ಶನಿವಾರ, ಮೇ 8, 2021
17 °C
25 ವರ್ಷಗಳ ಹಿಂದೆ ಸೋಮವಾರ 25.3.1996

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಸೋಮವಾರ 25–3–1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಳದ ಜತೆ ಮೈತ್ರಿಗೆ ಬಿಎಸ್‌ಪಿ ನಕಾರ

ನವದೆಹಲಿ, ಮಾರ್ಚ್ 24 (ಪಿಟಿಐ)– ಮುಂಬರುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನ ಹತ್ತಿರ ಬರುತ್ತಿದ್ದರೂ ವಿವಿಧ ರಾಜಕೀಯ ಪಕ್ಷಗಳ ಮಧ್ಯೆ ಹೊಂದಾಣಿಕೆ ಕಸರತ್ತು ಇನ್ನೂ ಮುಗಿದಿಲ್ಲ. ದಳ–ಬಿಎಸ್‌ಪಿ ಮೈತ್ರಿ ಮುರಿದು ಬಿದ್ದಿದ್ದು ಇಂದಿನ ವಿದ್ಯಮಾನ.

ರಾಷ್ಟ್ರಮಟ್ಟದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ ಸ್ಪಷ್ಟಪಡಿಸಿದ್ದು ಜನತಾದಳದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಬಹುಜನ ಸಮಾಜ ಪಕ್ಷ ತಳ್ಳಿಹಾಕಿದೆ. ಈ ನಡುವೆ, ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ಕುರಿತಂತೆ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷಗಳು ಇಂದು ಸಭೆ ನಡೆಸಿದವು.

ಕಾಂಗೈ ಒಳಗಿನ ದುಷ್ಟಶಕ್ತಿ ತೊಲಗಿಸಲು ರಾವ್ ಪಣ

ನವದೆಹಲಿ, ಮಾರ್ಚ್ 24 (ಪಿಟಿಐ)– ಪಕ್ಷದೊಳಗೇ ಇರುವ ದುಷ್ಟಶಕ್ತಿಗಳನ್ನು ತೊಲಗಿಸಿ ಹೊಸ ರಕ್ತದೊಂದಿಗೆ ಪಕ್ಷವನ್ನು ಪುನರ್‌ರಚಿಸುವುದಾಗಿ ಕಾಂಗೈ ಅಧ್ಯಕ್ಷರೂ ಆಗಿರುವ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಘೋಷಿಸಿದರು.‌

ದೆಹಲಿ ಪ್ರದೇಶ ಕಾಂಗೈ ಸಮಿತಿ ಏರ್ಪಡಿಸಿದ್ದ ಸಂಕಲ್ಪ ರ‍್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು. ಹವಾಲ ಹಗರಣವನ್ನು ಪ್ರಸ್ತಾಪಿಸದೆ ಮಾತನಾಡಿದ ಅವರು, ಪಕ್ಷದೊಳಗೆ ಕೆಲವು ದುಷ್ಟಶಕ್ತಿಗಳಿವೆ. ಅವುಗಳನ್ನು ತೊಲಗಿಸಬೇಕಾಗಿದೆ ಮತ್ತು ಪ‍ಕ್ಷದೊಳಕ್ಕೆ ಹೊಸ ಮುಖಗಳ ಸೇರ್ಪಡೆಯಾಗಬೇಕಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು