ಬೃಹತ್ ಪ್ರಮಾಣದ ಹಸಿರು ಜಲಜನಕದ ಉತ್ಪಾದನೆಯ ಮೂಲಕ 2070ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊಮ್ಮುವಿಕೆಯ (ನೆಟ್ ಜೀರೊ ಎಮಿಷನ್ಸ್) ಗುರಿಯನ್ನು ಸಾಧಿಸಲು ಹೊರಟಿರುವ
ನಮಗೆ ಅಗತ್ಯವಿರುವಷ್ಟು ಆರ್ಥಿಕ ಬಂಡವಾಳ ಸಿಗುತ್ತಿಲ್ಲ. ಖಾಸಗಿ ಕಂಪನಿಗಳು ಈ ಉದ್ಯಮದತ್ತ ಬಂಡವಾಳ ಹೂಡಲು ಒಲವು ತೋರುತ್ತಿಲ್ಲ. ಅಂದುಕೊಂಡ ಗುರಿ ತಲುಪಲು ಆರಂಭಿಕ ಹಂತದಲ್ಲಿ, ಅಂದರೆ 2030ರ ವೇಳೆಗೆ 50 ಲಕ್ಷ ಟನ್ ಹಸಿರು ಜಲಜನಕವನ್ನು ಉತ್ಪಾದಿಸಬೇಕು. ಜಲಜನಕ ಉತ್ಪಾದನೆಯ ಉದ್ಯಮದಲ್ಲಿ ನಾಯಕತ್ವ ವಹಿಸಲು ನಮಗೆ ಸಿಕ್ಕಿರುವ ಈ ಸುವರ್ಣ ಅವಕಾಶವನ್ನು ಕಳೆದು
ಕೊಳ್ಳದೆ ಮುಂದಿನ ಐದು ವರ್ಷಗಳ ಕಾಲ ಯಶಸ್ವಿಯಾಗಿ ಹಸಿರು ಜಲಜನಕವನ್ನು ಉತ್ಪಾದಿಸಿದರೆ 2070ರ ವೇಳೆಗೆ ‘ನೆಟ್ ಜೀರೊ’ ಸಾಧನೆ ಸಾಧ್ಯವಾಗಬಹುದು.

ಉತ್ಪಾದನೆಯ ವಿಧಾನಗಳನ್ನು ಆಧರಿಸಿ ಜಲಜನಕ
ವನ್ನು ಹಸಿರು, ನೀಲಿ, ಕಂದು, ಬೂದು, ಗುಲಾಬಿ, ಬಿಳಿ ಎಂಬ ವಿವಿಧ ಬಣ್ಣಗಳಿಂದ ಗುರುತಿಸಲಾಗುತ್ತದೆ. ಹಾಗೆಂದು ಜಲಜನಕವು ಈ ಬಣ್ಣಗಳಿಂದ ಕೂಡಿರುತ್ತದೆ ಎಂದು ಅರ್ಥವಲ್ಲ. ಹಸಿರು ಜಲಜನಕವೆಂದರೆ ಜಲಜನಕದ ಬಣ್ಣ ಹಸಿರಾಗಿರುವುದಿಲ್ಲ. ವಾತಾವರಣಕ್ಕೆ ಶಾಖವರ್ಧಕ ಅನಿಲಗಳನ್ನು ಹೊರಹಾಕದ, ನವೀಕರಿಸಬಲ್ಲ ಇಂಧನಗಳನ್ನು ಬಳಸಿ ಪಡೆಯುವ ಜಲಜನಕಕ್ಕೆ ಹಸಿರು ಜಲಜನಕ ಎನ್ನುತ್ತೇವೆ. ಸೌರ ಅಥವಾ ಗಾಳಿ ವಿದ್ಯುತ್ತಿನಿಂದ ನೀರನ್ನು ವಿಭಜಿಸಿದರೆ (ವಿದ್ಯುದ್ವಿಭಜನೆ)ಜಲಜನಕ ಮತ್ತು ಆಮ್ಲಜನಕ ದೊರಕುತ್ತವೆ. ಈ ಜಲಜನಕವೇ ಹಸಿರು ಜಲಜನಕ. ಇಲ್ಲಿ ದೊರಕುವ ಆಮ್ಲಜನಕ ಮತ್ತು ಜಲಜನಕ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ.

ಇದೇ ವಿಧಾನಕ್ಕೆ ಉದ್ಯಮದ ರೂಪ ನೀಡಿದರೆ ಬೃಹತ್ ಪ್ರಮಾಣದ ಹಸಿರು ಜಲಜನಕ ಮತ್ತು ಆಮ್ಲಜನಕ ಒಟ್ಟೊಟ್ಟಿಗೆ ದೊರಕುತ್ತವೆ. ಒಂದು ಕೆ.ಜಿ. ಜಲಜನಕ ಉತ್ಪಾದನೆಯಾದಾಗ ಎಂಟು ಕೆ.ಜಿ. ಆಮ್ಲಜನಕ ದೊರಕುತ್ತದೆ! ನಮ್ಮ ನಗರಗಳೆಲ್ಲ ಮಾಲಿನ್ಯದ ಗೂಡುಗಳಾಗಿರುವಾಗ ಇಲ್ಲಿ ದೊರಕುವ ಆಮ್ಲಜನಕವು ನಾಗರಿಕರಿಗೆ ಎಷ್ಟೆಲ್ಲಾ ಅನುಕೂಲಗಳನ್ನು ತರಬಹುದು ಎಂಬುದನ್ನು ನೀವೇ ಊಹಿಸಿರಿ.

ಬ್ಲೂಮ್ಬರ್ಗ್ ಎನ್ಇಎಫ್ ಸಂಸ್ಥೆಯು ಇತ್ತೀಚಿನ ತನ್ನ ವಿಶ್ಲೇಷಣೆಯಲ್ಲಿ ಭಾರತವು ನಿಗದಿತ ಗುರಿಯ
ಶೇ 10ರಷ್ಟು ಮಾತ್ರ ಸಾಧಿಸಬಹುದು ಎಂದಿದೆ. ಇದಕ್ಕೆ ಪ್ರಮುಖ ಕಾರಣ ಹಸಿರು ಮತ್ತು ಬೂದು ಜಲಜನಕ ಉತ್ಪಾದನೆಗೆ ತಗಲುವ ಖರ್ಚಿನಲ್ಲಿರುವ ದೊಡ್ಡ ವ್ಯತ್ಯಾಸ. ಒಂದು ಕೆ.ಜಿ. ಹಸಿರು ಜಲಜನಕ ಉತ್ಪಾದಿಸಲು ₹ 450 ರಿಂದ ₹ 700 ಖರ್ಚಾಗುತ್ತದೆ. ನೈಸರ್ಗಿಕ ಅನಿಲಕ್ಕೆ ನೀರಿನ ಆವಿಯನ್ನು ಹಾಯಿಸಿ ಪಡೆಯುವ ಒಂದು ಕೆ.ಜಿ. ಬೂದು ಜಲಜನಕ ಉತ್ಪಾದನೆಗೆ ತಗಲುವ ಖರ್ಚು ₹ 150 ರಿಂದ ₹ 200ಮಾತ್ರ. ಉತ್ಪಾದನಾ ವೆಚ್ಚದಲ್ಲಿ ಹೀಗೆ ಭಾರಿ ವ್ಯತ್ಯಾಸವಿದೆ. ಆದ್ದರಿಂದ ಉದ್ಯಮಿಗಳು ಬೂದು ಜಲಜನಕ ಉತ್ಪಾದನೆಗೆ ಹೆಚ್ಚು ಉತ್ಸಾಹ ತೋರುತ್ತಾರೆ.

ಕೇಂದ್ರ ಸರ್ಕಾರವು ಉತ್ಪಾದನೆಯ ಖರ್ಚಿನ ಮೇಲೆ ಹೆಚ್ಚಿನ ಸಬ್ಸಿಡಿ ನೀಡಿದರೆ ಮಾತ್ರ ಉದ್ಯಮಿಗಳು ಹಸಿರು ಜಲಜನಕ ಉತ್ಪಾದನೆಯ ಕಡೆ ಗಮನಹರಿಸು
ತ್ತಾರೆ, ಇಲ್ಲದಿದ್ದರೆ ಇಲ್ಲ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಹಸಿರು ಜಲಜನಕವನ್ನು ಉತ್ಪಾದಿಸಲು ಬೇಕಾಗುವ ಪರಿಕರಗಳು ಬಹಳ ದುಬಾರಿ. ಅವುಗಳನ್ನು
ಖರೀದಿಸಿ ಹಸಿರು ಜಲಜನಕ ಉತ್ಪಾದನೆಗೆ ಮುಂದಾಗುವವರು ತುಂಬಾ ಕಡಿಮೆ. ಹಸಿರು ಜಲಜನಕ ಉತ್ಪಾದಿಸಲು ತಗಲುವ ಸರಾಸರಿ ಖರ್ಚು, ತೊಡಗಿಸಿದ ಬಂಡವಾಳಕ್ಕೆ ಲಾಭ ತಂದುಕೊಡುವ ಕುರಿತು ಅನುಮಾನಗಳಿವೆ. ಬಂಡವಾಳ ಹೂಡಿಕೆಯ ಪ್ರಮಾಣ ಶೇ 20ರಷ್ಟು ಹೆಚ್ಚಿದರೂ ಹಸಿರು ಜಲಜನಕ ಉತ್ಪಾದನೆಯ ಖರ್ಚು ಶೇ 70ರಷ್ಟು ಏರಿಕೆಯಾಗುತ್ತದೆ ಎಂಬ ಲೆಕ್ಕಾಚಾರಗಳಿವೆ.

2024ರ ಮೇ ತಿಂಗಳಿನವರೆಗೆ ಹಸಿರು ಜಲಜನಕ ಉತ್ಪಾದನೆಯ 1,572 ಯೋಜನೆಗಳನ್ನು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ 370 ಶತಕೋಟಿ ಡಾಲರ್ಗಳ ಬಂಡವಾಳದ ಅವಶ್ಯಕತೆ ಇತ್ತು. ಘೋಷಿಸಿದ
ಯೋಜನೆಗಳ ಪೈಕಿ ಕೇವಲ 432ಕ್ಕೆ ಬಂಡವಾಳ ಹರಿದುಬಂತು. ಈ ಉದ್ಯಮದಲ್ಲಿ ದೊಡ್ಡ ರಿಸ್ಕ್ ಇದೆ ಎಂದು ಅಭಿಪ್ರಾಯಪಡುತ್ತಿರುವ ಉದ್ಯಮಿಗಳು, ಸಾಲ ನೀಡುವ ಬ್ಯಾಂಕುಗಳು ಜಲಜನಕ ಉತ್ಪಾದನೆಯ ಕ್ಷೇತ್ರದಲ್ಲಿರುವ ಸವಾಲುಗಳನ್ನು ಆಧರಿಸಿ ನಿಬಂಧನೆಗಳನ್ನು ಜಾರಿ ಮಾಡಬೇಕು ಎನ್ನುತ್ತಾರೆ. ಉತ್ಪಾದಿಸಿದ ಹಸಿರು ಜಲಜನಕವನ್ನು ಕೊಳ್ಳಲು ಸರ್ಕಾರವು ದೀರ್ಘಕಾಲದ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಹೂಡಿದ ಬಂಡವಾಳ ರಕ್ಷಣೆಗೆ ಉದ್ಯಮಸ್ನೇಹಿ ನಿಯಮ ರೂಪಿಸಬೇಕು.

ಆಸ್ಟ್ರೇಲಿಯಾ ಮತ್ತು ಜಪಾನ್ ಹಸಿರು ಜಲಜನಕ ಉತ್ಪಾದನಾ ಯೋಜನೆಗಳಿಗೆ ದೊಡ್ಡಮಟ್ಟದಲ್ಲಿ
ಕೈಜೋಡಿಸಿ ಕೆಲಸ ಮಾಡುತ್ತಿವೆ. ಬೇಡಿಕೆಯನ್ನು ಆಧರಿಸಿ ಉದ್ಯಮಗಳನ್ನು ಸ್ಥಾಪಿಸುವ ಸಾಂಪ್ರದಾಯಿಕ ಕ್ರಮಗಳಿಂದ ಹೊರಬಂದು ಉದ್ಯಮ ಸ್ಥಾಪನೆ, ಉತ್ಪಾದನೆ, ನಾವೀನ್ಯ ಮತ್ತು ಬಳಕೆಯನ್ನು ಒಟ್ಟೊಟ್ಟಿಗೆ ಮಾಡುತ್ತಿವೆ. ಯಶಸ್ಸನ್ನು ಗಳಿಸುತ್ತಿವೆ.

ಭಾರತ ಸಹ ಹೊರದೇಶಗಳಿಗೆ ನಮ್ಮ ಹಸಿರು ಜಲಜನಕವನ್ನು ರಫ್ತು ಮಾಡಲು, ಬಂಡವಾಳ ತರಲು ದೀರ್ಘಕಾಲದ ಒಪ್ಪಂದ ಮಾಡಿಕೊಳ್ಳಬೇಕು. ಒಡಿಶಾ,ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಈಗಾಗಲೇ
ಪ್ರಾರಂಭವಾಗಿರುವ ಹಸಿರು ಜಲಜನಕ ಉತ್ಪಾದನೆಯ ಯೋಜನೆಗಳು ಯಶಸ್ವಿಯಾದಲ್ಲಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ನಾವೇ ನಂಬರ್ ಒನ್ ಆಗುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.