ರಂಗಕ್ಕೆ ಬೆಂಬಲ: ಶರ್ಮಾಗೆಕಾಂಗ್ರೆಸ್ ಪತ್ರ

ನವದೆಹಲಿ, ಏ. 18 (ಪಿಟಿಐ, ಯುಎನ್‌ಐ)– ಹೊಸ ನಾಯಕನ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಂಯುಕ್ತ ರಂಗಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್(ಐ) ಪಕ್ಷ ಇಂದು ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮಾ ಅವರಿಗೆ ಪತ್ರ ಬರೆದಿರುವುದರಿಂದ ಸಂಯುಕ್ತ ರಂಗಕ್ಕೆ ಹೊಸ ನಾಯಕನನ್ನು ಆರಿಸಲು ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.

ಹೊಸ ನಾಯಕನ ಆಯ್ಕೆ ಕುರಿತಂತೆ ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಇಂದು ಮಧ್ಯರಾತ್ರಿ ಪ್ರಧಾನಿ ಸೇರಿದಂತೆ ರಂಗದ ಘಟಕ ಪಕ್ಷಗಳ ನಾಯಕರ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಿದರು. ನಾಳೆ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ.

ಸಂಯುಕ್ತ ರಂಗವು ದೇವೇಗೌಡ ಅವರ ಉತ್ತರಾಧಿಕಾರಿಯನ್ನು ನಾಳೆ ಆರಿಸುವ ಸಂಭವವಿದೆ.

ನಕಲಿ ವೈದ್ಯಕೀಯ ಕಾಲೇಜು–ಗಣ್ಯರ ಬಂಧನ

ರಾಯಚೂರು, ಏ. 18– ಸಿಂಧನೂರಿನಲ್ಲಿ ನಕಲಿ ವೈದ್ಯಕೀಯ ಕಾಲೇಜೊಂದನ್ನು ಸ್ಥಾಪಿಸಿ ಅನೇಕ ಮುಗ್ಧ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದ ಮೇಲೆ ಅಲ್ಲಿನ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಸಿಂಧನೂರಿನ ಇತರ ಕೆಲ ಪ್ರತಿಷ್ಠಿತರು ಬಂಧನದ ಬೆದರಿಕೆಯಿಂದ ಭೂಗತರಾಗಿದ್ದು ಅವರಿಗಾಗಿ ಶೋಧ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.