ದ್ವಿಮುಖ ತೆರಿಗೆ ನಿವಾರಣೆಗೆ ಭಾರತ–ಚೀನಾ ಒಪ್ಪಂದ
ನವದೆಹಲಿ, ಜುಲೈ 18 (ಯುಎನ್ಐ, ಪಿಟಿಐ)– ಭಾರತ–ಚೀನಾ ದೇಶಗಳ ವಾಣಿಜ್ಯ ವಹಿವಾಟಿನಲ್ಲಿ ಉಭಯತ್ರ ತೆರಿಗೆ ಬೀಳುವುದನ್ನು ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆ ತಪ್ಪಿಸುವುದನ್ನು ತಡೆಯಲು ಉಭಯ ದೇಶಗಳು ಇಂದು ಒಪ್ಪಂದಕ್ಕೆ ಸಹಿ ಹಾಕಿದವು.

ದ್ವಿಪಕ್ಷೀಯ ಚರ್ಚೆಯ ಆನಂತರ ಭಾರತ ಸರ್ಕಾರದ ಪರವಾಗಿ ಹಣಕಾಸು ಸಚಿವ ಮನಮೋಹನ್ ಸಿಂಗ್, ಚೀನಾ ಸರ್ಕಾರದ ಪರವಾಗಿ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಕಿಯಾನ್ ಕಿಚೆನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ತಂತ್ರಜ್ಞಾನ ವರ್ಗಾವಣೆ ಮತ್ತು ಬಂಡವಾಳ ಹೂಡಿಕೆಗಳ ಮೇಲೆ ಸ್ಥಳೀಯ ತೆರಿಗೆ ದರಗಳಿಗಿಂತ ಕಡಿಮೆ ದರದಲ್ಲಿ ತೆರಿಗೆ ವಿಧಿಸಲು ಈ ಒಪ್ಪಂದದಲ್ಲಿ ಅವಕಾಶ ಸಿಗುತ್ತದೆ. ಉಭಯ ದೇಶಗಳ ನಡುವೆ ವಾಣಿಜ್ಯ ಸುಧಾರಣೆಗೆ ಈ ಒಪ್ಪಂದ ನೆರವಾಗಲಿದೆ.

ಬ್ರೆಜಿಲ್ ಮಡಿಲಿಗೆ ವಿಶ್ವ ಕಪ್
ಪಸಡೆನಾ, ಜುಲೈ 18– ಇಟಲಿಯ ಮೇಲೆ ಶೂಟ್ಔಟ್ ಜಾರಿಗೆ ತಂದಾಗ 3–2 ಗೋಲುಗಳಿಂದ ಗೆದ್ದ ಬ್ರೆಜಿಲ್ ತಂಡದವರು ನಾಲ್ಕನೆ ಬಾರಿಗೆ ಪ್ರಶಸ್ತಿ ಗಳಿಸಿ ವಿಶ್ವ ಕಪ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ದಾಖಲೆ ಸ್ಥಾಪಿಸಿದರು.

ಯಾರೇ ಗೆದ್ದಿದ್ದರೂ ಅದು ದಾಖಲೆಯಾಗುತ್ತಿತ್ತು. 64 ವರ್ಷಗಳ ಇತಿಹಾಸದ ಈ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ವಿಜಯಿಗಳನ್ನು ನಿರ್ಧರಿಸಲು ಪೆನಾಲ್ಟಿ ಒದೆತಗಳ ಶೂಟ್ಔಟ್ ಜಾರಿಗೆ ತಂದದ್ದು ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.