ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ ಜೂನ್‌ 8, 1996

Last Updated 7 ಜೂನ್ 2021, 19:30 IST
ಅಕ್ಷರ ಗಾತ್ರ

ಪ್ರಧಾನಿಗೆ ದೂರು ಅತೃಪ್ತರ ತೀರ್ಮಾನ

ಬೆಂಗಳೂರು, ಜೂನ್‌ 7– ರಾಜ್ಯ ಜನತಾ ದಳದ ಕೆಲವು ‘ಭಿನ್ನಮತೀಯ’ ಶಾಸಕರು ಜೆ.ಎಚ್‌.ಪಟೇಲ್‌ ನೇತೃತ್ವದ ಸಂಪುಟ ರಚನೆ ಹಂತದಲ್ಲಿ ತಮಗಾಗಿರುವ ರಾಜಕೀಯ ಅನ್ಯಾಯಕ್ಕೆ ಪರಿಹಾರ ಕೋರಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನೇ ಭೇಟಿ ಮಾಡಿ ದೂರು ಸಲ್ಲಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಗಜಗಾತ್ರದ ಸಂಪುಟ ಪ್ರಾದೇಶಿಕ ಅಸಮತೋಲನದ ಅಪ್ಪಟ ನಿದರ್ಶನವಾಗಿದೆ. ದಳ ಶಾಸಕಾಂಗ ಪಕ್ಷದ ಪ್ರಾತಿನಿಧಿಕ ಸ್ವರೂಪವೂ ಈ ಸಂಪುಟಕ್ಕೆ ಇಲ್ಲ ಎಂದು ವಾದಿಸಿರುವ ಈ ‘ಭಿನ್ನಮತೀಯರು’ ಒಬ್ಬೊಬ್ಬರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುಂಚಿನ ನಿಲುವನ್ನು ಬದಲಾಯಿಸಿದ್ದು, ಇಲ್ಲಿ ಆಗಿರುವ ಅನ್ಯಾಯದತ್ತ ‘ದಿಲ್ಲಿ ದೊರೆಯ’
ಗಮನ ಸೆಳೆಯುವ ನಿರ್ಧಾರ ಕೈಗೊಂಡಿದ್ದಾರೆ.

ಭಾವನಾತ್ಮಕ ಉದ್ವೇಗಕ್ಕೆ ಒಳಗಾಗಿ ಅಥವಾ ಸಿಟ್ಟಿನ ಕೈಗೆ ಮನಸ್ಸನ್ನು ಕೊಟ್ಟು ವಿಧಾನ ಸಭೆಯಿಂದ ನಿರ್ಗಮಿಸಿದರೆ ಸರ್ಕಾರಕ್ಕೆ ಅಪಾಯ ತಟ್ಟಬಹುದು. ಸರ್ಕಾರ ಉರುಳಲೂಬಹುದು. ಆದರೆ ತಮ್ಮ ಉದ್ದೇಶ ಸರ್ಕಾರವನ್ನು ಉರುಳಿಸುವುದಲ್ಲ, ಬದಲಿಗೆ ಉಳಿಸುವುದು ಎಂದು ‘ಭಿನ್ನಮತೀಯ’ ಶಾಸಕರೊಬ್ಬರು ಪ್ರಜಾವಾಣಿಗೆ ವಿವರಿಸಿದರು.

ಕಲ್ಬುರ್ಗಿ ವಿ.ವಿ ನಾಮಕರಣ– ಮೂಡದ ಒಮ್ಮತ

ಬೆಂಗಳೂರು, ಜೂನ್‌ 7– ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪುನರ್‌ ನಾಮಕರಣ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ದಲಿತ ಸಂಘಟನೆಗಳು ಹಾಗೂ ಬಸವ ದಳದ ಮುಖಂಡರ ಜತೆಗೆ ಇಂದು ಇಲ್ಲಿ ಪ್ರತ್ಯೇಕವಾಗಿ ನಡೆಸಿದ ಚರ್ಚೆ ಫಲಕಾರಿಯಾಗಿದೆ ಅಂತಿಮ ನಿರ್ಧಾರಕ್ಕೆ ಬರಲು ಆಗಲಿಲ್ಲ.

ಗುಲ್ಬರ್ಗ ಪ್ರದೇಶ ಬಸವೇಶ್ವರರ ಕಾರ್ಯಕ್ಷೇತ್ರವಾಗಿದ್ದುದರಿಂದ ಈ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು ಎಂದು ಬಸವದಳ, ಈ ಪ್ರದೇಶದಲ್ಲಿ ದಲಿತರು, ಹಿಂದುಳಿದವರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಡಾ. ಅಂಬೇಡ್ಕರ್‌ ಹೆಸರಿಡಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಹಿಡಿದ ಪಟ್ಟು ಸಡಿಲಿಸಿದ್ದುದರಿಂದ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT