ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಸೋಮವಾರ 31-8-1970

Last Updated 30 ಆಗಸ್ಟ್ 2020, 15:17 IST
ಅಕ್ಷರ ಗಾತ್ರ

ಮೂಲ ಹಕ್ಕಿಗೆ ತಿದ್ದುಪಡಿ ನಿರಂಕುಶ ಅಧಿಕಾರಕ್ಕೆ ನಾಂದಿ: ಕೆ. ಸುಬ್ಬರಾವ್‌

ನವದೆಹಲಿ, ಆ. 30– ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಇರುವ ಸಂವಿಧಾನದ ವಿಧಿಯನ್ನು ತಿದ್ದಲು ಸಂಸತ್ತಿಗೆ ಅಧಿಕಾರ ದೊರೆತರೆ ‘ಮುಂದೆ ಪ್ರಬಲವಾದ ಯಾವ ಪ್ರಧಾನಿಯಾದರೂ ತನ್ನ ಹಿಡಿತದಲ್ಲಿರುವ ಅಗತ್ಯ ಬಹುಮತದ ಬೆಂಬಲದಿಂದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ನಿರಂಕುಶ ಪ್ರಭುವಾಗಬಹುದು’

ಸಂವಿಧಾನದ 368ನೇ ವಿಧಿಯ ಉದ್ದೇಶಿತ ತಿದ್ದುಪಡಿ ಬಗ್ಗೆ ಭಾರತದ ಮಾಜಿ ಶ್ರೇಷ್ಠ ನ್ಯಾಯಾಧೀಶ ಕೆ. ಸುಬ್ಬರಾವ್ ಇಂದು ನೀಡಿದ ಎಚ್ಚರಿಕೆಯಿದು.

‘ಮೂಲಭೂತ ಹಕ್ಕುಗಳ ರಂಗ’ದ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತಾ ಅವರು ಈ ಎಚ್ಚರಿಕೆ ಕೊಟ್ಟರಲ್ಲದೆ ಸಂವಿಧಾನವನ್ನು ನಾಶ ಮಾಡಲು ಸಂಸತ್ತನ್ನು ಬಳಸಿಕೊಂಡ ಶಕ್ತಿಯುತ ನಾಯಕರ ಪ್ರಸಂಗಗಳಿಂದ ಇತಿಹಾಸ ತುಂಬಿದೆ ಎಂದರು.

ಪುಟ್ಟಣ್ಣ ಕಣಗಾಲ್‌ ಅತ್ಯುತ್ತಮ ಚಿತ್ರಕಥೆ ಲೇಖಕ, ‘ಗೆಜ್ಜೆಪೂಜೆ’ಗೆ ಪ್ರಾದೇಶಿಕ ಪ್ರಶಸ್ತಿ

ನವದೆಹಲಿ, ಆ. 30 – ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಚಿತ್ರನಾಟಕ ಕತೆಗಾಗಿ ಎಸ್‌.ಆರ್. ‍ಪುಟ್ಟಣ್ಣ ಕಣಗಾಲ್‌ (ಚಿತ್ರ: ಗೆಜ್ಜೆಪೂಜೆ) ಅವರಿಗೆ 1969ರ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

‘ಗೆಜ್ಜೆಪೂಜೆ’ ಕನ್ನಡ ಚಿತ್ರಕ್ಕೆ ಪ್ರಾದೇಶಿಕ ಪ್ರಶಸ್ತಿ ದೊರೆತಿದೆ.

ಜಸ್ಟೀಸ್‌ ಜಿ.ಡಿ. ಖೋಸ್ಲಾ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT