ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಬುಧವಾರ 18 ಜೂನ್ 1997

Last Updated 17 ಜೂನ್ 2022, 20:00 IST
ಅಕ್ಷರ ಗಾತ್ರ

ಕೇಂದ್ರದ ತೆರಿಗೆಯಲ್ಲಿ ಶೇ. 29 ರಾಷ್ಟ್ರಗಳಿಗೆ

ನವದೆಹಲಿ, ಜೂನ್‌ 17 (ಯುಎನ್‌ಐ, ಪಿಟಿಐ)– ಕೇಂದ್ರ ಸರ್ಕಾರದ ತೆರಿಗೆಯಲ್ಲಿ
ಶೇ 29ರಷ್ಟನ್ನು ರಾಜ್ಯ ಸರ್ಕಾರಗಳಿಗೆ ನೀಡಲು ಅಂತರ ರಾಜ್ಯ ಮಂಡಳಿ ಇಂದು ಒಪ್ಪಿಗೆ ನೀಡಿದೆ.

ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆರ್ಥಿಕ ಅಧಿಕಾರ ನೀಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಈ ಕ್ರಮವನ್ನು ಕೈಗಳ್ಳಲಾಗಿದೆ.

ಸಚಿವರ ವಿದೇಶ ಪ್ರವಾಸ; ಶ್ವೇತಪತ್ರಕ್ಕೆ ಆಗ್ರಹ

ಬೆಂಗಳೂರು, ಜೂನ್‌ 17– ಜನತಾದಳ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸೇರಿದಂತೆ ಅವರ ಮಂತ್ರಿ ಮಂಡಲದ ಸದಸ್ಯರ ವಿದೇಶ ಪ್ರವಾಸಗಳು ಹೆಚ್ಚಾಗಿ ಇಲ್ಲಿಯವರೆಗೆ ರಾಜ್ಯ ಬೊಕ್ಕಸಕ್ಕೆ ಒಟ್ಟಾರೆ ಸುಮಾರು 12 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಿರುವ ಹಿನ್ನೆಲೆಯಲ್ಲಿ ಪ್ರವಾಸದಿಂದ ರಾಜ್ಯಕ್ಕೆ ಆಗಿರುವ ಪ್ರಯೋಜನಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಇಲ್ಲಿ ಆಗ್ರಹಪಡಿಸಿದರು.

‘ವಿದೇಶಿ ಬಂಡವಾಳದ ಹೆಸರಿನಲ್ಲಿ ಸಿಕ್ಕಾಪಟ್ಟೆ ಪ್ರವಾಸ ಮಾಡುತ್ತಿದ್ದಾರೆ. ಇದರಿಂದ ಕರ್ನಾಟಕಕ್ಕೆ ಪ್ರಯೋಜನ ಆಗಿಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಯಾರ್ಯಾರು ಎಷ್ಟೆಷ್ಟು ದೇಶಗಳಿಗೆ ಭೇಟಿ ಕೊಟ್ಟರು, ಎಷ್ಟು ವಿದೇಶಿ ಬಂಡವಾಳ ತಂದರು ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಅವರು ಆಗ್ರಹಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT