ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸಿಗೆ ಮೀರಿದ ಸಾಧನೆ

Last Updated 16 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಅತ್ಯಂತ ಚಿಕ್ಕ ವಯಸ್ಸಿಗೇ ಈ ಸಾಧನೆ ಹೇಗೆ ಸಾಧ್ಯವಾಯಿತು?

ನನಗೆ ಗಣಿತವೆಂದರೆ ಅಚ್ಚುಮೆಚ್ಚು. ವಿಷಯದ ಮೇಲಿನ ಆಸಕ್ತಿಯೇ ಸಾಧನೆಗೆ ಕಾರಣ. ಸದ್ಯ, ಬೆಂಗಳೂರಿನ ಟ್ರಯೊ ವರ್ಲ್ಡ್‌ ಅಕಾಡೆಮಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೂರನೇ ತರಗತಿಯಲ್ಲಿ ಇದ್ದಾಗಲೇ ಈ ಪರೀಕ್ಷೆ ಬರೆದಿದ್ದೆ.

ಏನಿದು ಐಜಿಸಿಎಸ್‌ಇ?

ಕೇಂಬ್ರಿಜ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯು ಇಂಟರ್‌ನ್ಯಾಷನಲ್‌ ಜನರಲ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಷನ್‌ (ಐಜಿಸಿಎಸ್‌ಇ) ಪರೀಕ್ಷೆ ನಡೆಸುತ್ತದೆ. ಹತ್ತನೇ ತರಗತಿ ಮಟ್ಟದ ಈ ಪರೀಕ್ಷೆಯಲ್ಲಿ ಗಣಿತದಲ್ಲಿ ‘ಎ’ ಗ್ರೇಡ್‌ ಪಡೆದಿ
ದ್ದೇನೆ. ಇದರಿಂದ ಮೆನ್ಸಾ ಬುದ್ಧಿಮತ್ತೆ ಪರೀಕ್ಷೆ ಎದುರಿಸಲು ಅರ್ಹತೆ ಪಡೆದುಕೊಂಡಂತಾಗಿದೆ.

ಪರೀಕ್ಷೆ ಬರೆಯುವ ಆತ್ಮವಿಶ್ವಾಸ ಹೇಗೆ ಬಂತು?

ತಂದೆ ಗಣೇಶ್‌ ನಲ್ಲೂರ್‌ (ಹೃದ್ರೋಗ ತಜ್ಞ), ತಾಯಿ ದಿವ್ಯಾ ನಲ್ಲೂರ್‌ (ಮನೋವಿಜ್ಞಾನಿ) ಬಹಳಷ್ಟು ಪ್ರೋತ್ಸಾಹ ನೀಡಿದರು. ನನ್ನ ತಾಯಿ ಉನ್ನತ ವ್ಯಾಸಂಗ ಮಾಡಿದ್ದು ಇಂಗ್ಲೆಂಡ್‌ನಲ್ಲಿ. ನಾನು ಹುಟ್ಟಿದ್ದು ಅಲ್ಲಿಯೇ.ಗಣಿತದಲ್ಲಿ ನನ್ನ ಆಸಕ್ತಿ ಗಮನಿಸಿದ ಶಿಕ್ಷಕರು, ಈ ಪರೀಕ್ಷೆ ತೆಗೆದುಕೊಳ್ಳಲು ಪ್ರೇರೇಪಿಸಿದರು. ಶಾಲೆಯಲ್ಲಿಯೂ ಐಜಿಸಿಎಸ್‌ಇ ಪಠ್ಯಕ್ರಮವೇ ಇತ್ತು. ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಗಣಿತ ಪಾಠ ಕೇಳುವ ಅವಕಾಶ ಕಲ್ಪಿಸಿದರು. ಆ ವಿಷಯದ ಎಲ್ಲ ಪರಿಕಲ್ಪನೆಗಳು ನನಗೆ ಸುಲಭವಾಗಿ ಅರ್ಥವಾಗುತ್ತಿದ್ದವು.

ಪದವಿ ತರಗತಿಗೆ ಸೇರುವ ಆಸಕ್ತಿಯಿದೆಯೇ?

ಬುದ್ಧಿಮತ್ತೆ ಆಧಾರದ ಮೇಲೆ ಕಾಲೇಜಿಗೆ ಪ್ರವೇಶ ಪಡೆಯಬಹುದು. ಆದರೆ, ಚಿಕ್ಕ ವಯಸ್ಸಾದ್ದರಿಂದ ಸಹಪಾಠಿಗಳೊಂದಿಗೆ ಭಾವನಾತ್ಮಕ ಹೊಂದಾಣಿಕೆ ಕಷ್ಟವಾಗಬಹುದು ಎಂದು ತಾಯಿ ಹೇಳುತ್ತಾರೆ. ಅಮೆರಿಕದ ಜಾನ್‌ ಹಾಕಿನ್ಸ್‌ ವಿ.ವಿ, ಗಣಿತದಲ್ಲಿ ಪ್ರತಿಭೆ ಹೊಂದಿರುವವರಿಗಾಗಿ ಆನ್‌ಲೈನ್‌ನಲ್ಲೇ ತರಗತಿ ತೆಗೆದುಕೊಳ್ಳುತ್ತದೆ. 13–14ನೇ ವಯಸ್ಸಿಗೆ ಈ ಪರೀಕ್ಷೆ ಎದುರಿಸುತ್ತೇನೆ.

ಚಿಕ್ಕವಯಸ್ಸಿನಲ್ಲಿ ಸಾಮರ್ಥ್ಯಕ್ಕೂ ಮೀರಿದ ಜ್ಞಾನ ಹೊಂದಿದವರು, ನಂತರ ಭಾವನಾತ್ಮಕ ಸಮಸ್ಯೆಗೆ ತುತ್ತಾಗುತ್ತಾರೆ ಎನ್ನುತ್ತಾರಲ್ಲ...

ಆರವ್‌ ತಾಯಿ ದಿವ್ಯಾ ಉತ್ತರ: ‘ಹೌದು, ಎಲ್ಲವೂ ನನಗೆ ಗೊತ್ತು ಎನ್ನುವ ಅಹಂಕಾರ ಮಕ್ಕಳಲ್ಲಿ ಬರುವುದರೊಂದಿಗೆ, ಎಲ್ಲ ಅಂಶಗಳ ಬಗ್ಗೆ ನಿರಾಸಕ್ತಿಯೂ ಮೂಡಬಹುದು. ಮಗನಿಗೆ ಈ ಸಮಸ್ಯೆ ಬಾಧಿಸದಂತೆ ಎಚ್ಚರ ವಹಿಸುತ್ತೇನೆ’.

–ಗುರು ಪಿ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT