ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಕಾರ್ಗಿಲ್‌: ಮತ್ತೆ ಮುಂದುವರಿದ ವಾಯುದಾಳಿ

Published 6 ಜೂನ್ 2024, 23:42 IST
Last Updated 6 ಜೂನ್ 2024, 23:42 IST
ಅಕ್ಷರ ಗಾತ್ರ

ನವದೆಹಲಿ, ‌ಜೂನ್‌ 6: ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನದ ಅತಿಕ್ರಮಣಕಾರರ ವಿರುದ್ಧ ನಿನ್ನೆ ಸ್ಥಗಿತಗೊಳಿಸಿದ್ದ ವಾಯು‌ದಾಳಿಯನ್ನು ಭಾರತ ಇಂದು ಮುಂದುವರಿಸುವ ಮೂಲಕ ಸೇನಾ ಕಾರ್ಯಾಚರಣೆಯನ್ನು ಮತ್ತೆ ಬಿರುಸುಗೊಳಿಸಿತು.

ಈ ನಡುವೆ ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್‌ ಅಜೀಜ್‌ ಅವರ ಉದ್ದೇಶಿತ ಭಾರತ ಭೇಟಿ ಸಂದರ್ಭದಲ್ಲಿ ಕಾರ್ಗಿಲ್‌ ನಲ್ಲಿನ ಅತಿಕ್ರಮಣವು ಚರ್ಚೆಯ ಪ್ರಮುಖ ವಿಷಯವಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಕೆ.ರಘುನಾಥ್ ಅವರು ಟಿ.ವಿ. ಚಾನೆಲ್‌ವೊಂದಕ್ಕೆ ಇಂದು ರಾತ್ರಿ ತಿಳಿಸಿದ್ದಾರೆ.

ಗೋವಾದಲ್ಲಿ ಕಾಂಗ್ರೆಸ್‌ಗೆ ಬಹುಮತ

ಪಣಜಿ, ಜೂನ್ 6: ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನಿಚ್ಚಳ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬಂದಿದೆ. ರಾಜಕೀಯ ಅಭದ್ರತೆಯ ನೆಲೆವೀಡಾಗಿದ್ದ ಈ ರಾಜ್ಯಕ್ಕೆ ಕೊನೆಗೂ ರಾಜಕೀಯ ಸ್ಥಿರತೆ ಮರಳಿದಂತೆ ಆಗಿದೆ.

10 ವರ್ಷಗಳಲ್ಲಿ 9 ಮುಖ್ಯಮಂತ್ರಿಗಳನ್ನು ಕಂಡ ಗೋವಾದಲ್ಲಿ ಕಳೆದ 4 ತಿಂಗಳುಗಳಿಂದ ರಾಷ್ಟ್ರಪತಿ ಆಳ್ವಿಕೆಯಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT