ಮಂಗಳವಾರ, ಮಾರ್ಚ್ 9, 2021
31 °C

25 ವರ್ಷಗಳ ಹಿಂದೆ: ಗುರುವಾರ, 18–1–1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಕ್ಲಾ, ಸಿಂಧಿಯಾ, ಜಾಖಡ್‌ ರಾಜೀನಾಮೆ

ನವದೆಹಲಿ, ಜ. 17 (ಪಿಟಿಐ)– 65 ಕೋಟಿ ರೂ. ಹವಾಲ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಮೂವರು ಕೇಂದ್ರ ಸಚಿವರಾದ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ವಿ.ಸಿ. ಶುಕ್ಲಾ, ಕೃಷಿ ಸಚಿವ ಬಲರಾಂ ಜಾಖಡ್‌ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮಾಧವರಾವ್‌ ಸಿಂಧಿಯಾ ಅವರು ಇಂದು ರಾತ್ರಿ ರಾಜೀನಾಮೆ ನೀಡಿದರು.‌

ಹವಾಲ ಹಗರಣದಲ್ಲಿ ಯಾವುದೇ ರೀತಿಯ ಪಾತ್ರ ಇಲ್ಲವಾದರೂ ಸುಪ್ರೀಂ ಕೋರ್ಟಿನ ಸೂಚನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಮೂವರು ಸಚಿವರೂ ಸಿಬಿಐ ಕ್ರಮವನ್ನು ಪ್ರಶ್ನಿಸಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ರಾಜಕೀಯ ವಲಯವನ್ನು ತಲ್ಲಣಗೊಳಿಸಿರುವ ಹವಾಲ ಹಗರಣದ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಸದ್ಯದಲ್ಲಿಯೇ ಮತ್ತೆ ಸುಮಾರು 25 ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳ ವಿರುದ್ಧ ವಿ.ಬಿ. ಗುಪ್ತಾ ನೇತೃತ್ವದ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಹವಾಲ ಎಂದರೇನು?

ನವದೆಹಲಿ, ಜ. 17– ಹವಾಲ ವ್ಯವಹಾರವು ಅಧಿಕೃತ ವಿದೇಶಿ ವಿನಿಮಯ ವ್ಯವಹಾರದ ಹೊರಗೆ ನಡೆಯುವ ಒಂದು ಅಕ್ರಮ ದಂಧೆ.

ಈ ದಂಧೆ ನಡೆಸುವ ಏಜೆಂಟರು ವಿದೇಶಗಳಿಗೆ ಹೋಗುವವರು. ಇಲ್ಲವೇ ರೂಪಾಯಿಯನ್ನು ಡಾಲರ್‌ ರೂಪದಲ್ಲಿ ಪಡೆಯಲು ಬಯಸುವವರಿಗೆ ಅಕ್ರಮ ವ್ಯವಹಾರದ ಮೂಲಕ ರೂಪಾಯಿಯನ್ನು ಪಡೆದು ಡಾಲರ್‌ಗೆ ಪರಿವರ್ತಿಸಿಕೊಡುವವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು