ಬಿ.ಇ.ಎಲ್ ಕಾರ್ಮಿಕರ ಗುಂಪುಗಳಲ್ಲಿ ಘರ್ಷಣೆ: 11 ಮಂದಿಗೆ ಗಾಯ
ಬೆಂಗಳೂರು, ಮಾರ್ಚ್ 12– ನಗರದ ಬಿ.ಇ.ಎಲ್. ಕಾರ್ಖಾನೆಯ ಎರಡು ಕಾರ್ಮಿಕ ಸಂಘಗಳ ಸದಸ್ಯರ ಮಧ್ಯೆ ಇಂದು ಎರಡು ಬಾರಿ ಘರ್ಷಣೆ ನಡೆದು ‘ಬಿ.ಇ.ಎಲ್ ಕಾರ್ಮಿಕ ಸಂಘ’ದ ಪ್ರಧಾನ ಕಾರ್ಯದರ್ಶಿಯವರೂ ಸೇರಿ 11 ಮಂದಿ ಗಾಯಗೊಂಡರು.
ಘಟನೆಯ ಬಗ್ಗೆ ವಿಧಾನಪರಿಷತ್ತಿನಲ್ಲಿ ಇಂದು ಹೇಳಿಕೆ ನೀಡಿದ ಕೈಗಾರಿಕಾ ಸಚಿವ ಎಸ್.ಎಂ. ಕೃಷ್ಣ ಅವರು, ತಲೆಗೆ ಗಾಯವಾಗಿರುವ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರನ್ ಎಂಬುವವರನ್ನು ಚಿಕಿತ್ಸೆಗಾಗಿ ಇ.ಎಸ್.ಐ ಆಸ್ಪತ್ರೆಗೆ ಸೇರಿಸಲಾಗಿದೆ ಎಂದರು.
***
ತುರ್ಕಿ ರಾಯಭಾರ ಕಚೇರಿ ಮುಂದೆ ಜನಸಂಘದ ಪ್ರದರ್ಶನ
ನವದೆಹಲಿ, ಮಾರ್ಚ್ 12– ತುರ್ಕಿಯ ರಾಯಭಾರ ಕಚೇರಿ ಮುಂದೆ ಇಂದು ಜನಸಂಘದ ನೂರಾರು ಕಾರ್ಯಕರ್ತರು ಪ್ರದರ್ಶನ ನಡೆಸಿ ಗೀತೆ, ಉಪನಿಷತ್ತುಗಳನ್ನು ತುರ್ಕಿಯಲ್ಲಿ ನಿಷೇಧಿಸಲಾಗಿರುವುದನ್ನು ಪ್ರತಿಭಟಿಸಿದರು. ನಿಷೇಧವನ್ನು ತೆಗೆದುಹಾಕಬೇಕೆಂದು ಒತ್ತಾಯಿಸುವ ಘೋಷಣೆಗಳನ್ನು ಪ್ರದರ್ಶನಕಾರರು ಕೂಗಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.