ಅದೊಂದು ಸಂಜೆ, ಒಗೆದ ಬಟ್ಟೆಗಳ ಗಂಟನ್ನು ಬೆನ್ನ ಮೇಲೆ ಹೊತ್ತ ಕಪ್ಪು ವರ್ಣೀಯ ತಾಯಿ ತನ್ನ ಪುಟ್ಟ ಮಗಳ ಕೈ ಹಿಡಿದು ನಡೆಯುತ್ತಿದ್ದಳು. ಮಗಳಿಗೆ ತೀರದ ಉತ್ಸಾಹ. ತಾಯಿಯನ್ನು ಇದೇನು, ಅದೇನು ಎಂದು ಕಂಡದ್ದೆಲ್ಲದರ ಬಗ್ಗೆ ಕೇಳುತ್ತಲೇ ಇದ್ದಳು. ಹೆಗಲ ಮೇಲಿನ ಭಾರವನ್ನು ಹಗುರಾಗಿಸುವಂತೆ ತಾಯಿ ಸಹನೆಯಿಂದ ಎಲ್ಲಕ್ಕೂ ಉತ್ತರಿಸುತ್ತಿದ್ದಳು. ಹೀಗೆ ಮಾತಾಡುತ್ತಾ ಅವರಿಬ್ಬರು ಬಂದು ನಿಂತಿದ್ದು ದೊಡ್ಡದೊಂದು ಬಂಗಲೆಯ ಮುಂದೆ. ತಾಯಿ ಮಗಳನ್ನು ಹೊರಗೆ ಜಗುಲಿಯ ಬಳಿ ನಿಲ್ಲಿಸಿ ಬಟ್ಟೆಯನ್ನು ಕೊಡಲು ಒಳಗೆ ಹೋದಳು. ಕುತೂಹಲದಿಂದ ಮಗಳು ಮನೆಯೊಳಗೆ ಬಗ್ಗಿ ನೋಡುವಾಗ ಹೊಂಬಣ್ಣದ ಕೂದಲಿನ ಚಂದದ ಪುಟ್ಟ ಹುಡುಗಿ ಪುಸ್ತಕವನ್ನು ಓದುತ್ತಿರುವುದು ಕಂಡಿತು. ಯಾರೋ ಕರೆದ ಕಾರಣ ಆ ಹುಡುಗಿ ಒಳಗೆ ಹೋದಳು. ಹೊರಗೆ ನಿಂತಿದ್ದ ಕಪ್ಪು ವರ್ಣೀಯ ಹುಡುಗಿಗೆ ಆಸೆ ಶುರುವಾಯಿತು- ಆ ಪುಸ್ತಕವನ್ನು ಒಮ್ಮೆಯಾದರೂ ಮುಟ್ಟಬೇಕೆಂದು.

ಕಪ್ಪು ವರ್ಣೀಯ ಹುಡುಗಿ ಮನೆಯ ಒಳಬಂದವಳೇ ಪುಸ್ತಕದ ರಟ್ಟನ್ನು ಸವರಿದಳು. ಆನಂದ ಅವಳ ಮುಖದಲ್ಲಿ ತೇಲಿತು. ಮೈಮರೆತು ಪುಸ್ತಕದ ಪುಟಗಳನ್ನು ತಿರುವಲಾರಂಭಿಸಿದಾಗ ಅಲ್ಲಿಗೆ ಬಂದ ಹೊಂಬಣ್ಣದ ಕೂದಲಿನ ಹುಡುಗಿ ಅತ್ಯಂತ ಕೋಪದಿಂದ ಕಪ್ಪು ವರ್ಣೀಯ ಹುಡುಗಿಯ ಕೈಲಿದ್ದ ಪುಸ್ತಕವನ್ನು ಕಸಿದುಕೊಳ್ಳುತ್ತಾ, ‘ನಿನ್ನ ಚರ್ಮದ ಬಣ್ಣ ನೋಡಿಕೊಂಡಿದ್ದೀಯಾ? ಅದು ಎಷ್ಟು ಕಡುಗಪ್ಪಾಗಿದೆ. ನಿನ್ನ ಕೈಗಳಿಂದ ಮುಟ್ಟಿದರೆ ಈ ಪುಸ್ತಕಕ್ಕೂ ನಿನ್ನದೇ ಬಣ್ಣ ತಾಕಿ ನಾನು ಓದಲಾಗುವುದೆ?’ ಎಂದು ಬೈದಳು. ಕಪ್ಪು ವರ್ಣೀಯ ಹುಡುಗಿ ತನ್ನ ಕೈಗಳನ್ನು ತಿಕ್ಕಿ ತೋರಿಸುತ್ತಾ, ‘ನೋಡು ನನ್ನ ಬಣ್ಣ ಯಾವುದಕ್ಕೂ ಅಂಟಲಾರದು’ ಎಂದಳು. ಆ ಮಾತುಗಳಿಗೆ ಕೋಪಗೊಂಡ ಆ ಹೊಂಬಣ್ಣದ ಕೂದಲ ಹುಡುಗಿ ಕಪ್ಪು ವರ್ಣೀಯ ಹುಡುಗಿಯನ್ನು ಮನೆಯಿಂದ ಹೊರಗೆ ತಳ್ಳುತ್ತಾ, ‘ನಿಮ್ಮಂಥವರಿಗೆ ಓದು ವಿದ್ಯೆ ಬೇರೆ ಕೇಡು; ಕಪ್ಪು ಕುರೂಪಿ. ಎಲ್ಲಿರಬೇಕೋ ಅಲ್ಲಿರು’ ಎಂದು ಬೈದು, ಒಳಗೆ ಹೋದಳು.

ಅಳುತ್ತಿದ್ದ ನೀಗ್ರೋ ಹುಡುಗಿಯು ಮನೆಯಿಂದ ಹೊರಬಂದ ತಾಯಿಯನ್ನು ಕೇಳಿದಳು,‘ಅಮ್ಮಾ ನಾನು ಯಾಕೆ ಪುಸ್ತಕ ಮುಟ್ಟಬಾರದು? ನನ್ನ ಮೈ ಕಪ್ಪಾಗಿರುವುದು ನನ್ನ ತಪ್ಪಾ? ನಮ್ಮಂಥವರು ಓದಬಾರದಾ?’ ಅವಳೆಲ್ಲಾ ಪ್ರಶ್ನೆಗೆ ಉತ್ತರಿಸುತ್ತಿದ್ದ ತಾಯಿ ಸುಮ್ಮನಿದ್ದಳು. ಅವಳ ಕಣ್ಣುಗಳಲ್ಲಿ ಧಾರಾಕಾರ ನೀರು ಹರಿಯುತ್ತಿತ್ತು. ಆ ಪುಟ್ಟ ಹುಡುಗಿಗೆ ಗೊತ್ತಾಯಿತು, ತನ್ನ ತಾಯಿಗೆ ನೋವಾಗಿದೆ ಎಂದು. ತಾಯಿಯ ಕಣ್ಣೀರನ್ನು ಒರೆಸುತ್ತಾ, ‘ಯೋಚಿಸಬೇಡ. ಅಕ್ಷರವೂ ಕಪ್ಪು, ನಾನೂ ಕಪ್ಪು. ನಾವಿಬ್ಬರೂ ಸ್ನೇಹಿತರಾಗುತ್ತೇವೆ ನೋಡುತ್ತಿರು’ ಎಂದಳು. ‘ನಾನೂ ದೊಡ್ಡ ಪುಸ್ತಕಗಳನ್ನು ಓದುವಂತಾಗಬೇಕು’ ಎಂದು ದೇವರಲ್ಲಿ ದಿನವೂ ಬೇಡಿಕೊಂಡಳು.

ಜಗತ್ತು ಕಡೆಗಣಿಸಿದ ಆ ಹುಡುಗಿಯೇ ಮೇರಿ ಮೆಕ್ಲಿಯಾಡ್ ಬೆಥೂನೆ. ತನ್ನ ಜೀವಮಾನವಿಡೀ ಕಪ್ಪು ವರ್ಣೀಯರು ಮಾತ್ರವಲ್ಲ ಮಾನವ ಜನಾಂಗದ ಉನ್ನತಿಗಾಗಿ ದುಡಿದಳು. ಸಮಾನತಾ ವಿರೋಧಿಗಳ ಜೊತೆ ಸೆಣಸಿದಳು. ರಾಜಕೀಯವಾಗಿ ಜನರನ್ನು ಪ್ರೇರೇಪಿಸಿದಳು. ಅಮೆರಿಕದ ಪರವಾಗಿ ವಿಶ್ವಸಂಸ್ಥೆಯಲ್ಲಿ ಶಾಂತಿ ರಾಯಭಾರಿಯಾದಳು. ಯಾವ ಬಿಳಿಯ ಮಕ್ಕಳು ಅವಳ ಕೈಯಿಂದ ಪುಸ್ತಕವನ್ನು ಕಸಿದರೋ, ಅದೇ ಅಮೇರಿಕಾದ ನೆಲದಲ್ಲಿ ಜೀವ ತೇಯ್ದು ತನ್ನದೇ ಹೆಸರಿನ ಅತ್ಯಂತ ಸುಪ್ರಸಿದ್ಧ ‘ಬೆಥೂನೆ ಕುಕ್ಮನ್’ ಕಾಲೇಜನ್ನು ಕಟ್ಟಿ ಜ್ಞಾನದ ಬೆಳಕನ್ನು ಹರಡಿದಳು.

ಪುಸ್ತಕ ಕಸಿದ ಕ್ರೂರ ಕೈಗಳಿಗೂ ಕರುಣೆಯ ಪಾಠ ಹೇಳಿದ ಬೆಥೂನೆಯಂಥಾ ಹೆಣ್ಣುಮಕ್ಕಳು ನಮ್ಮ ಮನೆ ಮನೆಗಳಲ್ಲೂ ಹುಟ್ಟಲಿ- ಅವಕಾಶಗಳು ತಪ್ಪಿಹೋಗದಿರಲು, ಪ್ರೀತಿಯ ಪಾಠ ಹೇಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.