ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಪ್ರಯೋಗ ಬೇಕೇ ಬೇಕು: ‘ನೀಟ್‌’ ಟಾಪರ್‌ ಡಿ.ಆರ್‌.ಫಣೀಂದ್ರ

Last Updated 7 ಜೂನ್ 2019, 20:00 IST
ಅಕ್ಷರ ಗಾತ್ರ

* ‘ನೀಟ್‌’ನಲ್ಲಿ ನೀವು ರಾಜ್ಯಕ್ಕೆ ಟಾಪರ್‌ ಅಂತ ಗೊತ್ತಾದಾಗ ನಿಮ್ಮೂರು, ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಎಂತಹ ಸಂಭ್ರಮ ಇತ್ತು ಹೇಳಿ?

ನಿಜಕ್ಕೂ ಊರಿಗೆ ಊರೇ ಸಂಭ್ರಮಪಟ್ಟಿದೆ. ಅದುವರೆಗೆ ಟಿ.ವಿಯಲ್ಲಿ ಮಾತ್ರ ನಮ್ಮೂರ ಜನರ‍್ಯಾಂಕ್‌ ಸಂಭ್ರಮ ನೋಡಿದ್ದಿರಬೇಕು.

* ನಿಮ್ಮ ಕಲಿಕೆಗೆ ದಕ್ಷಿಣಾ ಫೌಂಡೇಶನ್‌ ನೆರವಾಗಿದೆ. ನೀವು ಸಮಾಜಕ್ಕೆ ಹೇಗೆ ನೆರವಾಗಬೇಕು ಎಂದುಕೊಂಡಿರುವಿರಿ?

ನಾನೂ ಕೈಲಾದ ನೆರವು ನೀಡಲು ಈಗಲೇ ಸಂಕಲ್ಪ ಮಾಡಿದ್ದೇನೆ. ಏನಿಲ್ಲವೆಂದರೂ ನೀಟ್‌ನಂತಹ ಪರೀಕ್ಷೆಗೆ ತಯಾರಿ ನಡೆಸುವ ನಮ್ಮೂರ, ನಮ್ಮ ಸುತ್ತಮುತ್ತಲಿನ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತೇನೆ.

* ನಿಮ್ಮ ಬಳಿ ಮೊಬೈಲ್‌ ಇರಲಿಲ್ಲ ಎಂದು ತಿಳಿಯಿತು. ಲ್ಯಾಪ್‌ಟಾಪ್‌ ಸಹ ಇರಲಿಲ್ಲವೇ?

ಇಲ್ಲ, ನನಗೆ ಅದರ ಅಗತ್ಯವೇ ಬೀಳಲಿಲ್ಲ. ಓದಲು ಬೇಕಾದ ಎಲ್ಲ ಅಗತ್ಯಗಳನ್ನೂ ದಕ್ಷಿಣಾ ಫೌಂಡೇಶನ್‌ನವರು ಕೊಟ್ಟಿದ್ದರು. ಮತ್ತೆ ಲ್ಯಾಪ್‌ಟಾಪ್‌ನ ಅಗತ್ಯವೇನಿದೆ?

* ಈಗ ಟಾಪರ್‌ ಆಗಿದ್ದೀರಿ, ಇನ್ನಾದರೂ ಮೊಬೈಲ್‌ ಬೇಡವೇ?

ಈಗಲೂ ನನಗೆ ಅದು ಅತ್ಯಗತ್ಯ ಎನಿಸುತ್ತಿಲ್ಲ. ಆದರೆ ಮುಂದೆ ಕೆಲವೊಂದು ಮಾಹಿತಿಗಳನ್ನು ಬೇಗ ಪಡೆಯುವ ಅಗತ್ಯ ಇರುವುದರಿಂದ, ಮೊಬೈಲ್‌ ಕೊಡಿಸುವುದಾಗಿ ಅಪ್ಪ ಹೇಳುತ್ತಿದ್ದಾರೆ.

* ನಿಮ್ಮ ಪ್ರಕಾರ ‘ನೀಟ್‌’ ಯಾಕೆ ಕಷ್ಟ ಅಲ್ಲ?

ಸಿದ್ಧತೆಯೇ ಇದಕ್ಕೆಲ್ಲ ಕಾರಣ. ಎನ್‌ಸಿಇಆರ್‌ಟಿ ಮೇಲೆಯೇ ಗಮನಹರಿಸಬೇಕು. ಈ ಬಾರಿ ಅಲ್ಲಿನ ಪ್ರತಿ ಸಾಲು ಸಹ ಪರೀಕ್ಷೆಗೆ ಬಂದಿತ್ತು. ಜತೆಗೆ ಭೌತವಿಜ್ಞಾನ, ರಸಾಯನ ವಿಜ್ಞಾನದಲ್ಲಿ ಸ್ವಂತ ಪ್ರಯೋಗ ಮಾಡಲೇಬೇಕು. ಹಾಗೆ ಮಾಡಿದರೆ ಮಾತ್ರ ಪರೀಕ್ಷೆಯಲ್ಲಿ ಕೈಯ ವೇಗ ಹೆಚ್ಚುತ್ತದೆ.

* ಗ್ರಾಮೀಣ ಪ್ರದೇಶದ ಹುಡುಗ ಪೇಟೆ ಮಕ್ಕಳನ್ನೂ ಹಿಂದಿಕ್ಕಿ ಹೋದನಲ್ಲ. ಇದು ಹೇಗೆ ಸಾಧ್ಯವಾಯಿತು?

ಗಮನ ಕೊಟ್ಟು ಓದಿದರೆ ಮತ್ತು ಓದುವ ಹಂತದಲ್ಲಿ ಎದುರಾಗುವ ಸಂಶಯಗಳನ್ನು ಉಪನ್ಯಾಸಕರ ನೆರವಿನಿಂದ ಬಗೆಹರಿಸಿಕೊಂಡರೆ ಮುಂದೆ ಪರೀಕ್ಷೆಯಲ್ಲಿ ತೊಡಕಾಗದು. ಸಾಧನೆಗೆ ಹಳ್ಳಿ- ಪೇಟೆ ಎಂಬುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT