ಶನಿವಾರ, ಮೇ 21, 2022
25 °C

25 ವರ್ಷಗಳ ಹಿಂದೆ: ಬುಧವಾರ, ಜೂನ್‌ 6, 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 ವರ್ಷಗಳ ಹಿಂದೆ

ವಿಶ್ವಾಸಮತ: ನಿರ್ಣಯ ಮಂಡನೆ

ನವದೆಹಲಿ, ಜೂನ್ 11– ಲೋಕಸಭೆಯ ಮುಂದೆ ಇಂದು ವಿಶ್ವಾಸಮತ ಕೋರಿಕೆ ನಿರ್ಣಯವನ್ನು ಪ್ರಧಾನಿ ಎಚ್‌.ಡಿ. ದೇವೇಗೌಡ ಮಂಡಿಸಿದರು.

ಎರಡು ವರ್ಷಗಳ ಹಿಂದೆ ಈ ಸದನದ ಎಸ್‌ಜೆಪಿ ಸದಸ್ಯರಾಗಿ ಕೊನೆಯ ಸಾಲಿನಲ್ಲಿ ಒಬ್ಬಂಟಿಗರಾಗಿ ಕುಳಿತುಕೊಳ್ಳುತ್ತಿದ್ದ ಅವರನ್ನು, ಬದಲಾದ ರಾಜಕೀಯ ಪರಿಸ್ಥಿತಿಯು ಇಡೀ ಸದನ ಕುತೂಹಲದಿಂದ ನೋಡುವಂತೆ ಮಾಡಿತು.

ಅತೃಪ್ತ ಶಾಸಕರ ದಂಡು ದೆಹಲಿಗೆ

ಬೆಂಗಳೂರು, ಜೂನ್ 11– ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಕಳೆದ ವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ ನಂತರ ಬಂಡಾಯವೆದ್ದಿರುವ ಜನತಾ ದಳದ ಅತೃಪ್ತ ಶಾಸಕರು ಪ್ರಧಾನಿಯನ್ನ ಭೇಟಿ ಮಾಡಲು ಇಂದು ಸಂಜೆ ದೆಹಲಿಗೆ ತೆರಳಿದರು. ಈ ಮಧ್ಯೆ ಹಲವರು ಸಚಿವರೂ ದೆಹಲಿ ಸೇರಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು