ಕಾವೇರಿ: ರಾಜ್ಯದ ಹಕ್ಕು ರಕ್ಷಿಸಲು ಪಂಚಾಯಿತಿಗೆ ಹೋಗಲು ಒತ್ತಾಯ
ಬೆಂಗಳೂರು, ಮಾರ್ಚ್ 12– ಕಾವೇರಿ ನೀರಿನಲ್ಲಿ ಮೈಸೂರು ರಾಜ್ಯದ ಹಕ್ಕನ್ನು ರಕ್ಷಿಸಲು ತತ್‌ಕ್ಷಣ ಪಂಚಾಯಿತಿಗೆ ಹೋಗಬೇಕೆಂದು ಇಂದು ವಿಧಾನಸಭೆಯಲ್ಲಿ ಸದಸ್ಯರು ಒತ್ತಾಯ ಸಲ್ಲಿಸಿದರು.

ಕೇಂದ್ರ ಮಂತ್ರಿ ಡಾ. ಕೆ.ಎಲ್.ರಾವ್ ಅವರು ಸಂಸತ್ತಿನಲ್ಲಿ ಮೈಸೂರು, ಹೇಮಾವತಿ ಮೊದಲಾದ ಯೋಜನೆಗಳನ್ನು ತತ್‌ಕ್ಷಣ ನಿಲ್ಲಿಸಬೇಕೆಂದು ಸಲಹೆ ಮಾಡಿದುದರ ಬಗ್ಗೆ ಎರಡೂವರೆ ಗಂಟೆಗಳ ವಿಶೇಷ ಸೂಚನೆಯನ್ನು ಹಲವು ಸದಸ್ಯರು ಮಂಡಿಸಿದರು. ಡಾ. ರಾವ್ ಮತ್ತು ಕೇಂದ್ರ ಸರ್ಕಾರದ ವರ್ತನೆಯನ್ನು ಕಟುವಾಗಿ ಟೀಕಿಸಿದರು.

‘ಭಾಷಾ ಆಧಾರದ ಮೇಲೆ ಗಡಿಗಳ ಪುನರ್‌ರಚನೆಯಿಂದ ಅನಾಹುತ’
ಬೆಂಗಳೂರು, ಮಾರ್ಚ್ 12– ರಾಜ್ಯಗಳ ಗಡಿಯನ್ನು ಭಾಷಾ ಆಧಾರದ ಮೇಲೆ ಪುನರ್‌ರಚಿಸುವುದು ತೀವ್ರ ಅನಾಹುತಕ್ಕೆ ಎಡೆಗೊಡುವುದೆಂದು ರಾಜ್ಯದ ನಾಲ್ಕು ಮಂದಿ ಹಿರಿಯರು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಮಾಜಿ ದಿವಾನರಾದ ಶ್ರೀ ಎನ್. ಮಾಧವರಾವ್, ಶ್ರೀ ಸಿ.ಎಸ್.ವೆಂಕಟಾಚಾರ್, ಡಾ. ಡಿ.ವಿ. ಗುಂಡಪ್ಪ ಮತ್ತು ಪಿ.ಕೋದಂಡರಾವ್ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.