ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಮೇ 28-5-1996

Last Updated 27 ಮೇ 2021, 19:30 IST
ಅಕ್ಷರ ಗಾತ್ರ

ವಿಶ್ವಾಸ ನಿರ್ಣಯ: ಇಂದು ಮತದಾನ

ನವದೆಹಲಿ, ಮೇ 27 (ಪಿಟಿಐ)– ಹನ್ನೊಂದು ದಿನಗಳ ಹಿಂದೆ ಅಧಿಕಾರಕ್ಕೆ ಬಂದ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಇಂದು ಲೋಕಸಭೆಯಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಿತು. ನಿರ್ಣಯದ ಮೇಲಿನ ಚರ್ಚೆ ಅಪೂರ್ಣಗೊಂಡಿದ್ದು ನಾಳೆ ಮಧ್ಯಾಹ್ನ 1.30ಕ್ಕೆ ಇದನ್ನು ಮತಕ್ಕೆ ಹಾಕುವುದರೊಂದಿಗೆ ಬಿಜೆಪಿ– ಶಿವಸೇನೆ ನೇತೃತ್ವದ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

ತಮ್ಮ ಸರ್ಕಾರಕ್ಕೆ ಸದನದಲ್ಲಿ ಅಗತ್ಯ ಸಂಖ್ಯಾಬಲ ಇಲ್ಲ ಎಂಬುದನ್ನು ಪ್ರಧಾನಿ ವಾಜಪೇಯಿ ಒಪ್ಪಿಕೊಂಡರೆ, ಸರ್ಕಾರವನ್ನು ಸಾಧ್ಯವಾದಷ್ಟು ಬೇಗ ಪದಚ್ಯುತಗೊಳಿಸುವ ತನ್ನ ದೃಢ ನಿರ್ಧಾರವನ್ನು ಸಂಯುಕ್ತ ರಂಗ ಪುನರುಚ್ಚರಿಸಿದೆ.

ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ?

ನವದೆಹಲಿ, ಮೇ 27– ಕರ್ನಾಟಕದ ಹಣಕಾಸು ಸಚಿವ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗುವ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಮಾತುಕತೆ ನಡೆದಿದೆ.

ದೆಹಲಿ ಕರ್ನಾಟಕ ಭವನದಲ್ಲಿ ಇಂದು ತೀವ್ರ ರಾಜಕೀಯ ಚಟುವಟಿಕೆ. ನಾಳೆ ಎಚ್‌.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಗಳಾಗುವ ವಿಷಯ ಖಚಿತವಾಗುತ್ತಿದ್ದಂತೆಯೇ, ಚಿತ್ತವು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಕಡೆ ಹೊರಳಿತು. ಎಂ.ಪಿ.ಪ್ರಕಾಶ್‌ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT