ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಉಗ್ರರ ನೆಲೆಯತ್ತ ಮಿರೇಜ್–2000 ದಾಳಿ: ಅಪಾರ ಸಾವು– ನೋವು

Published 31 ಮೇ 2024, 23:41 IST
Last Updated 31 ಮೇ 2024, 23:41 IST
ಅಕ್ಷರ ಗಾತ್ರ

ಉಗ್ರರ ನೆಲೆಯತ್ತ ಮಿರೇಜ್–2000 ದಾಳಿ; ಅಪಾರ ಸಾವು– ನೋವು

ನವದೆಹಲಿ, ಮೇ 31 (ಪಿಟಿಐ)– ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನ ಬೆಂಬಲಿತ ಅತಿಕ್ರಮಣಕಾರರು ವಶಪಡಿಸಿಕೊಂಡಿರುವ ಪ್ರದೇಶಗಳ ಮೇಲೆ ಅತ್ಯಂತ ಹೆಚ್ಚಿನ ಸಾಮರ್ಥ್ಯದ ಮಿರೇಜ್–2000 ಸೇರಿದಂತೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಆರನೇ ದಿನವಾದ ಇಂದು ದಾಳಿ ನಡೆಸಿ ಅಪಾರ ಸಾವು–ನೋವು ಉಂಟು ಮಾಡಿದವು.

ಅತಿಕ್ರಮಣಕಾರರು ಎಲೆಕ್ಟ್ರಾನಿಕ್ ಸಮರಾಸ್ತ್ರ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ ಗಳನ್ನು ಹೊಂದಿರುವುದರಿಂದ ಮಿಗ್ ವಿಮಾನಗಳಿಗಿಂತ ರಾತ್ರಿ ಕಾರ್ಯಾಚರಣೆಯಲ್ಲಿ ಅನುಕೂಲವಾಗುವ ಫ್ರೆಂಚ್ ನಿರ್ಮಿತ ಮಿರೇಜ್–2000 ವಿಮಾನ ಬಳಸಲು ನಿರ್ಧರಿಸಲಾಯಿತು. ವಿಮಾನ ದಾಳಿ ರಾತ್ರಿಯಿಡೀ ಮುಂದುವರಿಯುತ್ತದೆ.

ಭಾರತೀಯ ಸೇನೆ ನಡೆಸಿದ ದಾಳಿಗೆ ಸತ್ತ ಉಗ್ರಗಾಮಿಗಳ ಸಂಖ್ಯೆ 400 ಆಗಿದೆ. ಭಾರತದ ಕಡೆಯಿಂದ ಸತ್ತವರ ಸಂಖ್ಯೆ ನಿನ್ನೆವರೆಗೆ 33 ಆಗಿದ್ದು, 130 ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT