ಭಾನುವಾರ, 25–8–1968

7

ಭಾನುವಾರ, 25–8–1968

Published:
Updated:
Deccan Herald

ವಿವಾದಗ್ರಸ್ತ ಚಿನ್ನ ಹತೋಟಿ ಮಸೂದೆ: ಲೋಕಸಭೆ ಅಂಗೀಕಾರ

ನವದೆಹಲಿ, ಆ. 24– ಎಲ್ಲ ವಿರೋಧ ಪಕ್ಷಗಳೂ ವಿರೋಧಿಸಿದ ವಿವಾದಗ್ರಸ್ತ ಸುವರ್ಣ ನಿಯಂತ್ರಣ ಮಸೂದೆಯನ್ನು ಇಂದು ಲೋಕಸಭೆ ಅಂಗೀಕರಿಸಿತು.

ವಿರೋಧ ಪಕ್ಷಗಳ ಸಭಾತ್ಯಾಗ, ಮಸೂದೆ ಕುರಿತ ಉಗ್ರ ಟೀಕೆ, ಬಿರುಸಿನ ವಾದವಿವಾದಗಳ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು.

ಉದಾರ ದಾನಿ ಬಿ.ವಿ. ಭೂಮರೆಡ್ಡಿ ಅವರ ನಿಧನ

ಹುಬ್ಬಳ್ಳಿ, ಆ. 24– ಪ್ರಖ್ಯಾತ ತೈಲ ಉದ್ಯಮಿ ಹಾಗೂ ಉದಾರ ದಾನಿ ಶ್ರೀ ಬಸಪ್ಪ ವೆಂಕಪ್ಪ ಭೂಮರೆಡ್ಡಿ ಅವರು ಇಂದು ಬೆಳಿಗ್ಗೆ 8.05 ಗಂಟೆಯಲ್ಲಿ ಸ್ಥಳೀಯ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಫ್ರಾನ್ಸಿನ ಪ್ರಥಮ ಎಚ್. ಬಾಂಬ್ ಸ್ಫೋಟ

ಪ್ಯಾರಿಸ್, ಆ. 24– ಫ್ರಾನ್ಸ್ ದೇಶವು ತನ್ನ ಪ್ರಥಮ ಜಲಜನಕ ಬಾಂಬ್ ಅನ್ನು ಇಂದು ಆಸ್ಫೋಟಿಸಿತು.

ಗ್ರೀನಿಚ್‌ ವೇಳೆ 6.30ಕ್ಕೆ (ಭಾರತೀಯ ಕಾಲಮಾನದಂತೆ ಮಧ್ಯರಾತ್ರಿ) ದಕ್ಷಿಣ ಪೆಸಿಫಿಕ್‌ ಸಾಗರದ ಫಂಗ್‌ಟೌಫ ದ್ವೀಪಗಳ ಪ್ರಯೋಗ ಕೆಂದ್ರದಲ್ಲಿ ಸ್ಫೋಟನೆ ನಡೆಯಿತು.

ಪ್ರಯಾಣಿಕರ ಸಂಚಾರಕ್ಕೆ ಬೆಂಗಳೂರು–ಸೇಲಂ ಮಾರ್ಗ ಮುಂದಿನ ವಾರ ಸಿದ್ಧ

ಮೈಸೂರು, ಆ. 24– ಬೆಂಗಳೂರು ಸೇಲಂ ನಡುವೆ ಹೊಸ ಮೀಟರ್ ಗೇಜ್ ಮಾರ್ಗ ಸೆಪ್ಟೆಂಬರ್ ಮೊದಲವಾರದ ವೇಳೆಗೆ ಪ್ರಯಾಣಿಕ ಸಂಚಾರಕ್ಕೆ ಸಿದ್ಧವಾಗುವುದೆಂದು ಮೈಸೂರು ರೈಲ್ವೆ ಡಿವಿಜನಲ್ ಸೂಪರಿಂಟೆಂಡೆಂಟ್ ಶ್ರೀ ಎಸ್. ರಾಮಕೃಷ್ಣನ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಬೆಂಗಳೂರು ನಿಲ್ದಾಣದಲ್ಲಿ ಇನ್ನು 45 ದಿನಗಳಲ್ಲಿ ಮತ್ತಷ್ಟು ಆಧುನಿಕ ಸಿಗ್ನಲಿಂಗ್ ಪದ್ಧತಿ ಏರ್ಪಡಿಸಿ ಮೀಟರ್‌ಗೇಜ್ ಪುನರ್ ವ್ಯವಸ್ಥೆಯನ್ನು ಪೂರ್ಣಗೊಳಿಸಲಾಗುವುದೆಂದು ಅವರು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !