ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ 14.10.1971

Last Updated 13 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ ಸಮ್ಮೇಳನದಲ್ಲಿಘರ್ಷಣೆ, ಗೊಂದಲ

ಬೆಳಗಾವಿ, ಅ. 13– ಎರಡು ಗುಂಪುಗಳ ನಡುವೆ ನೇರ ಘರ್ಷಣೆ, ಘೋಷಣೆ, ಕೂಗಾಟ ಹಾಗೂ ಕೈಕೈ ಮಿಲಾಯಿಸಿ ಇಂದು ಮೈಸೂರು ಪ್ರದೇಶ ಆಡಳಿತ ಕಾಂಗ್ರೆಸ್ಸಿನ ರಾಜಕೀಯ ಸಮ್ಮೇಳನದಲ್ಲಿ ಸುಮಾರು ತೊಂಬತ್ತು ನಿಮಿಷ ತೀವ್ರ ಗೊಂದಲ ಉಂಟಾಯಿತು.

ಹಲವರಿಗೆ ಹೊಡೆತ ಬಿದ್ದು ತಳ್ಳಾಟ ಪ್ರಾರಂಭವಾದಾಗ ಪೊಲೀಸರು ಚಪ್ಪರಕ್ಕೆ ಪ್ರವೇಶಿಸಿ ಕೆಲವರನ್ನು ಓಡಿಸಿದರು.

ಗುಂಪು ಹತೋಟಿಗೆ ಬರದಿದ್ದಾಗಲಘು ಲಾಠಿ ಪ್ರಹಾರ ನಡೆಯಿತು.

ನಿನ್ನೆ ಮತ್ತು ಇಂದು ಬೆಳಿಗ್ಗೆ ಸುಸೂತ್ರವಾಗಿ ಸಾಗಿದ ಸಮ್ಮೇಳನದಲ್ಲಿ ನಿರ್ಣಯವೊಂದು ಆಸ್ಫೋಟನಕ್ಕೆ ಕಾರಣವಾಯಿತು.

ಮಧ್ಯದಲ್ಲಿ ಕೆಲವರು ಮಹಾಜನ್ ವರದಿ ಕಾರ್ಯಗತ ವಾಗಬೇಕೆಂದು ಘೋಷಣೆ ಕೂಗಿದರು. ವಿದ್ಯಾರ್ಥಿಗಳೂ ಘೋಷಣೆ ಹಾಕಲು ಆರಂಭಿಸಿದರು.

ಮಧ್ಯೆ ‘ಕರ್ನಾಟಕ’ ಹೆಸರಿನ ಬಗೆಗೆ ಕೂಗಾಟ ನಡೆಯಿತು. ಈ ರೀತಿ ನಾನಾ ವರ್ಗಗಳ ಮಿಶ್ರಣ ಹಲವಾರು ಬಾರಿ ಗೊಂದಲ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT