ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ನೇರ ಹಣಾಹಣಿ

Last Updated 8 ಏಪ್ರಿಲ್ 2014, 9:26 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ –ಬಿಜೆಪಿಯ ನೇರ ಹಣಾಹಣಿಯಿದೆ. ಒಂದು ರೀತಿ ನೋಡಿದರೆ ಇದು ಸ್ನೇಹಿತರ ನಡುವಿನ ಸ್ಪರ್ಧೆ. ಕಾಂಗ್ರೆಸ್‌ನ ಕೆ. ಬಸವರಾಜ ಹಿಟ್ನಾಳ, ಬಿಜೆಪಿಯ ಸಂಗಣ್ಣ ಕರಡಿ ಇಬ್ಬರು ಕಣದಲ್ಲಿದ್ದಾರೆ. ಇಬ್ಬರಿಗೂ ತಮ್ಮದೇ ಲೆಕ್ಕಾಚಾರದಲ್ಲಿ ಗೆಲುವಿನ ವಿಶ್ವಾಸವಿದೆ. ಕರಡಿ ಕುಣಿದೇ ಕುಣಿಯುತ್ತದೆ. ಅದು ಮತದಾರರ ಕೈಯಲ್ಲಿದೆ ಎಂದು ಸಂಗಣ್ಣ ಹೇಳಿದರೆ. ಚುನಾವಣೆಯಲ್ಲಿ ಬಸವ ಆಡುವುದರಲ್ಲಿ ಅನುಮಾನ ಬೇಡ. ಈಗಾಗಲೇ ಅದು ಸ್ಪಷ್ಟವಾಗಿದೆ ಎಂಬುದು ಬಸವರಾಜ ಹಿಟ್ನಾಳ ಅವರ ವಿಶ್ವಾಸ.
ಇಬ್ಬರನ್ನೂ ಮಾತನಾಡಿಸಿದಾಗ ಹೇಳಿದ್ದಿಷ್ಟು...

*ಕ್ಷೇತ್ರದಲ್ಲಿರುವುದು ಜಾತಿ ಬಲವೋ? ಪಕ್ಷಗಳ ಹೋರಾಟವೋ?
ಹಿಟ್ನಾಳ್‌:
ಇದು ಎರಡು ಸಿದ್ಧಾಂತಗಳ ಹೋರಾಟ. ಕೋಮುವಾದಿ ಬಿಜೆಪಿ ವಿರುದ್ಧ ಜಾತ್ಯತೀತ ನಿಲುವಿನ, ಸರ್ವರಿಗೂ ಸಮಪಾಲು– ಸಮಬಾಳು ಸಿದ್ಧಾಂತದ ನಡುವಿನ ಹೋರಾಟ. ದೇಶದ ಅಭಿವೃದ್ಧಿಯ ಹಿತಚಿಂತನೆ ಇದರಲ್ಲಿದೆ. ಇಲ್ಲಿ ಜಾತಿ ಏಕೆ ಬೇಕು?
ಕರಡಿ ಸಂಗಣ್ಣ: ಜಾತಿ ಬಲ ಅಲ್ಲ. ನರೇಂದ್ರ ಮೋದಿ ಅಲೆ, ರಾಷ್ಟ್ರದ ದೃಷ್ಟಿ, ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಬಾರಿ ಬಿಜೆಪಿ ಹೋರಾಡುತ್ತಿದೆ. ಇಲ್ಲಿ ನನಗಿಂತಲೂ ರಾಷ್ಟ್ರೀಯ ದೃಷ್ಟಿಯಿಂದ ಗೆಲುವು ಮುಖ್ಯವಾಗುತ್ತದೆ. ಹಾಗಾಗಿ ಜಾತಿಯ ಎಲ್ಲೆ ಮೀರಿ ಎಲ್ಲರೂ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ.

*ನಿಮಗೇಕೆ ಮತ ಹಾಕಬೇಕು?
ಹಿಟ್ನಾಳ್‌: 
ಕಾಂಗ್ರೆಸ್‌ ಈ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಸಾಕಷ್ಟು ಜನಪರ ಕಾರ್ಯಕ್ರಮ ಕೊಟ್ಟಿದೆ. ಸಂವಿಧಾನದ ಕಲಂ–

371 (ಜೆ) ತಿದ್ದುಪಡಿ, ಅನುಷ್ಠಾನ, ಈ ಬಾಗದ ಅಭಿವೃದ್ಧಿಗೆ ವಿಶೇಷ ಆರ್ಥಿಕ ನೆರವು, ನೀರಾವರಿ ಯೋಜನೆ­ಗಳಿಗೆ ಸಂಬಂಧಿಸಿದ ದೂರದೃಷ್ಟಿ ನಮ್ಮಲ್ಲಿದೆ. ವೈಯಕ್ತಿಕ­ವಾಗಿ ನನ­ಗಿರುವ ರಾಜಕೀಯ ಅನುಭವವೂ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗಲಿದೆ.
ಕರಡಿ ಸಂಗಣ್ಣ: ಜನರ ಪರ ನಿಲ್ಲುತ್ತೇನೆ ಎಂಬ ವಿಶ್ವಾಸ ಮತದಾರ­ರಿಗಿದೆ. ಅಭಿ­ವೃ­ದ್ಧಿಯ ದೃ­ಷ್ಟಿ­ಯಿಂದ ಮತ ಹಾಕ­ಬೇಕು. ದ­ೇಶ­ದ ಒಳಗೆ– ಹೊರಗೆ ಕಾಡುತ್ತಿರುವ ಆತಂಕವನ್ನು ಬಿಜೆಪಿ ತೊಡೆದುಹಾಕಬಲ್ಲುದು ಎಂಬ ವಿಶ್ವಾಸ ಯುವಜನರಿಗಿದೆ.

*ಪಕ್ಷ ಬದಲಾಯಿಸಿ ಅವಕಾಶ ಹುಡುಕುವ ನಿಮಗೇಕೆ ಮತ ಹಾಕಬೇಕು?
ಸಂಗಣ್ಣ:
ಪಕ್ಷ ಬದಲಾಯಿಸಿದ್ದು ಅಭಿವೃದ್ಧಿಯ ದೃಷ್ಟಿಯಿಂದ ಅಷ್ಟೇ ಹೊರತು ಅಧಿಕಾರದ ಆಸೆಯಿಂದಲ್ಲ. ಜನರೂ ನಮ್ಮನ್ನು ಅಳತೆ ಮಾಡುತ್ತಾರೆ. ಇಂದು ಮತದಾರರನ್ನು ಗುತ್ತಿಗೆಗೆ ಪಡೆದು ಮತ ಹಾಕಿಸಿಕೊಳ್ಳಲಾಗದು. ಇಂದು ಮತದಾರರು ಸ್ವಂತ ನಿರ್ಧಾರ ಹೊಂದಿದ್ದಾರೆ.

*ಸರ್ಕಾರ ಸ್ಥಳೀಯಾಡಳಿತ ಸಂಸ್ಥೆ ಕಾಂಗ್ರೆಸ್‌ ಕೈಯಲ್ಲಿರಬೇಕಾದರೆ ನಿಮ್ಮ ತಂತ್ರ ಏನು?
ಸಂಗಣ್ಣ
: ಹಿಂದೆ ನಮ್ಮೊಳಗೆ ಗೊಂದಲ ಇತ್ತು. ಈಗ ಸರಿಪಡಿಸಿಕೊಂಡು ಒಗ್ಗಟ್ಟಾಗಿದ್ದೇವೆ. ಯಾವುದೇ ವ್ಯವಸ್ಥೆ ಕಾಂಗ್ರೆಸ್‌ ಕೈಯಲ್ಲಿರಲಿ. ಆದರೆ, ಜನರಿಗೆ ಭ್ರಮನಿರಸನವಾಗಿದೆಯಲ್ಲಾ.

*ಯುವ ಮತದಾರರನ್ನು ಹೇಗೆ ಸೆಳೆಯುತ್ತೀರಿ?
ಹಿಟ್ನಾಳ:
ರಾಹುಲ್‌ ಗಾಂಧಿ ಅವರ ಚಿಂತನೆ, ಅವರ ಶಕ್ತಿ, ರಾಜ್ಯ ಸರ್ಕಾರದ ಕೆಲಸಗಳು ಯುವಮತದಾರರನ್ನು ಖಂಡಿತ ಸೆಳೆಯುತ್ತವೆ. ಮೋದಿ ಭಾಷಣ ಮಾಡಿದ ತಕ್ಷಣ ಮತದಾರರು ಬದಲಾಗುವುದಿಲ್ಲ.

*ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ವೈಯಕ್ತಿಕ ಚಿಂತನೆಗಳೇನು?
ಹಿಟ್ನಾಳ:
ವೈಯಕ್ತಿಕ, ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸೋಣ. ಕ್ಷೇತ್ರಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಮುಖ್ಯವಾಗಿ ಬಾಕಿ ಇರುವ ನೀರಾವರಿ ಯೋಜನೆಗಳು ಜಾರಿಗೆ ಬರಬೇಕು. ರಸ್ತೆ, ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಆಗಬೇಕು. ಶೈಕ್ಷಣಿಕ ಬೆಳವಣಿಗೆ ಆಗಬೇಕು. ಅದರಲ್ಲೂ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಮಟ್ಟಕ್ಕೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಸಂಗಣ್ಣ: ಯುವಜನರ ಸಬಲೀಕರಣಕ್ಕೆ ಆದ್ಯತೆ ಕೊಡುತ್ತೇನೆ. ಬಾಕಿ ಇರುವ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗಬೇಕು. ಮೋದಿ ಅವರ ಅಭಿವೃದ್ಧಿ ಚಿಂತನೆಯ ಜತೆಗೆ ಈ ಭಾಗದ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ.

*ಬಡವರ ನೋವು ಕರಡಿ ಅವರಿಗೆ ಗೊತ್ತೇ?
ಸಂಗಣ್ಣ: ಖಂಡಿತವಾಗಿ ಗೊತ್ತು. ಈ ಪ್ರಶ್ನೆ ಕೇಳಿದ ಪ್ರತಿಪಕ್ಷದ ಮುಖಂಡರ ಹಾಗೆ ನಾನೇನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಓದಿದವನಲ್ಲ. ತೀರಾ ಗ್ರಾಮೀಣ ಪ್ರದೇಶದಿಂದಲೇ ಬೆಳೆದು ಬಂದವನು. ಬಡವರ ನೋವನ್ನು ಅರ್ಥ ಮಾಡಿಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT