ಮಂಡ್ಯ, ಜುಲೈ 1– ಜಿಲ್ಲೆಯ ಮದ್ದೂರು ತಾಲ್ಲೂಕು ಶಿಂಷಾ ನದಿ ದಡದಲ್ಲಿರುವ ಅಣೆತಗ್ಗಹಳ್ಳಿ ಗ್ರಾಮಕ್ಕೆ ಈಗ ಸೂತಕ ತಟ್ಟಿ, ತಿಥಿ ದಿನಗಳನ್ನು ಎದುರಿಸುತ್ತಿದೆ.

ಗ್ರಾಮಸ್ಥರು ಕೇವಲ ಒಂದು ವಾರಾವಧಿಯಲ್ಲಿ ನಾಲ್ಕು ಸಾವು ಕಂಡು ಅಧೀರರಾಗಿದ್ದಾರೆ. ಗ್ರಾಮದಲ್ಲಿ ಹಿರಿಯರಾಗಿದ್ದ ಇಬ್ಬರು ಹೃದಯಾಘಾತಕ್ಕೆ ಒಳಗಾದರೆ ಇನ್ನಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಗ್ರಾಮ ಎಲ್ಲರ ಗಮನ ಸೆಳೆದು ಹಗಲು–ರಾತ್ರಿ ಪೊಲೀಸರ ಸರ್ಪಗಾವಲಿನಲ್ಲಿದೆ.

ಗ್ರಾಮದ ಸೂತಕಕ್ಕೆ ಕಾರಣರಾಗಿರುವವರು ಚನ್ನಬಸಪ್ಪ, ದೊಳ್ಳೇಗೌಡ, ಕರೀಗೌಡ, ಚಿಕ್ಕೋನಯ್ಯ ಎಂಬ 60 ವರ್ಷ ಗಡಿ ದಾಟಿದ ವೃದ್ಧರು.

ಸತತ ಮಳೆ: ಮನೆ ಕುಸಿದು ಮೂವರ ಸಾವು

ಅಫಜಲಪುರ, ಜುಲೈ 1– ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಸತತವಾಗಿ ಮಳೆ ಬಿದ್ದ ಕಾರಣ ಅಫಜಲಪುರ ತಾಲ್ಲೂಕಿನ ಬಂಕಲಗಿ ಗ್ರಾಮದಲ್ಲಿ ಮನೆಯೊಂದು ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಸತ್ತವರು ಹೊನ್ನಪ್ಪ ಪೂಜಾರಿ (28), ಆತನ ಹೆಂಡತಿ ಭಾರತೀ ಬಾಯಿ (24) ಮತ್ತು ಮಗು ಮಲ್ಲಿನಾಥ (2).

ಘಟನಾ ಸ್ಥಳಕ್ಕೆ ಉಪ ಆಯುಕ್ತ ಮಹದೇವ್ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.