ಶನಿವಾರ, ಮೇ 15, 2021
24 °C

50 ವರ್ಷಗಳ ಹಿಂದೆ: ಸೋಮವಾರ 12.4.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಪ್ಪಿಗಳ ವಿರುದ್ಧ ಗೋವೆ ಸ್ತ್ರೀಯರ ಮುಗಿದ ಯುದ್ಧ‌

ಪಣಜಿ, ಏ. 11– ಕಳೆದ ವರ್ಷ ‘ಹಿಪ್ಪಿ’ಗಳ ನಗ್ನತೆಯ ವಿರುದ್ಧ ಬಂಡಾಯವೆದ್ದಿದ್ದ ಗೋವೆಯ ಮಹಿಳೆಯರು ಈಗ ತಮ್ಮ ಹೋರಾಟವನ್ನು ಕೈಬಿಟ್ಟಿದ್ದಾರೆ. ಹಿಪ್ಪಿಗಳನ್ನು ಸರಿದಾರಿಗೆ ತರಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಈ ಮಹಿಳೆಯರು ಬಂದಿದ್ದಾರೆ.

ಗೋವೆಯು ಹಿಪ್ಪಿಗಳಿಗೆ ಇನ್ನೂ ಆಕರ್ಷಣೀಯ ಕ್ಷೇತ್ರವೇ ಆಗಿದೆ. ಆದರೆ, ಇಲ್ಲಿಗೆ ಹಿಪ್ಪಿಗಳ ವಲಸೆ ಕಳೆದ ವರ್ಷಕ್ಕಿಂತ ಈ ವರ್ಷ ಇಳಿಮುಖವಾಗಿದೆ. ಎರಡು ವರ್ಷಗಳ ಹಿಂದೆ ಇಲ್ಲಿಗೆ ಹಿಪ್ಪಿಗಳು ವಲಸೆ ಬರಲಾರಂಭಿಸಿದಾಗ ಅವರ ಬಗ್ಗೆ ಸ್ಥಳೀಯ ಜನರಿಗೆ ಇದ್ದ ಕುತೂಹಲ ಈಗ ಕಡಿಮೆಯಾಗುತ್ತಿದೆ.

ಕರಗ ಉತ್ಸವ ಹಠಾತ್ ವಾಪಸ್ ಮತ್ತೊಬ್ಬರು ಹೊತ್ತು ಮತ್ತೆ ಸಂಚಾರ

ಬೆಂಗಳೂರು, ಏ. 11– ರಾತ್ರಿ 1.45ರಲ್ಲಿ ಸಂಚಾರ ಪ್ರಾರಂಭಿಸಿದ ನಗರದ ಸುಪ್ರಸಿದ್ಧ ಕರಗವು ಸುಮಾರು 20 ನಿಮಿಷಗಳಲ್ಲೇ ಶ್ರೀ ಧರ್ಮರಾಯಸ್ವಾಮಿ ಗುಡಿಗೆ ಹಿಂದಿರುಗಿದ ಅಪೂರ್ವ ಘಟನೆ ನಡೆಯಿತು.

ಕಳೆದ ಎರಡು ವರ್ಷಗಳಿಂದ ಕರಗ ಹೊರುತ್ತಿರುವ ಶ್ರೀ ಬಾಲಪ್ಪನವರು ಈ ಸಾರಿಯೂ ಕರಗ ಹೊತ್ತಿದ್ದರು. ಉದ್ದೇಶಿಸಿದ್ದ ಪೂರ್ಣ ಸಂಚಾರದ ಮೊದಲೇ ಹಿಂದಿರುಗಲು ಅವರು ಸ್ವಲ್ಪ ಅಸ್ವಸ್ಥರಾದುದೇ ಕಾರಣ. ಬಳಿಕ ಘಂಟೆ ಪೂಜಾರಿ ಶ್ರೀ ವೆಂಕಟಸ್ವಾಮಿ ಅವರು ಆ ಕರಗವನ್ನು ಹೊತ್ತು ಸಂಚಾರ ಮುಂದುವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು