ಶನಿವಾರ, ನವೆಂಬರ್ 28, 2020
22 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ 6-11-1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ರೇಲ್‌ ಪ್ರಧಾನಿ ರಬಿನ್‌ ಹತ್ಯೆ

ಟೆಲ್‌ ಅವೀವ್‌, ನ.5 (ಎಪಿ)– ಇಸ್ರೇಲ್‌ನ ಪ್ರಧಾನಿ ಯಿಜ್ದೆಕ್‌// ರಬಿನ್‌ ಅವರು ಶನಿವಾರ ರಾತ್ರಿ ಯೆಹೂದಿ ಹಂತಕನೊಬ್ಬನ ಗುಂಡಿಗೆ ಬಲಿಯಾದರು. ಇಸ್ರೇಲ್‌ ಶಾಂತಿ ಸಭೆಯಲ್ಲಿ ಭಾಷಣ ಮುಗಿಸಿ ಕಾರ್‌ ಹತ್ತಲು ಬಂದಾಗ ಮೂರು ಗುಂಡುಗಳು ಅವರತ್ತ ಹಾರಿದವು. ನಂತರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ರಬಿನ್‌ ಕೊನೆಯುಸಿರೆಳೆದರು.

ಡೀಸೆಲ್‌ ಜನರೇಟರ್‌ ಬಳಸುವ ರೈತರಿಗೆ ರಿಯಾಯ್ತಿ

ಬೆಂಗಳೂರು, ನ. 5– ಕೃಷಿಗೆ ಡೀಸೆಲ್‌ ಜನರೇಟರ್‌ ಬಳಸುವ ರೈತರಿಗೆ ಕೆಲವು ರಿಯಾಯ್ತಿಗಳನ್ನು ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ಪ್ರಕಟಿಸಿದರು.

ರಾಜ್ಯ ತೀವ್ರ ವಿದ್ಯುತ್‌ ಸಮಸ್ಯೆಯನ್ನು ಎದುರಿಸುತ್ತಿದೆ. ಸಮಸ್ಯೆಯಿಂದ ಹೇಗೆ ಹೊರಬರುವುದು ಎಂಬ ಚಿಂತೆ ಕಾಡುತ್ತಿದೆ. ಲಿಂಗನಮಕ್ಕಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಶೇ 40ರಷ್ಟು ಮಾತ್ರ ನೀರಿದೆ. ಲಿಂಗನಮಕ್ಕಿಗೆ ನೀರು ತುಂಬಿಸೋಣ ಎಂದರೆ ತಾವು ಅತಿಮಾನುಷರಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ನಲ್ಲಿ ಸಕ್ರಮ: ಬೆಂಗಳೂರು ಹಡ್ಸನ್‌ ವೃತ್ತ ಹಾಗೂ ಶಿರಶಿ ವೃತ್ತದಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ‘ಫ್ಲೈ ಓವರ್‌’ಗಳನ್ನು ನಿರ್ಮಿಸಲು ಸಚಿವ ಸಂಪುಟ ಮುಂದಿನ ಸಭೆಯಲ್ಲಿ ಮಂಜೂರಾತಿ ನೀಡಲಾಗುವುದು. ಸುಮಾರು ನಲವತ್ತು ಸಾವಿರ ಅನಧಿಕೃತ ನಲ್ಲಿಗಳನ್ನು ಸಕ್ರಮ ಮಾಡಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು