ಬುಧವಾರ, 4–12–1968

7

ಬುಧವಾರ, 4–12–1968

Published:
Updated:

ನಕ್ಸಲೀಯರ ಚಟುವಟಿಕೆಗಳಲ್ಲಿ ಚೀನಿ ಕೈವಾಡ?

ಕಣ್ಣಾನೂರು, ಡಿ. 3– ಕೇರಳದಲ್ಲಿನ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪೀಕಿಂಗ್ ಕೈವಾಡವಿದೆಯೇ?

ಕಣ್ಣಾನೂರು ಜಿಲ್ಲೆಯ ಅಗ್ರ ನಕ್ಸಲೀಯ ನಾಯಕ ಪಿ.ಕೆ. ಬಾಲಕೃಷ್ಣನ್ ಅವರಿಂದ ಪೊಲೀಸರು ವಶಪಡಿಸಿಕೊಂಡಿರುವ ಎರಡು ಪತ್ರಗಳನ್ನು ನೋಡಿದಾಗ ಈ ಪ್ರಶ್ನೆಗೆ ದೊರೆಯುವುದು ಅಚ್ಚರಿಯ ಉತ್ತರ.

ಪುಲಪ್ಪಳ್ಳಿ ಮತ್ತು ತಲಚೇರಿ ಪ್ರಕರಣಗಳ ನಂತರ ಶ್ರೀ ಬಾಲಕೃಷ್ಣನ್ ಅವರ ನಿವಾಸಕ್ಕೆ ಪೊಲೀಸರು ದಾಳಿ ಮಾಡಿದಾಗ ಚೀನಿ ರಾಯಭಾರ ಕಚೇರಿಯ ವಾರ್ತಾ ಕೇಂದ್ರದಿಂದ ಬರೆಯಲ್ಪಟ್ಟ ಈ ಪತ್ರಗಳೆರಡೂ ದೊರೆತವು.

‘ಬೇರೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿ’ ಎಂಬುದು →ಪೀಕಿಂಗ್‌ಗೆ ಶ್ರೀ ಬಾಲಕೃಷ್ಣ ಅವರು ಮಾಡಿರುವ ಮನವಿ.

ನಕ್ಸಲೀಯ ನಾಯಕಿ ಅಜಿತಾ ಬಂಧನ

‌ಕಲ್ಲಿಕೋಟೆ, ಡಿ. 3– ಪುಲಪ್ಪಳ್ಳಿ ವೈರ್‌ಲೆಸ್ ಠಾಣೆಯ ಮೇಲೆ ಇತ್ತೀಚೆಗೆ ದಾಳಿ ಮಾಡಿದ ನಕ್ಸಲೀಯರ ಅಗ್ರನಾಯಕಿ ಕುಮಾರಿ ಅಜಿತಾಳನ್ನು ಇಂದು ಮುಂಜಾನೆ ಕೊಟ್ಟಿಯೂರು ಕಾಡುಗಳಲ್ಲಿ ಬಂಧಿಸಲಾಗಿದೆ ಎಂದು ತಲಚೇರಿಯಿಂದ ಇಲ್ಲಿಗೆ ಬಂದ ವರದಿಯೊಂದು ತಿಳಿಸಿದೆ.

ನಕ್ಸಲೀಯರ ಪ್ರಧಾನ ನಾಯಕ  ಕುನ್ನಿಕ್ಕಲ್ ನಾರಾಯಣನ್ ಅವರ ಪುತ್ರಿಯಾದ ಅಜಿತಾಗೆ ನವಂಬರ್ 26 ರಂದು ಆಕಸ್ಮಿಕ ಬಾಂಬ್ ಸ್ಫೋಟನೆಯಿಂದ ಗಾಯಗಳಾಗಿವೆ. ಈ ಆಸ್ಫೊಟದಿಂದ ತೀವ್ರವಾಗಿ ಗಾಯಗೊಂಡ ನಕ್ಸಲೀಯ ‘ಬಾಂಬ್ ತಜ್ಞ’ ಕಿಸಾನ್ ಥಾಮಸ್ ಸ್ವಂತ ಇಚ್ಛೆಯಿಂದ ಗುಂಡು ಹೊಡೆಸಿಕೊಂಡು ಸತ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !