ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ |ಬೆಲೆ ಏರಿಕೆಗೆ ಪ್ರತಿಭಟನೆ: ಬೆಂಬಲ ಮರುಪರಿಶೀಲನೆ–TDP ಬೆದರಿಕೆ

Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ, ಫೆ. 1 (ಪಿಟಿಐ)– ಪಡಿತರ ಅಕ್ಕಿ, ಸಕ್ಕರೆ, ಗೋಧಿ ಮತ್ತು ಯೂರಿಯ ಹಾಗೂ ಅಡುಗೆ ಅನಿಲದ ಬೆಲೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮಿತ್ರಪಕ್ಷಗಳಾದ ಅಣ್ಣಾಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್‌ ಕಟುವಾಗಿ ಟೀಕಿಸಿದ್ದರೆ, ಇನ್ನೊಂದು ಮಿತ್ರಪಕ್ಷ ತೆಲುಗುದೇಶಂ, ಸರ್ಕಾರದ ತಪ್ಪು ನೀತಿಯಿಂದಾಗಿ ಕಾಂಗ್ರೆಸ್‌ಗೆ ಬಲ ಹೆಚ್ಚುತ್ತಿದೆ ಎಂದು ಆರೋಪಿಸಿದೆ. ತಾನು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸುವುದಾಗಿ ಇಂದು ಪ್ರಕಟಿಸಿದೆ.

ವಾಜಪೇಯಿ ನೇತೃತ್ವದ ಸರ್ಕಾರದ ಉಳಿವಿಗೆ ಅಗತ್ಯವಾದ ಬಹುಮತವನ್ನು ಒದಗಿಸಿರುವ ತೆಲುಗುದೇಶಂ ಬೆಂಬಲ ವಾಪಸು ಪಡೆಯುವ ಸಾಧ್ಯತೆಯಿದೆ ಎನ್ನಲಾ ಗಿದ್ದು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದಾವೋಸ್‌ನಿಂದ ನಾಳೆ ವಾಪಸಾದ ನಂತರ ಈ ನಿರ್ಧಾರ ಆಗುವುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT