ಭಾನುವಾರ, ಮೇ 9, 2021
26 °C

25 ವರ್ಷಗಳ ಹಿಂದೆ: ಶನಿವಾರ 13.4.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ, ನಲಗೊಂಡ ಕ್ಷೇತ್ರ ಮೇ 27ರಂದು ಚುನಾವಣೆ

ನವದೆಹಲಿ, ಏ. 12– ಅತ್ಯಧಿಕ ಅಭ್ಯರ್ಥಿಗಳು ಕಣಕ್ಕಿಳಿದಿದ್ದುದರಿಂದ ಮುಂದೂಡಲಾಗಿದ್ದ ಕರ್ನಾಟಕದ ಬೆಳಗಾವಿ, ಆಂಧ್ರ ಪ್ರದೇಶದ ನಲಗೊಂಡ ಲೋಕಸಭಾ ಕ್ಷೇತ್ರಗಳ ಚುನಾವಣೆ ಮೇ 27ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.

ಭಾರಿ ಪ್ರಮಾಣದಲ್ಲಿ ಸ್ಪರ್ಧಿಗಳು ಕಣದಲ್ಲಿರುವುದರಿಂದ, ಆಡಳಿತದ ದೃಷ್ಟಿಯಿಂದ ಕೆಲವು ತೊಂದರೆಗಳಿರುವು ದಾಗಿ ರಾಜ್ಯ ಸರ್ಕಾರಗಳು ಮಾಡಿದ್ದ ಮನವಿಯನ್ನು ಗಮನಿಸಿ ಈ ಕ್ಷೇತ್ರಗಳ ಚುನಾವಣೆ ದಿನಗಳನ್ನು ಈಗ ಬದಲಿಸ ಬೇಕಾಯಿತು ಎಂದು ಆಯೋಗದ ವಕ್ತಾರ ಸುಭಾಷ್‌ ಪಾಣಿ ತಿಳಿಸಿದರು.

ಪ್ರಧಾನಿಗೆ ಏಕೆ ವಿಮಾನ– ಅಡ್ವಾಣಿ

ಬೆಂಗಳೂರು, ಏ. 12– ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಸರ್ಕಾರಿ ಹೆಲಿಕಾಪ್ಟರ್ ಅಥವಾ ವಿಮಾನವನ್ನು ಬಳಸಬಾರದೆಂಬ ಚುನಾವಣಾ ಆಯೋಗದ ನಿಬಂಧನೆಯನ್ನು ಪ್ರಧಾನ ಮಂತ್ರಿಗಳಿಗೂ ಅನ್ವಯಿಸಬೇಕು ಎಂದು ಬಿಜೆಪಿಯ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಅಭಿಪ್ರಾಯಪಟ್ಟರು.

ಪ್ರಧಾನ ಮಂತ್ರಿಗಳ ಹೆಲಿಕಾಪ್ಟರ್ ಅಥವಾ ವಿಮಾನ ಬಳಕೆಯ ವೆಚ್ಚವನ್ನು ಅವರ ಪಕ್ಷವು ತುಂಬುವುದಾದಲ್ಲಿ, ವೆಚ್ಚ ತುಂಬುವ ಸಾಮರ್ಥ್ಯವಿರುವ ಇತರ ಪಕ್ಷಗಳಿಗೂ ಅವುಗಳ ಬಳಕೆಗೆ ಅನುವು ಮಾಡಿಕೊಡಬೇಕೆಂದು ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು