾಂಗ್ರೆಸ್ಸಿನ ಬೆಂಬಲ ಹಿಂತೆಗೆದುಕೊಂಡು ಪಂಜಾಬಿನಲ್ಲಿ ಮಧ್ಯಂತರ ಚುನಾವಣೆಗಾಗಿ ಕೇಳಲು ಕಾಂಗ್ರೆಸ್‌ ಇಂದು ನಿರ್ಧರಿಸಿತು.

ಹೇಮಾವತಿ ಜಲವಿವಾದ ಇತ್ಯರ್ಥ

ನವದೆಹಲಿ, ಆ. 20– ಹೇಮಾವತಿ ನದಿನೀರಿನ ವಿಷಯದಲ್ಲಿ ಮೈಸೂರು ಮತ್ತು ಮದ್ರಾಸು ಸರ್ಕಾರಗಳಿಗಿದ್ದ ವಿವಾದ ಇತ್ಯರ್ಥವಾಗಿದೆ.

ಎರಡು ಗಂಟೆಗಳ ಕಾಲ ನಡೆದ ತ್ರಿಪಕ್ಷ ಸಮ್ಮೇಳನದ ಬಳಿಕ ಇಂದು ಆ ನದಿ ನೀರಿನ ಬಳಕೆ ವಿಷಯದಲ್ಲಿ ಸ್ಥೂಲ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿಸಲಾಯಿತು.

‘ಆಪ್ತ ಕಾರ್ಯದರ್ಶಿ’ ಎಂದು ಕಾಂತಿಲಾಲ್‌ ಯಾವ ಪತ್ರಕ್ಕೂ ಸಹಿ ಹಾಕಿಲ್ಲ: ಮುರಾರಜಿ

ನವದೆಹಲಿ, ಆ. 20– ತಮ್ಮ ಮಗ ಕಾಂತಿಲಾಲ್‌ ದೇಸಾಯಿ ‘ಆಪ್ತ ಕಾರ್ಯದರ್ಶಿ’ ಎಂದು ಯಾವುದೇ ಪತ್ರಕ್ಕೆ ಸಹಿ ಮಾಡಿಲ್ಲವೆಂದು ಉಪಪ್ರಧಾನ ಮಂತ್ರಿ ಮುರಾರಜಿ ದೇಸಾಯಿ ಅವರು ಇಂದು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು.

ಪಾಕ್‌ ಸಮರ ಸಿದ್ಧತೆ: ರಾಜ್ಯಸಭೆ ಆತಂಕ

ನವದೆಹಲಿ, ಆ. 20– ಪಾಕಿಸ್ತಾನದ ಸಮರ ಸಿದ್ಧತೆ ಹಾಗೂ ಯುದ್ಧ ಮನೋಭಾವದ ಬಗ್ಗೆ ರಾಜ್ಯಸಭೆಯಲ್ಲಿ ಸದಸ್ಯರು ಇಂದು ಆತಂಕ ವ್ಯಕ್ತಪಡಿಸಿದರು.

‘ರಾಷ್ಟ್ರದ ರಕ್ಷಣಾ ಬಲ ದಕ್ಷ ಸ್ಥಿತಿಯಲ್ಲಿದೆ’ ಎಂದು ರಕ್ಷಣಾ ಮಂತ್ರಿ ಸ್ಮರಣ್‌ ಸಿಂಗ್‌ ಅವರು ಸಭೆಗೆ ಆಶ್ವಾಸನೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !