ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸ್ಸಿಕಾ ಪ್ರಕರಣ: ಕೊಲೆಗಾರನ ಕ್ಷಮಿಸಿದ ಸಹೋದರಿ

Last Updated 23 ಏಪ್ರಿಲ್ 2018, 20:01 IST
ಅಕ್ಷರ ಗಾತ್ರ

ದೆಹಲಿ: ಖ್ಯಾತ ಮಾಡೆಲ್‌ ಜೆಸ್ಸಿಕಾ ಲಾಲ್‌ ಹತ್ಯೆ ಅಪರಾಧಿ ಸಿದ್ಧಾರ್ಥ ವಶಿಷ್ಠ ಅಲಿಯಾಸ್‌ ಮನು ಶರ್ಮಾ ಬಿಡುಗಡೆಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಜೆಸ್ಸಿಕಾ ಸಹೋದರಿ ಸರ್ಬಿನಾ ಲಾಲ್‌ ಹೇಳಿದ್ದಾರೆ.

ಕಾಂಗ್ರೆಸ್‌ ಮಾಜಿ ನಾಯಕ ವಿನೋದ್‌ ಶರ್ಮಾ ಅವರ ಪುತ್ರ ಮನು ಶರ್ಮಾ ಜೆಸ್ಸಿಕಾ ಲಾಲ್‌ ಅವರನ್ನು 1999ರಲ್ಲಿ ರೆಸ್ಟೋರೆಂಟ್‌ವೊಂದರಲ್ಲಿ ಕೊಲೆ ಮಾಡಿದ್ದ. ಮದ್ಯ ಪೂರೈಸಲು ಜೆಸ್ಸಿಕಾ ನಿರಾಕರಿಸಿದ ಕಾರಣ ಮನು ಶರ್ಮಾ ಈ ಕೃತ್ಯವೆಸಗಿದ್ದ.

ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮನು ಶರ್ಮಾ ತಿಹಾರ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಸನ್ನಡೆತೆ ಆಧಾರದ ಮೇಲೆ ಕಳೆದ ಆರು ತಿಂಗಳ ಹಿಂದೆ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಬಿನಾ, ‘ಜೈಲು ಅಧಿಕಾರಿಗಳಿಂದ ನನಗೆ ಪತ್ರ ಬಂದಿತ್ತು.  ಈಗಾಗಲೇ ಮನು ಹದಿನೈದು ವರ್ಷ ಜೈಲಿನಲ್ಲಿ ಕಾಲ ಕಳೆದಿದ್ದಾನೆ. ಈಗ ಆತನನ್ನು ಕೋರ್ಟ್‌ ಬಿಡುಗಡೆಗೊಳಿಸಿದರೆ ನನ್ನ ಅಭ್ಯಂತರವಿಲ್ಲ. ನಾನು ಆ ಘಟನೆಯಿಂದ ಹೊರಬಂದಿದ್ದೇನೆ. ಜೈಲಿನಲ್ಲಿದ್ದ ಅವಧಿ ಯಲ್ಲಿ ಮನು ಶರ್ಮಾ ಒಳ್ಳೆಯ ಕೆಲಸ ಮಾಡಿದ್ದಾನೆ.  ಇತರ ಕೈದಿಗಳಿಗೂ ಸಹಾಯ ಮಾಡಿದ್ದಾನೆ. ಇದು ಸುಧಾ ರಣೆಯ ಪ್ರತಿಫಲನ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT