ಮಂಗಳವಾರ, ಡಿಸೆಂಬರ್ 7, 2021
24 °C

25 ವರ್ಷಗಳ ಹಿಂದೆ: ಗುರುವಾರ ಅಕ್ಟೋಬರ್‌ 17, 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶ: ಅತಂತ್ರ ಸ್ಥಿತಿ

ನವದೆಹಲಿ, ಅ. 16 (ಯುಎನ್‌ಐ)– ಉತ್ತರಪ್ರದೇಶದಲ್ಲಿ ಬಿಜೆಪಿಯು ಸರ್ಕಾರ ರಚನೆ ಮಾಡಲು ತಮ್ಮ ಪಕ್ಷ ಬೆಂಬಲ ನೀಡುವುದಿಲ್ಲ ಎಂದು ಬಿಎಸ್‌ಪಿಯ ಪ್ರಧಾನ ಕಾರ್ಯದರ್ಶಿ ಮಾಯಾವತಿ ಅವರು ರಾಜ್ಯಪಾಲರಿಗೆ ತಿಳಿಸಿರುವುದರಿಂದ ಉತ್ತೇಜಿತರಾಗಿರುವ ಪ್ರಧಾನಿ ಹಾಗೂ ಸಂಯುಕ್ತ ರಂಗದ ನಾಯಕ ಎಚ್‌.ಡಿ. ದೇವೇಗೌಡರು ಆ ರಾಜ್ಯದಲ್ಲಿ ಜನಪ್ರಿಯ ಸರ್ಕಾರ ರಚನೆಗೆ ಕೊನೆ ಗಳಿಗೆ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

 ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಬಿಎಸ್‌ಪಿ ಹೇಳುವ ಮೂಲಕ ಸಂಯುಕ್ತ ರಂಗದ ಷರತ್ತನ್ನು ಈಡೇರಿಸಿರುವುದರಿಂದ ರಂಗ ಈಗ ತೀವ್ರ ಚಟುವಟಿಕೆಯಲ್ಲಿ ತೊಡಗಿದೆ.

ಈ ನಡುವೆ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಾಯಕರು ಸರ್ಕಾರ ಸಲ್ಲಿಸಲು ಆಹ್ವಾನಿಸುವಂತೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು