ಆರೋಪಿಗಳಿಗೆ ಮತದಾನ ಹಕ್ಕು ನಿರಾಕರಣೆ: ಗಿಲ್ ಪ್ರಸ್ತಾಪ

ನವದೆಹಲಿ, ಏ. 18 (ಯುಎನ್ಐ)– ಕನಿಷ್ಠ ಐದು ವರ್ಷ ಜೈಲುವಾಸ ಶಿಕ್ಷೆ ನೀಡಲು ಅವಕಾಶವಿರುವಂಥ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕು ಎಂಬ ಸಲಹೆಯನ್ನು ಚುನಾವಣಾ ಆಯೋಗ ಮಂಡಿಸಿದೆ.

ಇದನ್ನು ಚುನಾವಣಾ ಕಮಿಷನರ್ ಎಂ.ಎಸ್.ಗಿಲ್ ಅವರು ರಾಜ್ಯ ಚುನಾವಣಾ ಕಮಿಷನರ್ ಅವರ ಒಂದು ದಿನದ ಸಮ್ಮೇಳನದಲ್ಲಿ ತಿಳಿಸಿದರು.

ರಾಜಕೀಯದಲ್ಲಿ ಅಪರಾಧ ಪ್ರವೃತ್ತಿಯನ್ನು ತಡೆಯುವ ಉದ್ದೇಶದ ಈ ಪ್ರಸ್ತಾಪವನ್ನು ಆಯೋಗವು ಏ. 29ರಂದು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಡಾ. ಫಾರೂಕ್ ಅಬ್ದುಲ್ಲ ಸೇರಿದಂತೆ ಕೆಲವು ರಾಜಕೀಯ ನಾಯಕರು ಈ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ‘ಅಭ್ಯರ್ಥಿಗಳಾಗುವವರ ವಿರುದ್ಧ ಇಂಥ ಕ್ರಿಮಿನಲ್ ಆರೋಪಗಳನ್ನು ಕ್ಷಿಪ್ರವಾಗಿ ಹುಟ್ಟುಹಾಕಿ ಕೋರ್ಟಿನಲ್ಲಿ ದಾವೆ ಹೂಡುವುದು ಸುಲಭ ಎಂಬುದು ನಿಜ. ಇದು ನಿಜವಾಗಿಯೂ ವಿಚಾರಿಸತಕ್ಕ ವಿಷಯ’ ಎಂದು ಹೇಳಿದ ಗಿಲ್ ಆದರೂ ರಾಜಕೀಯದಲ್ಲಿ ಅಪರಾಧ ಪ್ರವೃತ್ತಿಯನ್ನು ತಡೆಯಲು ರಾಜಕೀಯ ಪಕ್ಷಗಳು ಬೇಗನೇ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಕ್ರಿಕೆಟ್ ಆಟಗಾರರಿಗೆ ನೀತಿ ಸಂಹಿತೆ ರೂಪಿಸಲು ಕ್ರಮ

ಕಲ್ಲತ್ತ, ಏ. 18– ದೇಶದಲ್ಲಿ ಮೋಸದಾಟ ಮತ್ತು ಬಾಜಿ ವ್ಯವಹಾರದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಹಲವಾರು ಕ್ರಮ ಕೈಗೊಳ್ಳಲಿದೆ. ಅಲ್ಲದೆ ಆಟಗಾರರಿಗಾಗಿ ನೀತಿ ಸಂಹಿತೆ ರೂಪಿಸಲಾಗುವುದು ಎಂದು ಭಾರತ ಕ್ರಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.