ನಾಮಪತ್ರ ಸಲ್ಲಿಸಲು ರಾಜ್ಯದ ಏಳು ಸಚಿವರಿಗೆ ದಳ ಆದೇಶ

ಬೆಂಗಳೂರು, ಏ. 1– ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವಂತೆ ಹಿರಿಯ ಸಚಿವರಾದ ಆರ್.ಎಲ್.ಜಾಲಪ್ಪ,ಪಿ.ಜಿ.ಆರ್.ಸಿಂಧ್ಯ, ವೈಜನಾಥ್ ಪಾಟೀಲ್ ಮತ್ತು ಶಿವಾನಂದ ಕೌಜಲಗಿ ಅವರೂ ಸೇರಿದಂತೆ ಒಟ್ಟು ಏಳು ಜನ ಸಚಿವರಿಗೆ ರಾಜ್ಯ ಜನತಾ ದಳದ ಸಂಸದೀಯ ಮಂಡಲಿ ಆದೇಶ ನೀಡಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಬಹುತೇಕ ಸಚಿವರು ಹಿಂದೇಟು ಹಾಕುತ್ತಿರುವಾಗಲೇ ಸಚಿವರಿಗೆ ಮಂಡಲಿ ಈ ಆದೇಶ ನೀಡಿರುವುದು ದಳದಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.

ಹವಾಲ: 7 ಮಾಜಿ ಸಚಿವರಿಗೆ ಟಿಕೆಟ್ ಇಲ್ಲ

ನವದೆಹಲಿ, ಏ. 1 (ಪಿಟಿಐ)– ಹವಾಲ ಹಗರಣದ ಆರೋಪಿಗಳಾದ ಏಳು ಮಾಜಿ ಸಚಿವರಿಗೆ ಲೋಕಸಭಾ ಚುನಾವಣೆಗೆ ಕಾಂಗೈ ಟಿಕೆಟ್ ನಿರಾಕರಿಸಿದೆ. ಇವರಲ್ಲಿ ಬಲರಾಂ ಜಾಖಡ್, ಆರ್.ಕೆ.ಧವನ್, ಮಾಧವರಾವ್ ಸಿಂಧಿಯಾ, ವಿ.ಸಿ.ಶುಕ್ಲಾ, ಬೂಟಾ ಸಿಂಗ್, ಕಮಲನಾಥ್, ಅರವಿಂದ ನೇತಂ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.